Advertisement

ರಾಹುಲ್‌ ಗಾಂಧಿಗೆ ಇನ್ನೂ ಟೈಮ್‌ ಬೇಕು: ಶೀಲಾ ದೀಕ್ಷಿತ್‌

03:50 AM Feb 25, 2017 | Team Udayavani |

ಹೊಸದಿಲ್ಲಿ: ಬೃಹನ್ಮುಂಬಯಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್‌ ಹೀನಾಯ ಸೋಲು ಅನುಭವಿಸಿದ್ದು ಒಂದೆಡೆಯಾದರೆ, ದಿಲ್ಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್‌ ಪಕ್ಷದ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅನನುಭವಿ. ರಾಜಕೀಯವಾಗಿ ಪ್ರೌಢಿಮೆ ಸಾಧಿಸಲು ಇನ್ನಷ್ಟು ಅವಕಾಶ ನೀಡಬೇಕು ಎಂದು ಹೇಳಿದ್ದಾರೆ. ಶೀಲಾ ದೀಕ್ಷಿತ್‌ರ ಈ ಮಾತು ಕಾಂಗ್ರೆಸ್‌ಗೆ ಇರಿಸು ಮುರಿಸು ತಂದಿಟ್ಟಿದೆ. ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಕಾಂಗ್ರೆಸ್‌ನ ಹಿರಿಯ ನಾಯಕಿ ಶೀಲಾ ದೀಕ್ಷಿತ್‌ ಕಾಂಗ್ರೆಸ್‌ ಭಾರಿ ಬದಲಾವಣೆಗೆ ಒಳಗಾಗುತ್ತಿದೆ. ರಾಹುಲ್‌ ಗಾಂಧಿಯವರನ್ನು ಸಮರ್ಥಿಸಿಕೊಂಡು ಮಾತನಾಡಿದ ದಿಲ್ಲಿಯ ಮಾಜಿ ಸಿಎಂ “ರಾಹುಲ್‌ ಗಾಂಧಿ ಪ್ರಧಾನಮಂತ್ರಿಯಾಗಿಲ್ಲ. ಅವರಿಗೆ ಇನ್ನೂ ಅವಕಾಶ ಸಿಕ್ಕಿಲ್ಲ. ಮುಂದಿನ ದಿನಗಳಲ್ಲಿ ಅಂಥ ಅವಕಾಶಗಳು ಬರಬಹುದು ಎಂದು ಹೇಳಿದ್ದಾರೆ. ರಾಹುಲ್‌ ಗಾಂಧಿ ಪಕ್ಷಕ್ಕೆ ಸಂಬಂಧಿಸಿದ ಸಭೆಗಳಲ್ಲಿ ಭಾಗವಹಿಸಿ ಮಾತನಾಡುತ್ತಿದ್ದಾರೆ. ಅವರು ಇನ್ನೂ 40ರ ಆಸುಪಾಸಿನಲ್ಲಿದ್ದಾರೆ. ಅವರ ವಯಸ್ಸು ಪ್ರೌಢಿಮೆಯಿಂದ ವರ್ತಿಸಲು ಅವಕಾಶ ನೀಡುತ್ತಿಲ್ಲ’ ಎಂದು ಶೀಲಾ ದೀಕ್ಷಿತ್‌ ಸಂದರ್ಶನದಲ್ಲಿ ಹೇಳಿದ್ದಾರೆ. 

Advertisement

ದೀಕ್ಷಿತ್‌ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಜನರಿಗೆ ಗೊತ್ತಿರುವ ವಿಚಾರವನ್ನೇ ದಿಲ್ಲಿ ಮಾಜಿ ಸಿಎಂ ಹೇಳಿದ್ದಾರೆಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್‌ ಪ್ರತಿಕ್ರಿಯೆ ನೀಡಿದ್ದಾರೆ. “ವಿಳಂಬವಾದರೂ ಅಂಥ ಹೇಳಿಕೆ ಬಂದಿರುವುದಕ್ಕೆ ಧನ್ಯವಾದ ಸಮರ್ಪಿಸಬೇಕು ಎಂದವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next