ನೀಡುವುದಿಲ್ಲ. ಮಗು ಎಲ್ಲಿ ಪೆಟ್ಟು ಮಾಡಿಕೊಂಡು ಬಿಡುತ್ತಾನೋ ಅನ್ನುವ ಆತಂಕ, ಭಯ ಪೋಷಕರದ್ದಾಗಿರುತ್ತದೆ. ಆದರೆ ಬಾಲಕ ಪೋಷಕರ ಕಣ್ಣು ತಪ್ಪಿಸಿ ತನ್ನ ಪ್ರಯತ್ನ ಮುಂದುವರಿಸುತ್ತಾನೆ. ಹಂತ ಹಂತವಾಗಿ ಸ್ವಲ್ಪ ಸ್ವಲ್ಪ ಯಶಸ್ಸನ್ನು ಕಾರಣುತ್ತಾನೆ. ಮುಂದೊಂದುದಿನ ಅವನ ಪ್ರಯತ್ನಕ್ಕೆ ಯಶಸ್ಸು ದೊರೆಯುತ್ತದೆ. ಅದೇ ರೀತಿ ಕಬಡ್ಡಿಯಲ್ಲಿ ತನ್ನದೇ ಛಾಪು ಮೂಡಿಸಿರುವ ರಾಹುಲ್ ಚೌಧರಿಯ ಕಬಡ್ಡಿ ಪ್ರವೇಶದ ಕಥೆ ಕೂಡ ಹಾಗೇ ಇದೆ.
Advertisement
ರಾಹುಲ್ ಚೌಧರಿ ಉತ್ತರ ಪ್ರದೇಶದ ಜಾಟ್ ಸಮುದಾಯದಲ್ಲಿ ಜನಿಸಿದವರು. ಇದೀಗ 24ರ ಯುವಕ, ಇಡೀ ಕ್ರೀಡಾಪ್ರೇಮಿಗಳಿಗೆ ಪರಿಚಿತ ಇರುವ ಮುಖವಾಗಿದ್ದಾರೆ. ಕಬಡ್ಡಿ ಕಲಿಯುತ್ತಿರುವ ಎಷ್ಟೋ ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗಿದ್ದಾರೆ. ಆದರೆ ಈತ ಮೊದಲ ಬಾರಿಗೆ ಕಬಡ್ಡಿ ಆಡಲು ಆರಂಭಿಸಿದ್ದು, ಪ್ರಾಥಮಿಕ ಶಾಲಾ ದಿನಗಳಲ್ಲಿ. ಆರಂಭದಲ್ಲಿಯೇ ಕಬಡ್ಡಿ ಮೇಲಿನ ಪ್ರೀತಿ ಅಗಾದವಾದದ್ದು. ರಾಹುಲ್ ಹಿರಿಯ ಸಹೋದರ ಕಬಡ್ಡಿ ಆಟಗಾರನಾಗಿದ್ದ. ಹೀಗಾಗಿ ರಾಜ್ಯದ ವಿವಿಧೆಡೆ ನಡೆಯುವ ಕಬಡ್ಡಿ ಟೂರ್ನಿಗಳಿಗೆ ಅಣ್ಣನ ಜತೆ ರಾಹುಲ್ ತೆರಳುತ್ತಿದ್ದ. ಅಣ್ಣ ಆಡುವ ತಂಡದಲ್ಲಿ ಯಾರಾದರೂ ಗಾಯಮಾಡಿಕೊಂಡರೆ ತನಗೂ ಅವಕಾಶ ಸಿಗುತ್ತದೆ ಎನ್ನುವ ಆಸಾಮನೋಭಾವ ಚೌಧರಿಯದಾಗಿತ್ತು. ಅಂತೂ ಕೆಲವು ಬಾರಿ ತನ್ನ ಅಣ್ಣ ಆಡುವ ತಂಡದಲ್ಲಿ ಅವಕಾಶ ಪಡೆದೇ ಬಿಟ್ಟ. ಇದು ಚೌಧರಿಯ ಜೀನದ ದಿಕ್ಕನ್ನೆ ಬದಲಿಸಿ ಬಿಡು¤. ಆಮೇಲೆ ತಿರುಗಿ ನೋಡಿದ್ದೇ ಇಲ್ಲ.
ರಾಹುಲ್ ಚೌಧರಿ ಕಬಡ್ಡಿ ಆಡುವುದು ಅವರ ಕುಟುಂಬದಲ್ಲಿ ಒಬ್ಬರಿಗೂ ಎಳ್ಳಷ್ಟು ಇಷ್ಟವಿರಲಿಲ್ಲ. ಮಗ ಕಬಡ್ಡಿ ಆಡುತ್ತಾ ಸಮಯ ಕಳೆಯುತ್ತಾನೆ. ವಿದ್ಯಾಭ್ಯಾಸದ ಕಡೆ ದೃಷ್ಟಿ ಹರಿಸುವುದಿಲ್ಲ. ಹೀಗಾಗಿ ಹಾಳಾಗಿ ಹೋಗ್ತಾನೆ ಅನ್ನುವ ಆತಂಕ ರಾಹುಲ್ ಅವರ ಅಪ್ಪ, ಅಮ್ಮ ಅವರದಾಗಿತ್ತು. ಹೀಗಾಗಿ ತಂದೆ, ತಾಯಿ ಕಣ್ಣು ತಪ್ಪಿಸಿ ಕಬಡ್ಡಿ ಪಂದ್ಯಗಲ್ಲಿ ಆಡಲು ತೆರಳಿದ ಇತಿಹಾಸವಿದೆ. ಚಿಕ್ಕ ಪುಟ್ಟ ಗಾಯ ಮಾಡಿಕೊಂಡರೂ ಅದು ಮನೆಯವರಿಗೆ ತಿಳಿಯದಂತೆ ಮ್ಯಾನೇಜ್ ಮಾಡಿರುವ ಘಟನೆಗಳು ನಡೆದಿವೆ. ಆದರೂ ಚೌಧರಿಗೆ ಕಬಡ್ಡಿ ಮೇಲಿನ ಪ್ರೀತಿ ಬಿಟ್ಟಿಲ್ಲ. ಇಂತಹವೊಂದು ಪ್ರೀತಿ, ಛಲವೆ ಇಂದು ಚೌಧರಿಯನ್ನು ಕಬಡ್ಡಿಯಲ್ಲಿ ಘರ್ಜಿಸುವ ಹುಲಿಯಾಗಿ ರೂಪಿಸಿದೆ. ಆದರೆ ಇಂದು ಅವರ ತಂದೆ, ತಾಯಿ ಮಗನ ಸಾಧನೆಗೆ ಖುಷಿ ಪಡುತ್ತಿದ್ದಾರೆ. ಮಗ ಆಡುತ್ತಿರುವ ಪ್ರೊ ಕಬಡ್ಡಿಯ ಯಾವ ಪಂದ್ಯವನ್ನು ತಪ್ಪದೇ ನೋಡುತ್ತಾರೆ. ಪ್ರೊ ಕಬಡ್ಡಿಯಲ್ಲಿ ಘರ್ಜನೆ
ಕಬಡ್ಡಿಯ ಎಷ್ಟೋ ಪ್ರತಿಭೆಗಳು ಹೊರಬಂದಿರುವುದೇ ಪ್ರೊ ಕಬಡ್ಡಿಯಲ್ಲಿ. ಅದೇ ರೀತಿ ರಾಹುಲ್ ಚೌಧರಿ ಎಂಬ ಪ್ರತಿಭೆಯನ್ನು ಪರಿಚಯಿಸಿದ್ದು, ಪ್ರೊ ಕಬಡ್ಡಿ ಕೂಟ. ಚೌಧರಿ ಎದುರಾಳಿ ಅಂಕಣಕ್ಕೆ ನುಗ್ಗಿ ಹುಲಿಯಂತೆ ಘರ್ಜಿಸುತ್ತಾನೆ. ರಕ್ಷಣಾ ಬಲೆಯಿಂದ ತಪ್ಪಿಸಿಕೊಳ್ಳಲು ಜಿಂಕೆ ಮರಿಯಂತೆ ಜಿಗಿಯುತ್ತಾನೆ. ಎದುರಾಳಿಯನ್ನು ಟಚ್ ಮಾಡಿ ಚಿರತೆಯ ವೇಗದಲ್ಲಿ ಪುನಃ ತನ್ನ ಕೋರ್ಟ್‌ಗೆ ಮರಳುತ್ತಾನೆ. ಹೀಗಾಗಿ ಯಾವುದೇ ತಂಡದ ಅಭಿಮಾನಿಯಾಗಿದ್ದರೂ ಚೌಧರಿ ರೈಡಿಂಗ್ ಎಂದರೆ ಹಬ್ಬ ಮಾಡುತ್ತಾರೆ. ಪ್ರೇಕ್ಷಕರ ಗ್ಯಾಲರಿಯಲ್ಲಿಯೇ ಕುಣಿದು ಕುಪ್ಪಳಿಸುತ್ತಾರೆ. ಆತ ರೈಡಿಂಗ್‌ಗೆ ಹೋದ ಎಂದರೆ ಎದುರಾಳಿಯಿಂದ ಅಂಕ ಬಂತು ಎಂದೇ ತೀರ್ಮಾನ. ಎಲ್ಲಿಯೂ ಅಪರೂಪಕ್ಕೊಮ್ಮೆ ಮಾತ್ರ ಕ್ಷೇತ್ರ ರಕ್ಷಣೆಯ ಬಲೆಯಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಾರೆ.
Related Articles
ರಾಹುಲ್ ಚೌಧರಿ ಕಬಡ್ಡಿಯಲ್ಲಿ ಮೊದಲ ಬಾರಿಗೆ ವೃತ್ತಿ ಜೀವನ ಆರಂಭಿಸಿದ್ದು, ರಕ್ಷಣಾ ಆಟಗಾರನಾಗಿ, ಆದರೆ ನಂತರ ರೈಡರ್ ಆಗಿ ಬದಲಾವಣೆಗೊಂಡಿದ್ದಾರೆ. ಇದುವೇ ಚೌಧರಿಯ ಕೈ ಹಿಡಿದಿದೆ. ಪ್ರೊ ಕಬಡ್ಡಿಯ ಪಂದ್ಯಗಳಲ್ಲಿ ರೈಡಿಂಗ್‌ನಲ್ಲಿ 500 ಗಡಿ ದಾಟಿದ್ದಾರೆ. ಈ ಸಾಧನೆ ಮಾಡಿದ ಮೊದಲ ಮತ್ತು ಏಕೈಕ ಆಟಗಾರ ಎಂಬ ಇತಿಹಾಸ ನಿರ್ಮಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರದೀಪ್ ನರ್ವಾಲ್, ಅನೂಪ್ ಕುಮಾರ್, ದೀಪಕ್ ಹೂಡಾ, ಅಜಯ್ ಠಾಕೂರ್, ಜಸ್ವೀರ್ ಸಿಂಗ್…ಇವರೆಲ್ಲರಿಗಿಂತ ಚೌಧರಿಯೇ ಒಂದು ಕೈ ಮೇಲಾಗಿ ಕಾಣುತ್ತಾರೆ.
Advertisement