Advertisement
2ನೇ ಬಾರಿ ಅಫಿದವಿತ್ ಸಲ್ಲಿಸಿದರೂ ಅದರಲ್ಲೂ ತಪ್ಪನ್ನು ಒಪ್ಪಿ ಕ್ಷಮೆ ಕೋರದ ರಾಹುಲ್‌ರನ್ನು ಸುಪ್ರೀಂ ಕೋರ್ಟ್‌ನಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ನ್ಯಾಯಪೀಠ ಮಂಗಳವಾರದ ವಿಚಾರಣೆ ವೇಳೆ ತೀವ್ರ ತರಾಟೆಗೆ ತೆಗೆದುಕೊಂಡಿತು.
ವಿಚಾರಣೆಯ ವೇಳೆ ರಾಹುಲ್ ಪರ ವಕೀಲ ಅಭಿಷೇಕ್ ಮನು ಸಿಂ Ì ಅವರು, ರಾಹುಲ್ ಹೇಳಿಕೆ ತಪ್ಪಾಗಿರುವುದು ನಿಜ ಎಂದು ಹೇಳಿದರು. ಆಗ ಅಫಿದವಿತ್‌ನಲ್ಲಿನ ಗೊಂದಲ ಕುರಿತು ಉಲ್ಲೇಖೀಸಿದ ನ್ಯಾಯಪೀಠ, ನೀವು ಅಫಿದವಿತ್‌ನಲ್ಲಿ ಒಂದು ಕಡೆ ತಪ್ಪು ಮಾಡಿದ್ದಾಗಿ ಉಲ್ಲೇಖೀಸಿದರೆ, ಮತ್ತೂಂದು ಕಡೆ ನ್ಯಾಯಾಂಗ ನಿಂದನಾತ್ಮಕ ಹೇಳಿಕೆ ನೀಡಿಲ್ಲ ಎಂದು ಹೇಳಿದ್ದೀರಿ. ನೀವು ನಿಜಕ್ಕೂ ಹೇಳಲು ಬಯಸುತ್ತಿರುವು ದಾದರೂ ಏನು ಎಂಬುದನ್ನು ಅರ್ಥಮಾಡಿಕೊಳ್ಳಲು ನಮಗೆ ಕಷ್ಟವಾಗುತ್ತಿದೆ ಎಂದು ಹೇಳಿತು. ಅಲ್ಲದೆ, ಹೇಳಿಕೆಗೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಹೇಳಲು ನೀವು 22 ಪುಟಗಳ ಅಫಿದವಿತ್ ಸಲ್ಲಿಸುತ್ತೀರಿ. ಆದರೆ ಅದರಲ್ಲಿ ಸಂಪೂರ್ಣವಾದ ವಿಷಾದ ಎಲ್ಲಿದೆ? ಅಫಿದವಿತ್‌ನಲ್ಲಿ ನೀವು “ರಿಗ್ರೆಟ್'(ವಿಷಾದ) ಎಂಬ ಪದವನ್ನು ಆವರಣದಲ್ಲಿ ಬರೆದಿದ್ದೀರಿ. ಅದರ ಅರ್ಥವೇನು ಎಂದು ನ್ಯಾಯಪೀಠ ಪ್ರಶ್ನಿಸಿತು.
Related Articles
Advertisement
ಇದಕ್ಕೆ “ಈ ಪ್ರಕರಣವನ್ನು ಎಷ್ಟು ದಿನಗಳವರೆಗೆ ಎಳೆಯುತ್ತೀರಿ’ ಎಂದು ಪ್ರಶ್ನಿಸಿದ ನ್ಯಾಯಪೀಠ, ಅನಂತರ ರಾಹುಲ್‌ಗೆ ಹೊಸ ಅಫಿದವಿತ್ ಸಲ್ಲಿಸಲು ಅವಕಾಶ ನೀಡಿ, ವಿಚಾರಣೆಯನ್ನು ಮೇ 6ಕ್ಕೆ ಮುಂದೂಡಿತು.
ರಾಹುಲ್ ಪೌರತ್ವ ನೋಟಿಸ್ಹೊಸದಿಲ್ಲಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಮತ್ತೆ ಪೌರತ್ವದ ಕಾಟ ಕಾಡಲು ಶುರುವಾಗಿದೆ. ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರು ರಾಹುಲ್ ಪೌರತ್ವದ ಕುರಿತಂತೆ ಪ್ರಶ್ನೆ ಎತ್ತಿದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯ ಪ್ರತಿಕ್ರಿಯೆ ಕೇಳಿ ರಾಹುಲ್‌ಗೆ ನೋಟಿಸ್ ಜಾರಿ ಮಾಡಿದೆ. ಇನ್ನು 15 ದಿನಗಳಲ್ಲಿ ಸ್ಪಷ್ಟವಾದ ಉತ್ತರ ನೀಡುವಂತೆ ಸೂಚನೆ ನೀಡಲಾಗಿದೆ. ಈ ಬೆನ್ನಲ್ಲೇ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ವಾಕ್ಸಮರ ನಡೆದಿದೆ. ರಾಹುಲ್ ಭಾರತದ ಮಣ್ಣಲ್ಲೇ ಹುಟ್ಟಿ, ಇಲ್ಲಿಯೇ ಬೆಳೆದವರು ಎಂದು ಪ್ರಿಯಾಂಕಾ ವಾದ್ರಾ ತಿರುಗೇಟು ನೀಡಿದ್ದಾರೆ.