Advertisement

PM ಮೋದಿ ವಿರುದ್ಧ ಪನೌತಿ ಪದ ಬಳಕೆ:ರಾಹುಲ್ ಗಾಂಧಿಗೆ ಚುನಾವಣ ಆಯೋಗ ನೋಟಿಸ್

07:14 PM Nov 23, 2023 | Vishnudas Patil |

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ‘ಪನೌತಿ’ ಮತ್ತು ‘ಜೇಬ್‌ಕತ್ರಾ’ ಎಂದು ಟೀಕೆಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ, ವಯನಾಡ್ ಸಂಸದ ರಾಹುಲ್ ಗಾಂಧಿ ಅವರಿಗೆ ಚುನಾವಣ ಆಯೋಗ ಗುರುವಾರ ನೋಟಿಸ್ ನೀಡಿದೆ.

Advertisement

ಬಿಜೆಪಿ ಚುನಾವಣಾ ಸಂಸ್ಥೆಗೆ ದೂರು ನೀಡಿದ ಒಂದು ದಿನದ ನಂತರ ನೋಟಿಸ್ ಬಂದಿದೆ. ಶುಕ್ರವಾರ ಸಂಜೆ 6 ಗಂಟೆಯೊಳಗೆ ಉತ್ತರ ನೀಡುವಂತೆ ರಾಹುಲ್ ಗಾಂಧಿ ಅವರಿಗೆ ಆಯೋಗ ಸೂಚಿಸಿದ್ದು, ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ನಿಮ್ಮ ವಿರುದ್ಧ ಏಕೆ ಕ್ರಮ ಕೈಗೊಳ್ಳಬಾರದು ಎಂದು ಪ್ರಶ್ನಿಸಿದೆ.

ಪಾನೌತಿ ಎಂಬ ಪದ ‘ತನ್ನ ಸುತ್ತಲಿನ ಜನರಿಗೆ ದುರದೃಷ್ಟ ಅಥವಾ ಕೆಟ್ಟ ಸುದ್ದಿಯನ್ನು ತರುವ ವ್ಯಕ್ತಿ’ ಎಂಬ ಅರ್ಥ ನೀಡುತ್ತದೆ. ಜೇಬ್‌ಕತ್ರಾ ಎಂದರೆ ಜೇಬುಗಳಿಗೆ ಕತ್ತರಿ ಹಾಕುವವನು ಪಿಕ್ ಪಾಕೇಟರ್ ಎಂಬ ಅರ್ಥ ನೀಡುತ್ತದೆ.

ರಾಜಸ್ಥಾನದಲ್ಲಿ ನಡೆದ ಚುನಾವಣ ಪ್ರಚಾರ ಸಭೆಯಲ್ಲಿ ರಾಹುಲ್ ಗಾಂಧಿ ಅವರು ಪ್ರಧಾನಿ ಮೋದಿಯವರ ವಿರುದ್ಧ ಎರಡು ಪದಗಳನ್ನು ಬಳಸುವ ಮೂಲಕ ಗೇಲಿ ಮಾಡಿ, ಅವರ ಹೋದ ಕಾರಣ ಆಸ್ಟ್ರೇಲಿಯ ವಿರುದ್ಧ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ಸೋಲುವಂತೆ ಆಯಿತು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next