ನವ ದೆಹಲಿ : ದೇಶದಲ್ಲಿ ಕೋವಿಡ್ ಸೋಂಕು ಒಂದೆಡೆ ಜಾಸ್ತಿಯಾಗುತ್ತಿದ್ದಿದ್ದರೆ, ಇನ್ನೊಂದೆಡೆ ಕೋವಿಡ್ ಲಸಿಕೆ ಅಭಿಯಾನವೂ ಕೂಡ ನಡೆಯುತ್ತಿದೆ. ಇನ್ನು ಆರೋಗ್ಯ ಕೇಂದ್ರಗಳಲ್ಲಿ ಲಸಿಕೆಯ ಕೊರತೆಯಿಂದ ಜನ ಸಾಲುಗಟ್ಟಿ ನಿಂತಿರುವ ದೃಶ್ಯಗಳನ್ನು ಕೂಡ ಸುದ್ದಿ ಸಂಸ್ಥೆಗಳು, ವಾಹಿನಿಗಳು ವರದಿ ಮಾಡಿವೆ.
ಲಸಿಕೆಯ ಕೊರತೆಯ ಹಿನ್ನೆಲೆಯಲ್ಲಿ ಲಸಿಕೆ ಅಭಿಯಾನಕ್ಕೆ ದಿನ ನಿತ್ಯ ಕೇಂದ್ರ ಸರ್ಕಾರ ವಯೋಮಾನದ ಆಧಾರದ ಮೇಲೆ ಹೊಸ ಹೊಸ ನೀತಿಯನ್ನು ಜಾರಿ ಮಾಡುತ್ತಿರುವ ಬೆನ್ನಿಗೆ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಅದನ್ನು ತೀವ್ರವಾಗಿ ವಿರೋಧ ಮಾಡಿದೆ.
ಭಾರತೀಯ ಎಲ್ಲಾ ನಾಗರಿಕರಿಗೂ ಕೋವಿಡ್ ಲಸಿಕೆಯನ್ನು ಉಚಿತವಾಗಿ ನೀಡಬೇಕು. ಕೇಂದ್ರದ ಕೋವಿಡ್ ಲಸಿಕಾ ನೀತಿ ತಾರತಮ್ಯ ಎಂದು ಕಾಂಗ್ರೆಸ್ ಆರೋಪ ಮಾಡಿದೆ.
ಓದಿ : ಕರ್ನಾಟಕ,ದೆಹಲಿ ಸೇರಿ ಹಲವು ರಾಜ್ಯಗಳಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಮೇ 1ರಿಂದ ಲಸಿಕೆ ಅನುಮಾನ
ಇನ್ನು,ಈ ಬಗ್ಗೆ ಅಧಿಕೃತವಾಗಿ ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, “ಉಚಿತ” ಎಂಬ ಪದವನ್ನು ಉಲ್ಲೇಖಿಸಿ ಎಲ್ಲಾ ಭಾರತೀಯರಿಗೆ ಉಚಿತ ಕೋವಿಡ್ 19 ಲಸಿಕೆ ನೀಡುವಂತೆ ಒತ್ತಾಯಿಸುವುದರೊಂದಿಗೆ “ಉಚಿತ” ಪದದ ನಿಘಂಟಿನ ಅರ್ಥವನ್ನು ವಿವರಿಸಿದ್ದಾರೆ.
ಇನ್ನು, ಕಾಂಗ್ರೆಸ್ ಹಿರಿಯ ನಾಯಕ ಜಯರಾಮ್ ರಮೇಶ್ ಟ್ವೀಟ್ ನಲ್ಲಿ, ಕೋವಿಡ್ ಲಸಿಕೆಯ ಕೇಂದ್ರಗಳಲ್ಲಿಯೂ ನೋಂದಣಿಗೆ ಅವಕಾಶವನ್ನು ಕೇಂದ್ರ ಸರ್ಕಾರ ಒದಗಿಸಬೇಕು.
ಲಸಿಕೆ ಪಡದುಕೊಳ್ಳಲು ಆನ್ ಲೈನ್ ಪೂರ್ವ ನೋಂದಣಿ ಮತ್ತು ಲಸಿಕೆ ಕೇಂದ್ರಗಳಲ್ಲೂ ನೋಂದಣಿಯ ಎರಡು ಆಯ್ಕೆಗಳನ್ನು ಏಕೆ ಅನುಮತಿಸಬಾರದು ಎಂಬುದನ್ನು ನಾನು ಅರ್ಥಮಾಡಿಕೊಳ್ಳಲು ವಿಫಲವಾಗಿದೆ. ಆನ್ ಲೈನ್ ನೋಂದಣಿಗೆ ಅಡ್ಡಿಯಾಗದಂತೆ ಸಹಾಯ ಮಾಡಬೇಕು. ಎಂದು ಅವರು ಬರೆದಿದ್ದಾರೆ.
ಕೋವಿಡ್ ಲಸಿಕೆಯ ಕೊರತೆಯ ನಡುವೆಯೂ ಕೂಡ ಮೇ 1 ರಿಂದ ಪ್ರಾರಂಭವಾಗಲಿರುವ ಸಾಮೂಹಿಕ ಲಸಿಕೆ ಅಭಿಯಾನಕ್ಕಾಗಿ ಸುಮಾರು 1.3 ಕೋಟಿ ಭಾರತೀಯರು ಸರ್ಕಾರದ ಪೋರ್ಟಲ್ ಕೋವಿನ್ ನಲ್ಲಿ ಆನ್ ಲೈನ್ ನೋಂದಾವಣಿ ಮಾಡಿಕೊಂಡಿದ್ದಾರೆ.
ಓದಿ : ಕೋವಿಡ್ ಸೃಷ್ಟಿಸಿದ ಕರಾಳತೆ : ಮನೆ ಮಾರಾಟ, ಸಹಾಯದ ನಿರೀಕ್ಷೆಯಲ್ಲಿ ಹಿಂದಿ ನಟ