Advertisement

ರಾಹುಲ್ ಗಾಂಧಿಗೆ ಸಿಕ್ಕಿತು ಜಾಮೀನು

01:00 AM Jul 13, 2019 | Team Udayavani |

ಅಹಮದಾಬಾದ್‌: ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅಧ್ಯಕ್ಷರಾಗಿರುವ ಅಹಮದಾಬಾದ್‌ ಜಿಲ್ಲಾ ಸಹಕಾರಿ ಬ್ಯಾಂಕ್‌ನಲ್ಲಿ ನೋಟು ಅಮಾನ್ಯದ ವೇಳೆ 750 ಕೋಟಿ ರೂ. ಅವ್ಯವಹಾರ ಆಗಿದೆ ಎಂದು ಹೇಳಿಕೆ ನೀಡಿದ್ದ ಪ್ರಕರಣದಲ್ಲಿ ಕಾಂಗ್ರೆಸ್‌ ಮುಖಂಡ ಅಧ್ಯಕ್ಷ ರಾಹುಲ್ ಗಾಂಧಿಗೆ ಜಾಮೀನು ನೀಡಲಾಗಿದೆ. ಜಿಲ್ಲಾ ಸಹಕಾರ ಬ್ಯಾಂಕ್‌ ಮಾನಹಾನಿ ಖಟ್ಲೆ ಹೂಡಿತ್ತು.

Advertisement

ಶುಕ್ರವಾರ ಕೋರ್ಟ್‌ಗೆ ಹಾಜರಾದ ಕಾಂಗ್ರೆಸ್‌ ನಾಯಕ ತಮ್ಮ ಮೇಲಿನ ಆರೋಪ ನಿರಾಕರಿಸಿದರು. ವಾದ ಆಲಿಸಿದ ನ್ಯಾ. ಬಿ ಮುನ್ಶಿ ಜಾಮೀನು ಮಂಜೂರು ಮಾಡಿದ್ದಾರೆ. ಬಳಿಕ ಮಾತನಾಡಿದ ರಾಹುಲ್, ಜನರ ಬಳಿಗೆ ಸೈದ್ಧಾಂತಿಕ ಹೋರಾಟವನ್ನು ಕೊಂಡೊಯ್ಯಲು ಬಿಜೆಪಿ ಮತ್ತು ಆರ್‌ಎಸ್‌ಎಸ್‌ ನೆರವಾಗಿದೆ. ಅದಕ್ಕಾಗಿ ಧನ್ಯವಾದಗಳು ಎಂದಿದ್ದಾರೆ.

ಏಪ್ರಿಲ್ 9 ರಂದು ರಾಹುಲ್ ವಿರುದ್ಧ ಸಮನ್ಸ್‌ ಹೊರಡಿಸಿತ್ತು. ಅದಕ್ಕೂ ಮುನ್ನ ಕೋರ್ಟ್‌ ಪ್ರಾಥಮಿಕ ವಿಚಾರಣೆ ನಡೆಸಿ, ರಾಹುಲ್ ವಿರುದ್ಧದ ಪ್ರಕರಣದ ವಿಚಾರಣೆ ನಡೆಸಲು ನಿರ್ಧರಿಸಿತ್ತು. ರಾಹುಲ್ ಸುಳ್ಳು ಮತ್ತು ಮಾನಹಾನಿಕರ ಆರೋಪವನ್ನು ಬ್ಯಾಂಕ್‌ ವಿರುದ್ಧ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next