Advertisement

Reservation: ಮಾಜಿ ಅಗ್ನಿವೀರರಿಗೆ ಬಿಎಸ್‌ಎಫ್ ನಲ್ಲಿ ಶೇ.10 ಮೀಸಲು: ಕೇಂದ್ರ

11:23 PM Jul 24, 2024 | Team Udayavani |

ಹೊಸದಿಲ್ಲಿ: ಅಗ್ನಿವೀರ ಸೇವೆಯಲ್ಲಿ 4 ವರ್ಷ ಸೇವೆ ಸಲ್ಲಿಸಿ ಮಾಜಿಗಳಾದವರನ್ನು ಬಿಎಸ್‌ಎಫ್, ಅಸ್ಸಾಂ ರೈಫ‌ಲ್ಸ್‌, ಕೇಂದ್ರೀಯ ಸಶಸ್ತ್ರ ಪೊಲೀಸ್‌ ಪಡೆಗಳಲ್ಲಿ ನೇಮಿಸಲಾಗುತ್ತದೆ.

Advertisement

ಆ ಬಗ್ಗೆ ಕೇಂದ್ರ ಗೃಹ ಖಾತೆ ಸಹಾಯಕ ಸಚಿವ ನಿತ್ಯಾನಂದ ರಾಯ್‌ ರಾಜ್ಯಸಭೆಗೆ ತಿಳಿಸಿದ್ದಾರೆ. ಈ ಬಗ್ಗೆ ಬಿಎಸ್‌ಎಫ್ನ ನಿರ್ದೇಶಕ ನಿತಿನ್‌ ಅಗರ್ವಾಲ್‌ ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ನೇಮಕದಲ್ಲಿ ಮಾಜಿ ಅಗ್ನಿವೀರರಿಗೆ ವಯೋಮಿತಿಯಲ್ಲಿ ರಿಯಾಯಿತಿ, ಶೇ.10 ಮೀಸಲು ನೀಡಲಾಗುತ್ತದೆ ಎಂದು ಹೇಳಿದ್ದರು.

ಸಿಆರ್‌ಪಿಎಫ್, ಸಿಐಎಸ್‌ಎಫ್ ಮುಖ್ಯಸ್ಥರೂ ಕೂಡ ಯೋಧರನ್ನು ನೇಮಕ ಮಾಡುವ ವೇಳೆ ಅಗ್ನಿವೀರರಿಗೆ ಮೀಸಲು ನೀಡಲಾಗುತ್ತದೆ ಎಂದು ಪ್ರಕಟಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next