Advertisement

ಸುಪ್ರೀಂ ನೊಟೀಸ್‌ಗೆ ಉತ್ತರ: ಚೌಕೀದಾರ್‌ ಹೇಳಿಕೆಗೆ ರಾಹುಲ್‌ ವಿಷಾದ, ಕ್ಷಮೆ ಯಾಚನೆ ಇಲ್ಲ

08:38 AM Apr 30, 2019 | Sathish malya |

ಹೊಸದಿಲ್ಲಿ : ರಫೇಲ್‌ ತೀರ್ಪು ಕುರಿತ ತನ್ನ ಹೇಳಿಕೆಗಾಗಿ ನ್ಯಾಯಾಂಗ ನಿಂದನೆ ಕೇಸಿಗೆ ಗುರಿಯಾಗಿ ಸುಪ್ರೀಂ ಕೋರ್ಟ್‌ ನೊಟೀಸಿಗೆ ಇಂದು ಉತ್ತರ ಸಲ್ಲಿಸಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಚೌಕೀದಾರ್‌ ಚೋರ್‌ ಹೈ ಎಂಬ ತನ್ನ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದಾರೆ; ಆದರೆ ಅದಕ್ಕಾಗಿ ಕ್ಷಮೆಯಾಚಿಸಿಲ್ಲ.

Advertisement

‘ಚೌಕೀದಾರ್‌ ಚೋರ್‌ ಹೈ ಎಂದು ಸುಪ್ರೀಂ ಕೋರ್ಟ್‌ ಕೂಡ ತನ್ನ ತೀರ್ಪಿನಲ್ಲಿ ಹೇಳಿದೆ’ ಎಂಬ ತನ್ನ ಪ್ರಮಾದಯುಕ್ತ ಹೇಳಿಕೆಯಲ್ಲಿ ಸರ್ವೋಚ್ಚ ನ್ಯಾಯಾಲಯದ ಘನತೆ-ಗೌರವವನ್ನು ಕುಂದಿಸುವ ಅಥವಾ ಅದನ್ನು ರಾಜಕೀಯ ಕದನಕ್ಕೆ ಎಳೆದು ತರುವ ಕಿಂಚಿತ್‌ ದುರುದ್ದೇಶ‌ವಾಗಲೀ, ಹಂಬಲವಾಗಲೀ ಅಥವಾ ಆ ರೀತಿಯ ಆಲೋಚನೆಯಾಗಲೀ ತನಗಿರಲಿಲ್ಲ ಎಂದು ರಾಹುಲ್‌ ಗಾಂಧಿ ತನ್ನ ಲಿಖೀತ ಉತ್ತರದಲ್ಲಿ ಹೇಳಿದ್ದಾರೆ.

ರಫೇಲ್‌ ಕುರಿತಾದ ಸಂಕ್ಷಿಪ್ತ ಹೇಳಿಕೆಯನ್ನು ಮಾಧ್ಯಮದವರಿಗೆ ನೀಡುವ ಮುನ್ನ ತಾನು ಬಿರುಸಿನ ಚುನಾವಣಾ ಪ್ರಚಾರಾಭಿಯಾನದಲ್ಲಿ ತೊಡಗಿಕೊಂಡಿದ್ದ  ಆ ಸಂದರ್ಭದಲ್ಲಿ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಕಂಡದ್ದಾಗಲೀ, ಓದಿದ್ದಾಗಲೀ, ವಿಶ್ಲೇಷಿಸಿದ್ದಾಗಲೀ ಇಲ್ಲ ಎಂದು ರಾಹುಲ್‌ ತಮ್ಮ ಉತ್ತರದಲ್ಲಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next