Advertisement

ರಾಹುಲ್ ಆಪ್ತರಿಗೆ ರಕ್ಷಣಾ ಒಪ್ಪಂದ?

07:46 AM May 05, 2019 | mahesh |

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿಗೆ ಆಪ್ತರೊಬ್ಬರಿಗೆ ರಕ್ಷಣಾ ಒಪ್ಪಂದ ನೀಡಲಾಗಿದೆ ಎಂದು ಮಾಧ್ಯಮಗಳ ವರದಿಯನ್ನು ಉಲ್ಲೇಖೀಸಿ ಕೇಂದ್ರ ಸಚಿವ ಅರುಣ್‌ ಜೇಟ್ಲಿ ಆರೋಪಿಸಿದ್ದಾರೆ. ಯುಪಿಎ ಅಧಿಕಾರದಲ್ಲಿದ್ದಾಗ ಈ ಒಪ್ಪಂದವನ್ನು ನೀಡಲಾಗಿದ್ದು, ಈ ಗಂಭೀರ ಆರೋಪಕ್ಕೆ ರಾಹುಲ್ ಪ್ರತಿಕ್ರಿಯಿಸಬೇಕು ಎಂದಿದ್ದಾರೆ. ಆದರೆ ಜೇಟ್ಲಿ ಆರೋಪವನ್ನು ನಿರಾಕರಿಸಿದ ಹಿರಿಯ ಕಾಂಗ್ರೆಸ್‌ ಮುಖಂಡ ಕಪಿಲ್ ಸಿಬಲ್, ಈ ಆರೋಪ ನಿರಾಧಾರ ಎಂದಿದ್ದಾರೆ.

Advertisement

ರಾಹುಲ್ ಹಾಗೂ ಅವರ ಸೋದರಿ ಪ್ರಿಯಾಂಕಾ ವಾದ್ರಾ ಲಂಡನ್‌ನಲ್ಲಿ ಸ್ಥಾಪಿಸಿದ ಬ್ಯಾಕಾಪ್ಸ್‌ ಸರ್ವೀಸಸ್‌ ಕಂಪನಿಗೆ ಉಲ್ರಿಕ್‌ ಮೆಕ್‌ನೈಟ್ ಕೂಡ ನಿರ್ದೇಶಕರಾಗಿದ್ದರು. ಕಾಂಗ್ರೆಸ್‌ ನಾಯಕರ ಪುತ್ರಿಯನ್ನು ಈ ಮೆಕ್‌ನೈಟ್ ವಿವಾಹವಾಗಿದ್ದಾರೆ. ಇವರು ರಾಹುಲ್ ಗಾಂಧಿಯ ಆಪ್ತ ಬಳಗದಲ್ಲೊಬ್ಬರು. ಸಬ್‌ಮರೀನ್‌ ನಿರ್ಮಾಣಕ್ಕೆ ಫ್ರೆಂಚ್ ಕಂಪನಿಯೊಂದಕ್ಕೆ ಭಾರತೀಯ ಸೇನೆ ನೀಡಿದ ಒಪ್ಪಂದದಲ್ಲಿ ಮೆಕ್‌ನೈಟ್‌ಗೆ ಆಫ್ಸೆಟ್ ಒಪ್ಪಂದ ಸಿಕ್ಕಿದೆ. ಈ ಆಫ್ಸೆಟ್ ಒಪ್ಪಂದದಲ್ಲಿ ರಾಹುಲ್ ಪಾತ್ರವೇನು? ರಕ್ಷಣಾ ಒಪ್ಪಂದಗಳ ಡೀಲರ್‌ ಆಗಬೇಕೆಂದಿದ್ದರೇ? ಎಂದು ಜೇಟ್ಲಿ ಪ್ರಶ್ನಿಸಿದ್ದಾರೆ. ರಾಹುಲ್, ಮೆಕ್‌ನೈಟ್ ಹಾಗೂ ಬಾಲಿವುಡ್‌ ನಟ ಅಮಿತಾಭ್‌ ಬಚ್ಚನ್‌ರ ಸೋದರ ಅಜಿತಾಭ್‌ ಬಚ್ಚನ್‌ ಒಂದೇ ವಿಳಾಸವನ್ನು ಈ ಕಂಪನಿಗೆ ನೀಡಿದ್ದಾರೆ ಎಂದೂ ಜೇಟ್ಲಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next