Advertisement

Rahul Gandhi; ಅಮೇಥಿಯಲ್ಲಿ ನ್ಯಾಯ್ ಯಾತ್ರೆ : ಲೇವಡಿ ಮಾಡಿದ ಸ್ಮೃತಿ ಇರಾನಿ

09:49 PM Feb 19, 2024 | Team Udayavani |

ಅಮೇಥಿ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ ಸೋಮವಾರ ಅಮೇಥಿಯಲ್ಲಿ ಸಂಚರಿಸಿತು.

Advertisement

ಸಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ ‘ ಮಣಿಪುರ ಹೊತ್ತಿ ಉರಿಯುತ್ತಿದೆ. ಅಲ್ಲಿ ಮೋದಿ ಸರ್ಕಾರ ಎರಡು ವರ್ಗಗಳ ನಡುವೆ ಹೋರಾಟ ಸೃಷ್ಟಿಸಿದೆ. ಜನರನ್ನು ಕೊಲ್ಲಲಾಗಿದೆ, ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. ಅಲ್ಲಿ ಅಂತರ್ಯುದ್ಧ ಮುಂದುವರಿದಿದೆ.ಆದರೆ ಇಲ್ಲಿಯವರೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಮಣಿಪುರಕ್ಕೆ ಭೇಟಿ ನೀಡಿಲ್ಲ” ಎಂದು ಕಿಡಿ ಕಾರಿದರು.

”ಇಂದು ದೇಶದ ಯುವಕರು ಮೊಬೈಲ್ ಫೋನ್‌ಗಳಲ್ಲಿ ಗಂಟೆಗಟ್ಟಲೆ ವಿಡಿಯೋಗಳನ್ನು ನೋಡುತ್ತಲೇ ಇರುತ್ತಾರೆ ಮತ್ತು ಪರಸ್ಪರ ವಿಡಿಯೋಗಳನ್ನು ಕಳುಹಿಸುತ್ತಲೇ ಇರುತ್ತಾರೆ. ಆದರೆ ಅದಾನಿ-ಅಂಬಾನಿ ಪುತ್ರರು ಮೊಬೈಲ್ ನಲ್ಲಿ ವಿಡಿಯೋ ನೋಡುವುದಿಲ್ಲ, ಹಣ ಎಣಿಸುತ್ತಾರೆ.ಅದೇ ರೀತಿ ಬ್ಯಾಟ್ ಹಿಡಿಯಲು ಗೊತ್ತಿಲ್ಲದ ಅಮಿತ್ ಶಾ ಅವರ ಮಗ ಇಂದು ಭಾರತೀಯ ಕ್ರಿಕೆಟ್ ನಡೆಸುತ್ತಿದ್ದಾರೆ.ಇದು ಈ ದೇಶದ ಸತ್ಯ” ಎಂದರು.

‘ಭಾರತ್ ಜೋಡೋ ಯಾತ್ರೆ’ ವೇಳೆ ರೈತರು, ಯುವಕರು, ಬಡವರು, ಸಣ್ಣ ಉದ್ಯಮಿಗಳು ನಮ್ಮ ಬಳಿಗೆ ಬಂದು ತಮ್ಮ ಭಾವನೆಗಳನ್ನು ನನ್ನಲ್ಲಿ ವ್ಯಕ್ತಪಡಿಸಿದರು. ಹಣದುಬ್ಬರದ ಬಗ್ಗೆ ಮಾತನಾಡಿದರು, ನಿರುದ್ಯೋಗದ ಬಗ್ಗೆ ಮಾತನಾಡಿದರು ಜಿಎಸ್ಟಿ ಬಗ್ಗೆ ದೂರಿದರು.ಮೊದಲ ಯಾತ್ರೆಯಲ್ಲಿ ನಾನು ಇಲ್ಲಿಗೆ ಬರಲಿಲ್ಲ. ಈಗ ನಾನು ಅಮೇಥಿಯಲ್ಲಿ ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ಯೊಂದಿಗೆ ನಿಮ್ಮ ಮುಂದೆ ಇದ್ದೇನೆ ಎಂದರು.

ಸ್ಮೃತಿ ಇರಾನಿ ಲೇವಡಿ
ಕೇಂದ್ರ ಸಚಿವೆ ಹಾಗೂ ಅಮೇಥಿ ಸಂಸದೆ ಸ್ಮೃತಿ ಇರಾನಿ ಅವರು ನ್ಯಾಯ್ ಯಾತ್ರೆ ಕುರಿತು ಪ್ರತಿಕ್ರಿಯಿಸಿ ”ಇಂದು ರಾಹುಲ್ ಗಾಂಧಿ ಆಗಮಿಸಿದಾಗ, ಅವರನ್ನು ಖಾಲಿ ಬೀದಿಗಳಲ್ಲಿ ಸ್ವಾಗತಿಸಲಾಯಿತು.ಗಾಂಧಿ ಕುಟುಂಬಕ್ಕೂ ಕ್ಷೇತ್ರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಖಾಲಿ ಬೀದಿಗಳು ತೋರಿಸುತ್ತಿವೆಗಾಂಧಿ ಕುಟುಂಬದ ವಿರುದ್ಧ ಅಮೇಥಿಯ ಜನರ ಆಕ್ರೋಶ ಸ್ಪಷ್ಟವಾಗಿ ಗೋಚರಿಸುತ್ತಿದೆ” ಎಂದು ಲೇವಡಿ ಮಾಡಿದರು.

Advertisement

“ಹೂಡಿಕೆದಾರರ ಶೃಂಗಸಭೆಯಲ್ಲಿ ಅಮೇಥಿಗೆ 6523 ಕೋಟಿ ರೂಪಾಯಿ ಹೂಡಿಕೆಯಾಗಿದೆ.ಅಮೇಥಿಯಲ್ಲಿ ನಾನು ಅನೇಕ ಜನರ ಬೆಂಬಲವನ್ನು ಹೊಂದಿದ್ದ ಅಭ್ಯರ್ಥಿಯ ವಿರುದ್ಧ ಹೋರಾಡಿದ್ದೇನೆ ” ಎಂದು ಹೇಳಿದರು.

ಸಾಮರ್ಥ್ಯವಿದ್ದರೆ ಒಂದೇ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ” ಎಂದು ರಾಹುಲ್ ಗಾಂಧಿ ಅವರಿಗೆ ಸ್ಮೃತಿ ಇರಾನಿ ಅವರು ಸವಾಲು ಹಾಕಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next