Advertisement
ಬೆಂಗಳೂರಿನ ಹೊರವಲಯ ಮಾದಾವರದಲ್ಲಿ ರವಿವಾರ ರಾಜ್ಯದಲ್ಲಿ ಲೋಕಸಭೆ ಚುನಾವಣೆಗಾಗಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅದ್ಧೂರಿ ಪ್ರಚಾರ ಉದ್ಘಾಟಿಸಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಅವರು ಈ ಸವಾಲು ಹಾಕಿದರು. ಜತೆಗೆ ಪ್ರಧಾನಿ ಮೋದಿ ಮತ್ತು ಬಿಜೆಪಿಯನ್ನು ಸೋಲಿಸುವುದೇ ನಮ್ಮ ಗುರಿಯಾಗಬೇಕು. ದೇಶದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಸಂವಿಧಾನ ತಿದ್ದುಪಡಿ ಮಾಡುವ ಕೂಗು ಕೇಳಿಬರುತ್ತಿದೆ. ಹೀಗಾಗಿ ದೇಶದ ಜನರೆಲ್ಲ ಒಂದಾಗಿ ಬಿಜೆಪಿ ವಿರುದ್ಧ ಹೋರಾಡಬೇಕು ಎಂದು ಕರೆ ನೀಡಿದರು.
Related Articles
ಕೇಂದ್ರ ಸರಕಾರವು 15ರಿಂದ 20 ಉದ್ಯಮಿಗಳ ಪರವಾಗಿದೆ. ಅವರ 3.50 ಲಕ್ಷ ಕೋಟಿ ರೂ. ಸಾಲ ಮಾಫಿ ಮಾಡಿದೆ. ಆದರೆ ದೇಶದ ಕೃಷಿಕರ ಸಾಲ ಮನ್ನಾಕ್ಕೆ ದುಡ್ಡಿಲ್ಲ ಎನ್ನುತ್ತಾರೆ. ಉದ್ಯಮಿಗಳಿಗೆ ನೀಡಲು ದುಡ್ಡಿರುತ್ತದೆ, ರಫೆಲ್ ಡೀಲ್ ಮೂಲಕ ಅನಿಲ್ ಅಂಬಾನಿಗೆ 36 ಸಾವಿರ ಕೋಟಿ ನೀಡಲಾಗಿದೆ ಎಂದು ಆರೋಪಿಸಿದರು.
Advertisement
ಮೋದಿ ವಿರುದ್ಧ ರಾಹುಲ್, ದೇವೇಗೌಡ ವಾಗ್ಧಾಳಿ
ಕೇಂದ್ರದಲ್ಲಿ ಮೋದಿ ಸರಕಾರ ತೊಲಗಿಸಲು ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರು ಎರಡೂ ಪಕ್ಷಗಳ ಅಭ್ಯರ್ಥಿ ಗಳ ಗೆಲುವಿಗೆ ಶ್ರಮಿಸಬೇಕು. ಜೆಡಿಎಸ್‌ನ ಎಲ್ಲ ಅಭ್ಯರ್ಥಿಗಳನ್ನು ಗೆಲ್ಲಿಸಲು ಕಾಂಗ್ರೆಸ್‌ನ ಕಾರ್ಯ ಕರ್ತರು, ಮುಖಂಡರು ಕೆಲಸ ಮಾಡಬೇಕು. ಹಾಗೆಯೇ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಲು ಜೆಡಿಎಸ್ ಮುಖಂಡರು, ಕಾರ್ಯಕರ್ತರು ಶ್ರಮವಹಿಸಬೇಕು. ಎರಡೂ ಪಕ್ಷಗಳ ಗುರಿ ಬಿಜೆಪಿ ಮತ್ತು ನರೇಂದ್ರ ಮೋದಿಯನ್ನು ಸೋಲಿಸುವುದೇ ಆಗಿದೆಎಂದು ರಾಹುಲ್ ಗಾಂಧಿ ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ನಡೆಸುತ್ತಿದ್ದಂತೆ ದಿಲ್ಲಿಯಲ್ಲೂ ಮೈತ್ರಿ ಸರಕಾರ ರಚನೆ ಮಾಡಲಿದ್ದೇವೆ. ಐದು ವರ್ಷ ಬಿಜೆಪಿ ಏನು ಮಾಡಿಲ್ಲ. ಎಂದು ಟೀಕಿಸಿದರು.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಮಾತನಾಡಿ, ದೇಶಕ್ಕೆ ಜಾತ್ಯತೀತ ಶಕ್ತಿಗಳ ಒಗ್ಗಟ್ಟಿನ ಸಂದೇಶ ರವಾನಿಸಲು ಜಂಟಿ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಆರ್‌ಎಸ್‌ಎಸ್‌ನವರು ಹಿಂದೂ ರಾಷ್ಟ್ರ ಮಾಡಲು ಹೊರಟಿ¨ªಾರೆ. ಆದರೆ ಇದು ಹಿಂದೂ ರಾಷ್ಟ್ರವಲ್ಲ. ಜಾತ್ಯತೀತ ರಾಷ್ಟ್ರ ಎನ್ನುವುದನ್ನು ಸಾಬೀತು ಮಾಡಬೇಕು ಎಂದು ಹೇಳಿದರು.
ರಾಜ್ಯದಲ್ಲಿ 2018ರ ಮೇ 23ಕ್ಕೆ ಮೈತ್ರಿ ಸರಕಾರ ಅಧಿಕಾರಕ್ಕೆ ಬಂದಾಗ ಇಡಿ ದೇಶಕ್ಕೆ ಒಂದು ಸಂದೇಶ ರವಾನೆ ಮಾಡಿದ್ದೇವು. ಈಗ ಅದೇ ಸಂದೇಶ ರವಾನೆ ಮಾಡಲು ಜಂಟಿ ಸಮಾವೇಶ ಆಯೋಜನೆ ಮಾಡಲಾಗಿದೆ ಎಂದರು.