Advertisement

ಸಸಿ ನೆಟ್ಟು ರಾಹುಲ್ ಗಾಂಧಿ ಜನ್ಮದಿನ ಆಚರಣೆ

11:00 AM Jun 20, 2019 | Suhan S |

ಹಾನಗಲ್ಲ: ಹಾನಗಲ್ಲ ಪ್ರದೇಶ ಕಾಂಗ್ರೆಸ್‌ ಸಮಿತಿ ಆಶ್ರಯದಲ್ಲಿ, ತಾಲೂಕಿನ ಪುಣ್ಯಕ್ಷೇತ್ರ ಹೊಂಕಣ ಗ್ರಾಮದ ಗುಬ್ಬಿ ನಂಜುಂಡೇಶ್ವರ ಮಠದ ಆವರಣದಲ್ಲಿ ಬುಧವಾರ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಜನ್ಮದಿನ ಆಚರಿಸಲಾಯಿತು.

Advertisement

ಶ್ರೀಮಠದ ಆವರಣದಲ್ಲಿ ರಾಹುಲ್ ಗಾಂಧಿ ಅವರ ಜನ್ಮದಿನದ ಪ್ರಯುಕ್ತ 50 ಸಸಿ ನೆಡಲಾಯಿತು. ಜೊತೆಗೆ ಬಡ ವಿದ್ಯಾರ್ಥಿಗಳಿಗೆ ವಿಧಾನ ಪರಿಷತ್‌ ಸದಸ್ಯ ಶ್ರೀನಿವಾಸ್‌ ಮಾನೆ ಅವರಿಂದ ನೋಟ್ಬುಕ್‌ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಗುಬ್ಬಿ ನಂಜುಂಡೇಶ್ವರ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ, ಕಾಂಗ್ರೆಸ್‌ ಪಕ್ಷದ ಬಲವರ್ಧನೆಗೆ ಪ್ರಾರ್ಥನೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಕಾಂಗ್ರೆಸ್‌ ಮುಖಂಡರು ಮಾತನಾಡಿ, ವನಮಹೋತ್ಸವ ಹಾಗೂ ವಿದ್ಯಾರ್ಥಿಗಳಿಗೆ ನೋಟ್ಬುಕ್‌ ವಿತರಿಸುವ ಮೂಲಕ ರಾಹುಲ್ ಗಾಂಧಿ ಅವರ ಜನ್ಮದಿನವನ್ನು ವಿಭಿನ್ನ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಹಿನ್ನಡೆ ಉಂಟಾಗಿದೆ. ಆದರೆ, ಈ ಹಿನ್ನಡೆ ತಾತ್ಕಾಲಿಕವಾಗಿದ್ದು, ನೂರಾರು ವರ್ಷಗಳ ಇತಿಹಾಸ ಹೊಂದಿರುವ ಕಾಂಗ್ರೆಸ್‌ ಪಕ್ಷ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿದ ಹಿರಿಮೆ ಹೊಂದಿದೆ. ಮುಂದಿನ ದಿನಗಳಲ್ಲಿ ದೇಶ ಮತ್ತು ರಾಜ್ಯದ ಏಳ್ಗೆಗಾಗಿ ಕಾಂಗ್ರೆಸ್‌ ಪಕ್ಷ ಅಧಿಕಾರ ಚುಕ್ಕಾಣಿ ಹಿಡಿಯಲಿದ್ದು, ಕಾರ್ಯಕರ್ತರು ತಾತ್ಕಾಲಿಕ ಹಿನ್ನಡೆಯಿಂದ ಆತ್ಮವಿಶ್ವಾಸ ಕಳೆದುಕೊಳ್ಳದೇ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವಂತೆ ಕರೆ ನೀಡಿದರು.

ತಾಪಂ ಅಧ್ಯಕ್ಷ ಸಿದ್ದಪ್ಪ ಹಿರಗಪ್ಪನವರ, ಕೆಪಿಸಿಸಿ ಕಾರ್ಯದರ್ಶಿ ಪ್ರಕಾಶಗೌಡ ಪಾಟೀಲ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರಂಗನಗೌಡ ಪಾಟೀಲ, ಜಿಪಂ ಸದಸ್ಯರಾದ ಟಾಕನಗೌಡ ಪಾಟೀಲ, ರಾಜೇಶ್ವರಿ ಕಲ್ಲೇರ, ತಾಪಂ ಸದಸ್ಯರಾದ ತಿಪ್ಪಣ್ಣ ದೊಡ್ಡಕೋವಿ, ಶಿವಾನಂದ ಕನ್ನಕ್ಕನವರ, ಸಿದ್ದನಗೌಡ ಪಾಟೀಲ, ರಾಮಣ್ಣ ಶೇಷಗಿರಿ, ತಿಳವಳ್ಳಿ ಗ್ರಾಪಂ ಅಧ್ಯಕ್ಷೆ ಸರಸ್ವತಿ ಪಾಟೀಲ, ಮುಖಂಡರಾದ ಯಾಸೀರಖಾನ್‌ ಪಠಾಣ, ಭರಮಣ್ಣ ಶಿವೂರ, ರಾಮೂ ಯಳ್ಳೂರ, ರಾಜೇಶ ಗುಡಿ, ದಾನಪ್ಪ ಗಂಟೇರ, ಬಸವರಾಜ್‌ ಹಾದಿಮನಿ, ಗುರುರಾಜ ನಿಂಗೋಜಿ, ಸತ್ತಾರಸಾಬ ಅರಳೇಶ್ವರ, ಜಯಣ್ಣ ಹೊನಗೊಂಡ್ರ, ನೆಗಳೂರ, ಎಂ.ಆರ್‌.ಗುತ್ತಲ, ಪರಶುರಾಮ್‌ ಖಂಡೂನವರ, ಶಿವಾನಂದ ಈಳಿಗೇರ, ಶಿವಾಜಿ ಆರೇರ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next