ಹಲವು ದಿನಗಳ ಹಿಂದೆಯೇ ಶೂಟಿಂಗ್ ಆಗಿ ಸೆನ್ಸಾರ್ ಆಗಿರುವ ಜಲನಿಧಿ ಫಿಲಂಸ್‌ನ ಅನಿಲ್ ಕುಮಾರ್, ಲೋಕೇಶ್ ಕೋಟ್ಯಾನ್ ಹಾಗೂ ರಾಜೇಶ್ ಕುಡ್ಲ ನಿರ್ಮಾಣದ ಸೂರಜ್ ಬೋಳಾರ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನದ “ರಾಹುಕಾಲ ಗುಳಿಗಕಾಲ’ ಸಿನೆಮಾ ಬಿಡುಗಡೆಯ ದಿನವನ್ನು ಆಗಸ್ಟ್‌ಗೆ ಮುಂದೂಡಿದೆ.
ಎಪ್ರಿಲ್ ಮೊದಲ ವಾರದಲ್ಲಿ ರಿಲೀಸ್ ಆಗಬೇಕೆಂದು ಮೊದಲಿಗೆ ನಿರ್ಧರಿಸಲಾಗಿತ್ತು. ಇದೇ ವೇಳೆ “ಇಂಗ್ಲೀಷ್’ ಸಿನೆಮಾ ರಿಲೀಸ್ ಸುದ್ದಿ ತಿಳಿಯುತ್ತಿದ್ದಂತೆ, ಎರಡೂ ಚಿತ್ರ ತಂಡದವರು ಒಮ್ಮತದಿಂದ ಮಾತುಕತೆ ನಡೆಸಿ, “ಇಂಗ್ಲೀಷ್’ ಮೊದಲಿಗೆ ಬರಲು ಅವಕಾಶ ನೀಡಿದ್ದಾರೆ. ಪರಿಣಾಮವಾಗಿ ರಾಹುಕಾಲ ಗುಳಿಗಕಾಲ ರಿಲೀಸ್ ಅನ್ನು ಮುಂದೂಡಲು ತೀರ್ಮಾನಿಸಲಾಗಿದೆ. ಸದ್ಯದ ಮಾಹಿತಿ ಪ್ರಕಾರ ರಾಹುಕಾಲ ಆಗಸ್ಟ್ ವೇಳೆಗೆ ತೆರೆಗೆ ಬರುವ ಸಿದ್ಧತೆಯಲ್ಲಿದೆ.
ಸಿನೆಮಾದ ಆಡಿಯೋ ರಿಲೀಸ್ ಇತ್ತೀಚೆಗೆ ಮಂಗಳೂರಿ ನಲ್ಲಿ ನಡೆಯಿತು. ಮಣಿಕಾಂತ್ ಕದ್ರಿ ಸಂಗೀತ ನೀಡಿ ದ್ದಾರೆ. ಮನೋಜ್ ಅವರು ಬರೆದ ಸಾಹಿತ್ಯಕ್ಕೆ ಸುಪ್ರಿಯಾ ರಾಮ್, ಕೀರ್ತನ್ ಹೊಳ್ಳ ಸ್ವರ ನೀಡಿದ್ದಾರೆ. ಅರ್ಜುನ್ ಕಾಪಿಕಾಡ್, ನವ್ಯತಾ ರೈ, ಅರವಿಂದ ಬೋಳಾರ್, ವಿಸ್ಮಯ ವಿನಾಯಕ್, ಚಂದ್ರಹಾಸ್ ಉಳ್ಳಾಲ್, ಸಂತೋಷ್ ಶೆಟ್ಟಿ, ಉಮೇಶ್ ಮಿಜಾರ್, ವಿಸ್ಮಯ ವಿನಾಯಕ್, ಮೈಮ್ ರಾಮ್‌ದಾಸ್ ಸಿನೆಮಾ ದಲ್ಲಿದ್ದಾರೆ. ಮಾಸ್ ಮಾದ ಸಾಹಸದಲ್ಲಿ ಕೈ ಜೋಡಿ ಸಿ ದ್ದಾರೆ. ಸಿದ್ದು ಜಿ.ಎಸ್. ಛಾಯಾಗ್ರಹಣ ಹಾಗೂ ಸುರೇಶ್ ಸಂಕಲನದಲ್ಲಿ ತೊಡಗಿಸಿದ್ದಾರೆ. “ಪತ್ತೀಸ್ ಗ್ಯಾಂಗ್’ ಸಿನೆಮಾ ಮಾಡಿದ ತಂಡ ರಾಹುಕಾಲದಲ್ಲಿ ತೊಡಗಿಸಿಕೊಂಡಿದೆ.
– ದಿನೇಶ್ ಇರಾ