Advertisement

ರಾಹುಲ್ ಗಾಂಧಿಗೆ ಮತ್ತೊಂದು ಸಂಕಷ್ಟ: ತಿಂಗಳೊಳಗೆ ಸರಕಾರಿ ಬಂಗಲೆ ಖಾಲಿ ಮಾಡುವಂತೆ ನೋಟಿಸ್

07:04 PM Mar 27, 2023 | Team Udayavani |

ನವದೆಹಲಿ: ಲೋಕಸಭೆ ಸದಸ್ಯತ್ವದಿಂದ ಅನರ್ಹಗೊಂಡ ಕೆಲವೇ ದಿನದಲ್ಲಿ ರಾಹುಲ್ ಗಾಂಧಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ ಅದರಂತೆ ಮುಂದಿನ ಏಪ್ರಿಲ್ 22 ರೊಳಗೆ ತುಘಲಕ್ ಲೇನ್ 12 ನಲ್ಲಿ ಸರ್ಕಾರದಿಂದ ಮಂಜೂರು ಮಾಡಲಾದ ಬಂಗಲೆಯನ್ನು ಖಾಲಿ ಮಾಡುವಂತೆ ಲೋಕಸಭೆಯ ಸದನ ಸಮಿತಿ ನೋಟಿಸ್ ನೀಡಿದೆ.

Advertisement

ನಿಯಮದ ಪ್ರಕಾರ, ಅನರ್ಹಗೊಂಡ ಸಂಸದರು ಸರ್ಕಾರಿ ವಸತಿಗೆ ಅರ್ಹರಲ್ಲ ಹಾಗಾಗಿ ಬಂಗಲೆಯನ್ನು ಖಾಲಿ ಮಾಡಲು ಸಮಿತಿ 30 ದಿನಗಳ ಕಾಲಾವಕಾಶ ನೀಡಿದೆ.

2004 ರಲ್ಲಿ ಉತ್ತರ ಪ್ರದೇಶದ ಅಮೇಥಿಯಿಂದ ಮೊದಲ ಬಾರಿಗೆ ಆಯ್ಕೆಯಾದ ರಾಹುಲ್ ಗಾಂಧಿ ಲೋಕಸಭೆಯ ಸಂಸದರಾಗಿರುವುದು ನಾಲ್ಕನೇ ಅವಧಿಯಾಗಿದೆ. 2019 ರಲ್ಲಿ ಅವರು ಅಮೇಥಿಯಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿರುದ್ಧ ಸೋತರು, ಆದರೆ ಕೇರಳದ ವಯನಾಡ್ ಕ್ಷೇತ್ರದಿಂದ ಗೆಲ್ಲುವಲ್ಲಿ ಯಶಸ್ವಿಯಾದರು.

2019 ರ ಮಾನನಷ್ಟ ಮೊಕದ್ದಮೆಯಲ್ಲಿ ಗುಜರಾತ್‌ನ ಸೂರತ್‌ನ ನ್ಯಾಯಾಲಯವು ಅವರನ್ನು ದೋಷಿ ಎಂದು ಘೋಷಿಸಿದ ಒಂದು ದಿನದ ಬಳಿಕ ಗಾಂಧಿ ಅವರನ್ನು ಲೋಕಸಭೆಯಿಂದ ಅನರ್ಹಗೊಳಿಸಲಾಯಿತು.

ಇದನ್ನೂ ಓದಿ: ಹಂಪಿ ಅಭಿವೃದ್ಧಿ ಪ್ರಾಧಿಕಾರದಿಂದ ಆನೆಗೊಂದಿ ಭಾಗ ಕೈ ಬಿಡುವ ಭರವಸೆ ನೀಡಿದ ಗಾಲಿ ರೆಡ್ಡಿ

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next