ರಾಹುಲ್ ದ್ರಾವಿಡ್ ಟ್ರೋಫಿ ಗೆದ್ದ ಬಳಿಕ ಸಂಭಾವನೆಯಲ್ಲೂ ಸಮಾನತೆಯ ತತ್ವ ಪ್ರತಿಪಾದಿಸಿದ್ದರು. ನನಗೊಬ್ಬನಿಗೆ 50 ಲಕ್ಷ ರೂ., ತಂಡದ ಆಟಗಾರರಿಗೆ 30 ಲಕ್ಷ ರೂ., ತಂಡದ ಸಹಾಯಕ ಸಿಬ್ಬಂದಿಗೆ 20 ಲಕ್ಷ ರೂ. ನೀಡಿರುವುದು ಸರಿಯಲ್ಲ. ಬಿಸಿಸಿಐ
ತಾರತಮ್ಯ ಮಾಡಿದೆ ಎಂದಿದ್ದರು. ತಕ್ಷಣ ಬಿಸಿಸಿಐ ದ್ರಾವಿಡ್ ಅವರ ಶೇ.50 ರಷ್ಟು ಸಂಭಾವನೆ ಕಡಿತ ಮಾಡಿತ್ತು. ದ್ರಾವಿಡ್ 50 ಲಕ್ಷ ರೂ. ಬದಲಿಗೆ 25 ಲಕ್ಷ ರೂ. ಮಾತ್ರ ಪಡೆದುಕೊಂಡಿದ್ದರು.
Advertisement
ಇವರ ಈ ನಿರ್ಧಾರವನ್ನು ಟ್ವೀಟರ್‌ನಲ್ಲಿ ಸಾವಿರಾರು ಮಂದಿ ಶ್ಲಾ ಸಿದ್ದರು. ದ್ರಾವಿಡ್ ದೇಶದ ಪ್ರಧಾನಿಯಾಗಲಿ, ಎಲ್ಲರಿಗೂ ಮಾದರಿ ವ್ಯಕ್ತಿ ಎಂದು ಟ್ವೀಟರ್‌ನಲ್ಲಿ ಅಭಿಮಾನಿಗಳು ಬರೆದು ಪ್ರಕಟಿಸಿದ್ದು ವೈರಲ್ ಆಗಿದೆ.