Advertisement

ಮಾನಸ ಸರೋವರ ಯಾತ್ರೆಗೆ “ಶಿವಭಕ್ತ’ರಾಹುಲ್‌ 

10:22 AM Aug 30, 2018 | Team Udayavani |

ಹೊಸದಿಲ್ಲಿ: ಲೋಕಸಭೆ ಮತ್ತು ಮೂರು ರಾಜ್ಯಗಳ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರು ವಂತೆಯೇ “ಶಿವ ಭಕ್ತ’ ರಾಹುಲ್‌ ಗಾಂಧಿ ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಳ್ಳಲಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಇದೇ 31ರಂದು ರಾಹುಲ್‌ ಯಾತ್ರೆ ಆರಂಭಿಸುತ್ತಾರೆ ಎಂದು ಹೇಳಲಾಗಿದೆ.

Advertisement

ಇತ್ತೀಚೆಗೆ ರಾಮಲೀಲಾ ಮೈದಾನದಲ್ಲಿ ನಡೆದ “ಜನ್‌ ಆಕ್ರೋಶ್‌’ ರ್ಯಾಲಿಯಲ್ಲಿ ಮಾತನಾಡಿದ್ದ ರಾಹುಲ್‌, ಕರ್ನಾಟಕ ವಿಧಾನಸಭೆ ಚುನಾವಣೆ ವೇಳೆ ನಾನು ಸಂಚರಿಸುತ್ತಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದಿತ್ತು. ಆ ಸಮಯದಲ್ಲಿ ನಾನು ಕೈಲಾಸ ಮಾನಸಸರೋವರ ಯಾತ್ರೆ ಕೈಗೊಳ್ಳುವುದಾಗಿ ಹರಕೆ ಮಾಡಿಕೊಂಡಿದ್ದೆ. ಸದ್ಯದಲ್ಲೇ ಯಾತ್ರೆ ಕೈಗೊಳ್ಳುತ್ತೇನೆ ಎಂದು ಹೇಳಿದ್ದರು. 

ಇಷ್ಟು ದಿನ ಸಮಯ ಹೊಂದಿಸಲಾಗದ ರಾಹುಲ್‌ ಗಾಂಧಿ ಅಂತೂ ಈಗ ದಿನಾಂಕ ನಿಗದಿಗೊಳಿಸಿದಂತಿದೆ. ರಾಹುಲ್‌ ಗಾಂಧಿ ಕಚೇರಿ ಯಾತ್ರೆಯ ಬಗ್ಗೆ ವಿದೇಶಾಂಗ ಇಲಾಖೆಗೆ ಮನವಿ ಸಲ್ಲಿಸಿದೆ. ಆ.31ರಂದು ಹೊಸದಿಲ್ಲಿಯಿಂದ ಹೊರಡಲಿದ್ದಾರೆ. ನೇಪಾಲ ಮೂಲಕವಾಗಿ ಯಾತ್ರೆ ಕೈಗೊಳ್ಳಲಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next