ಲಕ್ನೋ: ಸಮಾಜವಾದಿ ಪಕ್ಷದ ಕಛೇರಿಯು ತನ್ನ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಭಾರತದ ‘ಭವಿಷ್ಯದ ಪ್ರಧಾನಿ’ ಎಂದು ಪೋಸ್ಟರ್ ಹಾಕಿದ ಕೆಲವು ದಿನಗಳ ನಂತರ, ರಾಹುಲ್ ಗಾಂಧಿಯನ್ನು ‘2024 ಪ್ರಧಾನಿ’ ಎಂದು ಬಿಂಬಿಸುವ ಬ್ಯಾನರ್ ಲಕ್ನೋದ ಕಾಂಗ್ರೆಸ್ ಪಕ್ಷದ ಕಚೇರಿಯ ಹೊರಗೆ ಕಾಣಿಸಿಕೊಂಡಿದೆ.
ಕಾಂಗ್ರೆಸ್ ಬ್ಯಾನರ್ ನಲ್ಲಿ ರಾಜ್ಯಾಧ್ಯಕ್ಷ ಅಜಯ್ ರೈ ಅವರನ್ನು 2027 ರಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಎಂದು ಉಲ್ಲೇಖಿಸಲಾಗಿದೆ.
ಅಖಿಲೇಶ್ ಯಾದವ್ ಅವರ ಪೋಸ್ಟರ್ ಹಾಕಿರುವ ಸಮಾಜವಾದಿ ಪಕ್ಷದ (ಎಸ್‌ಪಿ) ರಾಜ್ಯ ವಕ್ತಾರ ಫಕ್ರುಲ್ ಹಸನ್ ಈ ಪೋಸ್ಟರ್ ಗೆ ಪ್ರತಿಕ್ರಿಯಿಸಿ, “ಹಿಂದುಳಿದವರು, ದಲಿತರು ಮತ್ತು ಅಲ್ಪಸಂಖ್ಯಾತರಿಗಾಗಿ ಹೋರಾಟ ಮಾಡುವುದು ನಮ್ಮ ಪಕ್ಷ. ಆದ್ದರಿಂದ ಕಾಂಗ್ರೆಸ್ ಎಷ್ಟು ಪೋಸ್ಟರ್ ಗಳನ್ನು ಹಾಕುತ್ತದೆ ಎಂಬುದು ಮುಖ್ಯವಲ್ಲ. ಯಾದವ್ ಪ್ರಧಾನಿಯಾಗಬೇಕೆಂದು ಜನರು ಬಯಸುತ್ತಿದ್ದಾರೆ” ಎಂದರು.
ಪಕ್ಷದ ಕಾರ್ಯಕರ್ತ ನಿತಂತ್ ಸಿಂಗ್ ನಿತಿನ್ ಅವರು ಹಾಕಿರುವ ಕಾಂಗ್ರೆಸ್ ಹೋರ್ಡಿಂಗ್‌ನಲ್ಲಿ ರಾಹುಲ್ ಗಾಂಧಿ ಮತ್ತು ಅಜಯ್ ರೈ ಅವರ ಚಿತ್ರಗಳಿವೆ. “2024 ಮೇ ರಾಹುಲ್, 2027 ಮೇ ರೈ. ದೇಶ್-ಪ್ರದೇಶ ಬೋಲ್ ರಹಾ ಹೈ, ಹಾಥ್ ಕೆ ಸಾಥ್ ಆಯೇನ್” (2024ರಲ್ಲಿ ರಾಹುಲ್, 2027 ರಲ್ಲಿ ರೈ, ದೇಶ ಮತ್ತು ರಾಜ್ಯ ಎರಡೂ ನಿಮ್ಮನ್ನು ಕೈ (ಕಾಂಗ್ರೆಸ್ ಚಿಹ್ನೆ) ಬೆಂಬಲಿಸಲು ಕೇಳುತ್ತಿವೆ) ಎಂಧು ಬರೆಯಲಾಗಿದೆ.