Advertisement

2019ರಲ್ಲಿ ಕಾಂಗ್ರೆಸ್ ಗೆ 20 ಸ್ಥಾನ, ರಾಹುಲ್ ನಾಯಕನೇ ಅಲ್ಲ; ರಾಣೆ

03:07 PM Apr 10, 2017 | Sharanya Alva |

ನವದೆಹಲಿ:ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಗಂಭೀರತೆ ಇಲ್ಲದ ನಾಯಕ. ಅಷ್ಟೇ ಅಲ್ಲ ರಾಹುಲ್ ಭೇಟಿ ಕೂಡಾ ಅಸಾಧ್ಯ. ಹಾಗಾಗಿ ನೂರಾರು ವರ್ಷಗಳ ಇತಿಹಾಸ ಇರುವ ಕಾಂಗ್ರೆಸ್ ಪಕ್ಷ ರಾಹುಲ್ ನಾಯಕತ್ವದಲ್ಲಿ 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಕೇವಲ 20 ಸ್ಥಾನ ಗಳಿಸಲಿದೆ ಎಂದು ಇತ್ತೀಚೆಗಷ್ಟೇ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡಿರುವ ವಿಶ್ವಜಿತ್ ರಾಣೆ ಭವಿಷ್ಯ ನುಡಿದಿದ್ದಾರೆ.

Advertisement

ಕಾಂಗ್ರೆಸ್ ಪಕ್ಷದಲ್ಲಿ ಗಂಭೀರತೆ ಇಲ್ಲದ ನಾಯಕರೊಬ್ಬರಿದ್ದಾರೆ. ಆ ನಾಯಕನೇ ರಾಹುಲ್ ಗಾಂಧಿ, ರಾಹುಲ್ ಗೆ ರಾಜ್ಯದ ಜನತೆ ಬಹುಮತ ಕೊಟ್ಟಿದ್ದರೂ ಕೂಡಾ, ಸರ್ಕಾರ ರಚಿಸುವ ಬಗ್ಗೆಯೂ ತಲೆಕೆಡಿಸಿಕೊಂಡಿಲ್ಲ ಎಂದು ಗೋವಾದ ಮಾಜಿ ಮುಖ್ಯಮಂತ್ರಿ ಪ್ರತಾಪ್ ಸಿನ್ನಾ ರಾಣೆ ಪುತ್ರ ಐಎಎನ್ ಎಸ್ ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next