ಹೊಸದಿಲ್ಲಿ : ಫ್ರಾನ್ಸ್ ಜತೆಗಿನ ರಾಫೇಲ್ ಫೈಟರ್ ಜೆಟ್ ವಿಮಾನಗಳ ಖರೀದಿ ದರವನ್ನು ಬಹಿರಂಗಪಡಿಸುವಂತೆ ಆಗ್ರಹಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತೆ ಪುನಃ ಪ್ರಧಾನಿ ನರೇಂದ್ರ ಮೋದಿ ಮತ್ತು ವಿತ್ತ ಸಚಿವ ಅರುಣ್ ಜೇತ್ಲಿ ಅವರ ಬೆನ್ನಿಗೆ ಬಿದಿದ್ದಾರೆ.
ಯುಪಿಎ ಆಡಳಿತಾವಳಿಯಲ್ಲಿ ನಡೆಸಲಾಗಿದ್ದ ರಕ್ಷಣಾ ಖರೀದಿಯ ಸಂಪೂರ್ಣ ವಿವರಗಳನ್ನು ಅಂದಿನ ರಕ್ಷಣಾ ಸಚಿವ ಆ್ಯಂಟನಿ ಅವರು ಸದನದಲ್ಲಿ ಬಹಿರಂಪಡಿಸಿದ್ದರು ಎಂಬುದನ್ನು ತೋರಿಸುವ ಮೂರು ಸಂಸದೀಯ ಉತ್ತರಗಳನ್ನು ರಾಹುಲ್ ಪ್ರಧಾನಿ ಮೋದಿ ಮತ್ತು ವಿತ್ತ ಸಚಿವ ಅರುಣ್ ಜೇತ್ಲಿ ಅವರ ಮುಖಕ್ಕೆ ಹಿಡಿದಿದ್ದಾರೆ.
“ನಾವೀಗ ನಮ್ಮ ರಕ್ಷಾ ಮಂತ್ರಿಯನ್ನು ಕೇಳಬೇಕಾಗಿದೆ – ರಾಫೇಲ್ ಜೆಟ್ ತಲಾ ಖರೀದಿ ದರವನ್ನು ಈಗಲಾದರೂ ನಮಗೆ ತಿಳಿಸಿ’ ಎಂದು ರಾಹುಲ್ ಟ್ಟಿàಟ್ ಮಾಡಿದ್ದಾರೆ.
ಕಳೆದ ಗುರುವಾರ ಜೇತ್ಲಿ ಅವರು ರಾಹುಲ್ ಗಾಂಧಿಗೆ ರಾಫೇಲ್ ಖರೀದಿಯ ಮಾಹಿತಿಯನ್ನು ಬಹಿರಂಪಡಿಸಬೇಕೆಂದು ಆಗ್ರಹಿಸುವ ನೀವು ರಾಷ್ಟ್ರದ ಭದ್ರತೆಯೊಂದಿಗೆ ಗಂಭೀರವಾಗಿ ರಾಜಿ ಮಾಡಿಕೊಳ್ಳುತ್ತಿದ್ದೀರಿ ಎಂದು ಆರೋಪಿಸಿದ್ದರು.
ಇದಕ್ಕೆ ಮೊದಲು ರಾಹುಲ್ ಗಾಂಧಿ ಅವರು ಫ್ರಾನ್ಸ್ ಜತೆಗಿನ 36 ರಾಫೇಲ್ ಫೈಟರ್ ಜೆಟ್ ವಿಮಾನಗಳ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ; ಈ ವಹಿವಾಟಿನ ವಿವರಗಳನ್ನು ಮುಚ್ಚಿಡಲಾಗಿದೆ; ಪಾರದರ್ಶಕತೆಯನ್ನು ಪಾಲಿಸಲಾಗಿಲ್ಲ’ ಎಂದು ದೂರಿ ಪ್ರಧಾನಿ ಮೋದಿ, ವಿತ್ತ ಸಚಿವ ಅರುಣ್ ಜೇತ್ಲಿ ವಿರುದ್ಧ ವಾಕ್ ಸಮರ ನಡೆಸಿದ್ದರು.