Advertisement

ಅಮೇಠಿಗೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಎರಡು ದಿನಗಳ ಭೇಟಿ

06:06 AM Jan 23, 2019 | Team Udayavani |

ಹೊಸದಿಲ್ಲಿ : ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಇಂದು ಬುಧವಾರದಿಂದ ತೊಡಗಿ ಎರಡು ದಿನಗಳ ಕಾಲ ತಮ್ಮ ಲೋಕಸಭಾ ಕ್ಷೇತ್ರವಾಗಿರುವ ಅಮೇಠಿಗೆ ಭೇಟಿ ಕೊಡುತ್ತಿದ್ದಾರೆ.

Advertisement

ತನ್ನ ಈ ಭೇಟಿಯಲ್ಲಿ ತಾನು ತನ್ನ ಕ್ಷೇತ್ರದ ಜನರನ್ನು ಭೇಟಿಯಾಗಿ ಅವರ ಸಮಸ್ಯೆಗಳನ್ನು ಚರ್ಚಿಸುವುದಾಗಿ ರಾಹುಲ್‌ ಹೇಳಿದ್ದಾರೆ. 

ಈ ಬಗ್ಗೆ ಫೇಸ್‌ ಬುಕ್‌ನಲ್ಲಿ  ಪೋಸ್ಟ್‌ ಹಾಕಿರುವ ರಾಹುಲ್‌, “ನಾನು ಅಮೇಠಿಗೆ ಬರುತ್ತಿದ್ದೇನೆ; ನನ್ನ ಸಂತಸವನ್ನು ಜನರೊಂದಿಗೆ ಹಂಚಿಕೊಂಡು ಅವರ ಸುಖ ದುಃಖಗಳನ್ನು ಚರ್ಚಿಸಲಿದ್ದೇನೆ; ನನ್ನ ಭೇಟಿ ವಿವರಗಳನ್ನು ಸಚಿತ್ರವಾಗಿ ನಿಮಗೆ ತಿಳಿಸಲಿದ್ದೇನೆ’ ಎಂದು ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next