ಮುಂಬಯಿ: ಆರ್‌ಎಸ್‌ಎಸ್ ನಾಯಕರೊಬ್ಬರು ದಾಖಲಿಸಿದ ಮಾನನಷ್ಟ ಕೇಸ್‌ನಲ್ಲಿ ಕಾಂಗ್ರೆಸ ನಾಯಕ ರಾಹುಲ್ ಗಾಂಧಿ ತಪ್ಪಿತಸ್ಥರಲ್ಲ ಎಂದು ಗುರುವಾರ ಮಜಗಾಂವ್ ಮೆಟ್ರೋ ಪೊಲಿಟಿಯನ್ ಮ್ಯಾಜಿಸ್ಟ್ರೇಟ್ ಕೋರ್ಟ್ ತೀರ್ಪು ನೀಡಿದ್ದು, 15 ಸಾವಿರ ರೂಪಾಯಿ ಶ್ಯೂರಿಟಿಯ ಮೇರೆಗೆ ಬಿಡುಗಡೆ ಮಾಡಿದೆ.
ಲಂಕೇಶ್ ಹತ್ಯೆ ವಿಚಾರದಲ್ಲಿ ರಾಹುಲ್ ಗಾಂಧಿ ಅವರು ಆರ್‌ಎಸ್‌ಎಸ್ ಮತ್ತು ಬಿಜೆಪಿ ವಿಚಾರದಲ್ಲಿ ನೀಡಿದ ಹೇಳಿಕೆ ಖಂಡಿಸಿ ಆರ್‌ಎಸ್‌ಎಸ್‌ನ ಧ್ರುತಿಮನ್ ಜೋಷಿ ಅವರು ಮಾನನಷ್ಟ ಮೊಕದ್ದಮೆ ಹೂಡಿದ್ದರು.
ರಾಹುಲ್ ಅವರೊಂದಿಗೆ ಸೋನಿಯಾ ಗಾಂಧಿ ಮತ್ತು ಸಿಪಿಐ(ಎಂ) ನಾಯಕ ಸೀತಾರಾಮ್ ಯಚೂರಿ ಅವರ ವಿರುದ್ಧವೂ ಕೇಸು ದಾಖಲಿಸಿದ್ದರು.ರಾಹುಲ್ ಗಾಂಧಿ ಅವರಿಗೆ ಕೋರ್ಟ್ ವಿಚಾರಣೆಗೆ ಹಾಜರಾಗುವಂತೆ ಫೆಬ್ರವರಿ ತಿಂಗಳಿನಲ್ಲಿ ಸಮನ್ಸ್ ಜಾರಿ ಮಾಡಿತ್ತು.
ಸೋನಿಯಾ ಗಾಂಧಿ ಮತ್ತು ಸಿಪಿಐ(ಎಂ) ಪಕ್ಷದ ವಿರುದ್ಧ ದಾಖಲಿಸಿದ್ದ ಪ್ರಕರಣವನ್ನು ವಜಾ ಮಾಡಿತ್ತು.
ವಿಚಾರಣೆಯ ಸಲುವಾಗಿ ರಾಹುಲ್ ಗಾಂಧಿ ಅವರು ಕೋರ್ಟ್‌ಗೆ ಹಾಜರಾಗಿದ್ದರು. ಕೋರ್ಟ್ ಆವರಣದಲ್ಲಿ ವ್ಯಾಪಕ ಭದ್ರತೆ ಕೈಗೊಳ್ಳಲಾಗಿತ್ತು.
ಕಾಂಗ್ರೆಸ್ ಕಾರ್ಯಕರ್ತರ ಘೋಷಣೆ
ರಾಹುಲ್ ಗಾಂಧಿ ಅವರು ವಿಮಾನ ನಿಲ್ದಾಣದಲ್ಲಿ ಬಂದಿಳಿಯುವ ವೇಳೆ ನೂರಾರು ಯುವ ಕಾಂಗ್ರೆಸ್ ಕಾರ್ಯಕರ್ತರು ಜಮಾವಣೆಗೊಂಡುಎಐಸಿಸಿ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಿರಿ ಎಂದು ಘೋಷಣೆಗಳನ್ನು ಕೂಗಿದ್ದಾರೆ.