ಹೊಸದಿಲ್ಲಿ: ಇತ್ತೀಚೆಗೆ ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡು ಗಮನ ಸೆಳೆದಿದ್ದ ಆರ್ಥಿಕ ತಜ್ಞ ಮತ್ತು ಮಾಜಿ ಆರ್ ಬಿಐ ಗವರ್ನರ್ ರಘುರಾಮ್ ರಾಜನ್ ಅವರು ಇದೀಗ ರಾಹುಲ್ ಗಾಂಧಿ ಕುರಿತಾಗಿ ಮಾತನಾಡಿದ್ದಾರೆ.
ಖಾಸಗಿ ಟಿವಿ ಸುದ್ದಿ ವಾಹಿನಿಯೊಂದಕ್ಕೆ ಮಾತನಾಡಿದ ಮಾಜಿ ಆರ್‌ಬಿಐ ಗವರ್ನರ್, ರಾಹುಲ್ ಗಾಂಧಿ ‘ಪಪ್ಪು’ ಅಲ್ಲ, ಅವರು ನಿಜವಾಗಿಯೂ ಬುದ್ಧಿವಂತ ವ್ಯಕ್ತಿ. ಅವರನ್ನು ‘ಪಪ್ಪು’ ಎಂದು ಲೇಬಲ್ ಮಾಡುತ್ತಿರುವುದು ದುರದೃಷ್ಟಕರ ಎಂದು ಹೇಳಿದ್ದಾರೆ.
ದಾವೋಸ್ ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯ ನೇಪಥ್ಯದಲ್ಲಿ ರಾಜನ್ ಮಾತನಾಡುತ್ತಾ, ನಾನು ರಾಹುಲ್ ಗಾಂಧಿಯವರೊಂದಿಗೆ ಹಲವು ವರ್ಷಗಳಿಂದ ನಿಕಟವಾಗಿ ಕೆಲಸ ಮಾಡಿದ್ದೇನೆ. ಅವರೊಂದಿಗಿನ ಅವರ ಸಂವಹನದ ಆಧಾರದ ಮೇಲೆ ರಾಹುಲ್ ಗಾಂಧಿ ‘ಪಪ್ಪು’ ಅಲ್ಲ ಎಂದು ನನಗೆ ತಿಳಿದಿದೆ ಎಂದು ಹೇಳಿದರು.
ಇದನ್ನೂ ಓದಿ:ಕೊನೆಯ ಕ್ಷಣದಲ್ಲಿ ಬ್ರೇಸ್ ವೆಲ್ ವಿಕೆಟ್ ಪಡೆಯಲು ಸಹಾಯವಾಗಿದ್ದು ವಿರಾಟ್ ಸಲಹೆ: ಶಾರ್ದೂಲ್
ರಾಹುಲ್ ಗಾಂಧಿ ಅವರಿಗೆ ತಮ್ಮ ಆದ್ಯತೆಗಳು ಯಾವುವು ಮತ್ತು ಅವರ ಸಾಮರ್ಥ್ಯ ಏನು ಎಂಬುದು ಸ್ಪಷ್ಟವಾಗಿ ತಿಳಿದಿದೆ ಎಂದು ಮಾಜಿ ಆರ್‌ಬಿಐ ಗವರ್ನರ್ ಹೇಳಿದ್ದಾರೆ. ರಾಹುಲ್ ಗಾಂಧಿ ಅವರೊಂದಿಗೆ ಯಾಕೆ ಪಾದಯಾತ್ರೆಯಲ್ಲಿ ಭಾಗವಹಿಸಿದೆ ಎಂದು ವಿವರಿಸಿದ ರಾಜನ್, ಭಾರತ್ ಜೋಡೋ ಯಾತ್ರೆಯ ಮೌಲ್ಯಗಳ ಪರವಾಗಿ ನಾನು ನಿಂತಿದ್ದೇನೆ ಎಂದು ಹೇಳಿದರು.
ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡುವಂತೆ ಮಾತನಾಡಿದ ರಾಜನ್, 2023 ಭಾರತೀಯ ಆರ್ಥಿಕತೆಗೆ ಮತ್ತು ಪ್ರಪಂಚದ ಇತರ ಭಾಗಗಳಿಗೆ ಕಷ್ಟಕರವಾಗಿರುತ್ತದೆ. ದೇಶವು ಬೆಳವಣಿಗೆಗೆ ಅಗತ್ಯವಾದ ಸುಧಾರಣೆಗಳನ್ನು ರಚಿಸಲು ವಿಫಲವಾಗಿದೆ ಎಂದರು.