ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಚೌಕಿದಾರ್ ಚೋರ್ ಹೈ ಆರೋಪಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತೂಮ್ಮೆ ಸುಪ್ರೀಂಕೋರ್ಟ್‌ಗೆ ಪ್ರತಿಕ್ರಿಯೆ ನೀಡಿದ್ದು, ಇದರಲ್ಲೂ ರಾಹುಲ್ ವಿಷಾದ ವ್ಯಕ್ತಪಡಿಸಿದ್ದಾ ರೆಯೇ ಹೊರತು ಕ್ಷಮೆ ಕೇಳಿಲ್ಲ.
ಅಷ್ಟೇ ಅಲ್ಲ, ಬಿಜೆಪಿ ನಾಯಕಿ ಮೀನಾಕ್ಷಿ ಲೇಖೀ ಸಲ್ಲಿಸಿರುವ ಈ ದೂರನ್ನು ವಜಾಗೊಳಿಸು ವಂತೆಯೂ ಅವರು ಕೋರಿದ್ದಾರೆ. ಚೌಕಿ ದಾರ್ ಚೋರ್ ಹೈ ಎಂಬುದಾಗಿ ಸುಪ್ರೀಂ ಕೋರ್ಟ್ ಹೇಳಿದೆ ಎಂಬುದನ್ನು ತಪ್ಪಾಗಿ ನಾನು ಹೇಳಿದ್ದೇನೆ. ಸುಪ್ರೀಂಕೋರ್ಟ್ ಅನ್ನು ಉಲ್ಲೇಖೀಸುವುದು ನನ್ನ ಉದ್ದೇಶವಾಗಿರಲಿಲ್ಲ ಎಂದು ರಾಹುಲ್ ಹೇಳಿದ್ದಾರೆ.
ಎ. 23ರಂದು ರಾಹುಲ್ ವಿರುದ್ಧ ಸುಪ್ರೀಂ ಕೋರ್ಟ್ ನ್ಯಾಯಾಂಗ ನಿಂದನೆ ನೋಟಿಸ್ ನೀಡಿದ್ದ ಹಿನ್ನೆಲೆಯಲ್ಲಿ ರಾಹುಲ್ ಈ ಪ್ರತಿಕ್ರಿಯೆ ನೀಡಿದ್ದಾರೆ.
ರಫೇಲ್ ವಿಚಾರಣೆ ಮುಂದೂಡಿಕೆಗೆ ವಿನಂತಿ: ರಫೇಲ್ ಒಪ್ಪಂದದ ಕುರಿತು ಡಿ.14 ರಂದು ಸುಪ್ರೀಂಕೋರ್ಟ್ ನೀಡಿದ್ದ ತೀರ್ಪಿನ ಮರುಪರಿಶೀಲನೆ ವಿಚಾರಣೆಯ ದಿನಾಂಕವನ್ನು ಮುಂದೂಡು ವಂತೆ ಸುಪ್ರೀಂಗೆ ಕೇಂದ್ರ ಸರಕಾರ ಮನವಿ ಮಾಡಿದೆ. ಮರು ಪರಿಶೀಲನೆ ಅರ್ಜಿ ಸಲ್ಲಿಸಿದ ಎಲ್ಲ ದಾವೆದಾರರಿಗೂ ಪ್ರತಿಕ್ರಿಯೆ ಪತ್ರಗಳನ್ನು ರವಾನಿಸಲು ಅವಕಾಶ ನೀಡಬೇಕು.
ಹೀಗಾಗಿ ಮಂಗಳವಾರ ನಿಗದಿಯಾಗಿರುವ ವಿಚಾರಣೆ ದಿನಾಂಕ ಮುಂದೂಡಬೇಕು ಎಂದು ಕೇಂದ್ರ ಆಗ್ರಹಿಸಿತ್ತು. ಆದರೆ ಮುಂದೂಡಿಕೆ ಬಗ್ಗೆ ಏನನ್ನೂ ಸ್ಪಷ್ಟಪಡಿಸದ ಸುಪ್ರೀಂ ಕೋರ್ಟ್, ಪತ್ರಗಳನ್ನು ರವಾನಿಸಲು ಅವಕಾಶ ನೀಡಿದೆ.