Advertisement

ರಾಹಿ ಸ್ವರ್ಣ ಸಾಧನೆ: ಒಲಿಂಪಿಕ್‌ ಟಿಕೆಟ್‌

11:21 PM May 27, 2019 | Team Udayavani |

ಹೊಸದಿಲ್ಲಿ: ಮ್ಯೂನಿಚ್‌ನಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ವಿಶ್ವಕಪ್‌ ಶೂಟಿಂಗ್‌ ಸ್ಪರ್ಧೆಯಲ್ಲಿ ಭಾರತದ ರಾಹಿ ಸರ್ನೋಬತ್‌ ವನಿತೆಯರ 25 ಮೀ. ಪಿಸ್ತೂಲ್‌ ಸ್ಪರ್ಧೆಯಲ್ಲಿ ಚಿನ್ನದ ಪದಕಕ್ಕೆ ಗುರಿ ಇರಿಸಿದ್ದಾರೆ. ಈ ಸಾಧನೆಯೊಂದಿಗೆ ಟೋಕಿಯೊ ಒಲಿಂಪಿಕ್‌ಗೆ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಏಶ್ಯನ್‌ ಗೇಮ್ಸ್‌ ಚಾಂಪಿಯನ್‌ ರಾಹಿ ವಿಶ್ವಕಪ್‌ನಲ್ಲಿ ಗೆದ್ದ 2ನೇ ಚಿನ್ನ ಇದಾಗಿದೆ. ಫೈನಲ್‌ ಪ್ರವೇಶಿಸಿದ್ದ ಭಾರತದ ಮತ್ತೋರ್ವ ಶೂಟರ್‌ ಮನು ಬಾಕರ್‌ 5ನೇ ಸ್ಥಾನಿಯಾದರು.

ಸೌರಭ್‌ ಅಮೋಘ ಸಾಧನೆ
ಇದೇ ವೇಳೆ ಪುರುಷರ 10 ಮೀ. ಏರ್‌ ಪಿಸ್ತೂಲ್‌ ಸ್ಪರ್ಧೆಯಲ್ಲಿ ಸೌರಭ್‌ ಚೌಧರಿ ನೂತನ ದಾಖಲೆಯೊಂದಿಗೆ ಬಂಗಾರದ ಪದಕ ಗೆದ್ದರು. ಇವರ ಸಾಧನೆಯ ವೇಳೆ ಸೀನಿಯರ್‌, ಜೂನಿಯರ್‌ ವಿಶ್ವದಾಖಲೆಗಳೆರಡೂ ಪತನಗೊಂಡವು.

ಇವರಿಬ್ಬರ ಅಮೋಘ ಸಾಹ ಸದಿಂದ ಮ್ಯೂನಿಚ್‌ ಸ್ಪರ್ಧೆಯಲ್ಲಿ ಭಾರತವೀಗ 3 ಚಿನ್ನ ಗೆದ್ದು ಅಗ್ರಸ್ಥಾನ ಅಲಂಕರಿಸಿದೆ. ಚೀನ ಒಂದು ಚಿನ್ನ, ಒಂದು ಬೆಳ್ಳಿ ಮತ್ತು 3 ಕಂಚಿನ ಪದಕದೊಂದಿಗೆ ದ್ವಿತೀಯ ಸ್ಥಾನದಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next