Advertisement

‘ಕೈ’ಗೆ ಅಧಿಕಾರ ಕೊಟ್ಟರೆ ವರ್ಷಕ್ಕೆ 72 ಸಾವಿರ ನಿಮ್ಮ ಅಕೌಂಟಿಗೆ ಜಮೆ!

09:53 AM Mar 26, 2019 | Hari Prasad |

ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೇರಿದರೆ ದೇಶದ ಕಡು ಬಡ ಕುಟುಂಬಗಳಿಗೆ ವಾರ್ಷಿಕ 72ಸಾವಿರ ರೂಪಾಯಿಗಳನ್ನು ಅವರ ಅಕೌಂಟಿಗೆ ಜಮಾ ಮಾಡುವ ವಿನೂತನ ಆಶ್ವಾಸನೆಯೊಂದನ್ನು ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಮಾಡಿದ್ದಾರೆ. ಆ ಮೂಲಕ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಗಾ ಅವರು ದೇಶದ ಬಡವರ್ಗದ ಮತದಾರರನ್ನು ಓಲೈಸುವ ಕಾರ್ಯತಂತ್ರಕ್ಕೆ ಕೈ ಹಾಕಿದ್ದಾರೆ.

Advertisement

ಪಕ್ಷದ ಕಾರ್ಯಕಾರಿ ಸಮಿತಿ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ರಾಹುಲ್‌ ಗಾಂಧಿ ಅವರು ಈ ವಿಚಾರವನ್ನು ಬಹಿರಂಗಪಡಿಸಿದರು. ‘ಈ ದೇಶದ ಬಡವರ ಕುರಿತಾಗಿ ನಮ್ಮ ಪಕ್ಷಕ್ಕೆ ಅತೀವ ಕಾಳಜಿ ಇದ್ದು ಅವರ ಸಮಸ್ಯೆಗಳನ್ನು ನಿವಾರಿಸಲು ನಾವು ಬಹುವಿಧ ಕಾರ್ಯಕ್ರಮಗಳನ್ನು ರೂಪಿಸಿದ್ದೇವೆ’ ಎಂದು ಅವರು ಹೇಳಿದರು. ಮತ್ತೆ ಮುಂದುವರೆದು ‘ಕನಿಷ್ಠ ತಲಾ ಆದಾಯ ಯೋಜನೆಯಡಿಯಲ್ಲಿ ವರ್ಷಕ್ಕೆ 72,000 ರೂಪಾಯಿಗಳನ್ನು ಈ ದೇಶದಲ್ಲಿರುವ 20% ಕಡು ಬಡ ಕುಟುಂಬಗಳ ಬ್ಯಾಂಕ್‌ ಅಕೌಂಟ್‌ ಗಳಿಗೆ ಜಮಾ ಮಾಡಲಾಗುವುದು’ ಎಂಬ ಆಶ್ವಾಸನೆಯನ್ನು ರಾಹುಲ್‌ ಗಾಂಧಿ ಅವರು ತಮ್ಮ ಪಕ್ಷದ ಪರವಾಗಿ ನೀಡಿದರು. ಈ ಯೋಜನೆ ಜಾರಿಗೆ ಸಂಬಂಧಿಸಿದಂತೆ ಎಲ್ಲಾ ಲೆಕ್ಕಾಚಾರಗಳನ್ನೂ ನಾವು ಮಾಡಿದ್ದೇವೆ. ಪ್ರಪಂಚದ ಯಾವುದೇ ದೇಶದಲ್ಲಿ ಈ ರೀತಿಯ ಯೋಜನೆ ಇಲ್ಲ ಎಂದು ಕಾಂಗ್ರೆಸ್‌ ಅಧ್ಯಕ್ಷ ಹೇಳಿದರು.

ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಟೀಕಾಪ್ರಹಾರವನ್ನು ಮುಂದುವರೆಸಿದ ರಾಹುಲ್‌ ಗಾಂಧಿ ಅವರು, ‘ಮೋದಿ ಈ ದೇಶದ ಶ್ರೀಮಂತರಿಗೆ ಹಣ ನೀಡಬಹುದಾದರೆ, ನಾವೂ ಸಹ ಈ ದೇಶದ ಬಡವರಿಗೆ ಹಣ ನೀಡಬಹುದು. ಈ ನಮ್ಮ ಹೊಸ ಯೋಜನೆಯಿಂದ 5 ಕೋಟಿ ಕುಟುಂಬಗಳಲ್ಲಿರುವ 25 ಕೋಟಿ ಜನರಿಗೆ ಸಹಾಯವಾಗಲಿದೆ. ಮತ್ತು ತಿಂಗಳಿಗೆ 12,000 ಕ್ಕಿಂತ ಕಡಿಮೆ ಆದಾಯವಿರುವ ಕುಟುಂಬಗಳಿಗಾಗಿ ಈ ಯೋಜನೆಯನ್ನು ರೂಪಿಸಲಾಗಿದೆ’ ಎಂದು ರಾಹುಲ್‌ ಗಾಂಧಿ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next