Advertisement
ರಾಹುಲ್ ಗಾಂಧಿ ಅಮೆರಿಕದಲ್ಲಿ ಸಂಸದರಾದ ಬ್ರಾಡ್ಲೈ ಜೇಮ್ಸ್ ಶೆರ್ಮಾನ್, ಜೋನಾಥನ್ ಜಾಕ್ಸನ್, ರೋ ಖನ್ನಾ, ರಾಜಾ ಕೃಷ್ಣಮೂರ್ತಿ, ಬಾರ್ಬರಾ ಲೀ, ಶ್ರೀ ಥಾಣೆದಾರ್, ಜೇಸಸ್ ಜಿ ಚುಯಾ ಗಾರ್ಸಿಯಾ, ಇಲ್ಹಾನ್ ಓಮರ್, ಹಾಂಕ್ ಜಾನ್ಸನ್ ಸೇರಿದಂತೆ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಇಲ್ಹಾನ್ ಓಮರ್ ತನ್ನ ಭಾರತ ವಿರೋಧಿ ನಿಲುವಿನಿಂದಲೇ ಪ್ರಚಾರದಲ್ಲಿದ್ದು, ಓಮರ್ ಮಿನ್ನೆಸೋಟಾದ 5ನೇ Congressional ಜಿಲ್ಲೆಯ ಅಮೆರಿಕದ ಜನಪ್ರತಿನಿಧಿಯಾಗಿದ್ದಾರೆ. 2019ರಿಂದ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಇಲ್ಹಾನ್, ಅಮೆರಿಕ ಸಂಸತ್ ಪ್ರವೇಶಿಸಿದ ಮೊದಲ ಆಫ್ರಿಕನ್ ನಿರಾಶ್ರಿತೆ. ಇಲ್ಹಾನ್ ಸೋಮಾಲಿಯಾದಲ್ಲಿ ಜನಿಸಿದ್ದು, ಆಕೆಯ ಕುಟುಂಬ ಸದಸ್ಯರು ಮತ್ತು 8ವರ್ಷದ ಇಲ್ಹಾನ್ ಸೋಮಾಲಿಯಾದಲ್ಲಿನ ನಾಗರಿಕ ದಂಗೆ ಬಳಿಕ ದೇಶ ತೊರೆದಿದ್ದರು.
Related Articles
Advertisement
ಸಿಖ್ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜಾರ್ ಹ*ತ್ಯೆ ಪ್ರಕರಣದಲ್ಲಿ ಭಾರತ ಮತ್ತು ಕೆನಡಾ ನಡುವೆ ರಾಯಭಾರಿ ಘರ್ಷಣೆ ಏರ್ಪಟ್ಟಾಗ, ಭಾರತದ ವಿರುದ್ಧದ ಕೆನಡಾ ತನಿಖೆಗೆ ಅಮೆರಿಕ ಪೂರ್ಣ ಪ್ರಮಾಣದಲ್ಲಿ ಬೆಂಬಲ ನೀಡಬೇಕು ಎಂದು ಇಲ್ಹಾನ್ ಓಮರ್ ಭಾರತ ವಿರೋಧಿ ಧೋರಣೆ ಪ್ರದರ್ಶಿಸಿದ್ದಳು.