ನಟಿ ರಾಗಿಣಿ ದ್ವಿವೇದಿ ಸದ್ದಿಲ್ಲದೆ ಹೊಸ ಮಹಿಳಾ ಪ್ರಧಾನ ಚಿತ್ರವೊಂದನ್ನು ಒಪ್ಪಿಕೊಂಡಿದ್ದಾರೆ. ಅಂದಹಾಗೆ ಆ ಚಿತ್ರದ ಹೆಸರು “ಸಾರಿ ಕರ್ಮ ರಿಟರ್ನ್ಸ್’. ಆ್ಯಕ್ಷನ್ ಕಂ ಕ್ರೈಂ-ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಸರಳವಾಗಿ ನೆರವೇರಿತು.
ಬಹು ದಿನಗಳ ನಂತರ ಔಟ್ ಆ್ಯಂಡ್ ಔಟ್ ಮಹಿಳಾ ಪ್ರಧಾನ ಕಥಾಹಂದರದಲ್ಲಿ ನಾಯಕಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದಕ್ಕೆ ರಾಗಿಣಿ ಕೂಡ ಫುಲ್ ಖುಷಿಯಾಗಿದ್ದಾರೆ. “ನಾವು ಏನೇ ಒಳ್ಳೆಯ ಕೆಲಸ ಅಥವಾ ಕೆಟ್ಟ ಕೆಲಸ ಮಾಡಿದ್ರೂ, ಅದರ ಪ್ರತಿಫಲ ನಮ್ಮ ಹಿಂದೆಯೇ ಬರುತ್ತದೆ. ನಾವು ಮಾಡಿದ ಕರ್ಮದ ಫಲದಿಂದ ಎಂದಿಗೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.
ಇದೇ ಕಾನ್ಸೆಪ್ಟ್ನಲ್ಲಿ ಈ ಸಿನಿಮಾ ನಡೆಯುತ್ತದೆ. ಅದು ಹೇಗಿರುತ್ತದೆ ಅನ್ನೋದನ್ನ ಸಿನಿಮಾದಲ್ಲೇ ನೋಡಬೇಕು. ಸಿನಿಮಾದಲ್ಲಿ ಒಂದೊಳ್ಳೆ ಮೆಸೇಜ್ ಕೂಡ ಇದೆ. ಮೊದಲ ಬಾರಿಗೆ ಇದರಲ್ಲೊಂದು ಡಿಫರೆಂಟ್ ಕ್ಯಾರೆಕ್ಟರ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಹೊಸ ಥರದ ಕ್ಯಾರೆಕ್ಟರ್‌ನಲ್ಲಿ ಕಾಣಿಸಿಕೊಳ್ಳುತ್ತಿರುವುದಕ್ಕೆ ನನಗೂ ಖುಷಿಯಾಗುತ್ತದೆ’ ಎನ್ನುತ್ತಾರೆ.
“ಕಿಸ್ ಇಂಟರ್‌ನ್ಯಾಷನಲ್ ಪ್ರೊಡಕ್ಷನ್’ ಬ್ಯಾನರ್‌ನಲ್ಲಿ ನವೀನ್ ಕುಮಾರ್ (ಕೆನಡಾ) ಈ ಚಿತ್ರವನ್ನು ನಿರ್ಮಿಸುತ್ತಿ¨ªಾರೆ. ಬ್ರಹ್ಮ ಅವರ ನಿರ್ದೇಶನದಲ್ಲಿ ಚಿತ್ರ ಮೂಡಿಬರುತ್ತಿದೆ. ಸಕಲೇಶಪುರ, ಕಗ್ಗಲೀಪುರ, ಬೆಂಗಳೂರು ಸುತ್ತಮುತ್ತ “ಸಾರಿ ಕರ್ಮ ರಿಟರ್ನ್ಸ್’ ಚಿತ್ರದ ಚಿತ್ರೀಕರಣ ನಡೆಸಲು ಚಿತ್ರತಂಡ ಪ್ಲಾನ್ ಹಾಕಿಕೊಂಡಿದೆ.
ಚಿತ್ರ ಹಾಡುಗಳಿಗೆ ರಾಜು ಎಮ್ಮಿಗನೂರು ಸಂಗೀತ ಸಂಯೋಜನೆಯಿದ್ದು, ಚಿತ್ರಕ್ಕೆ ರಾಜೀವ್ ಗಣೇಶನ್ ಛಾಯಾಗ್ರಹಣ, ಭೂಪತಿರಾಜ್ ಸಂಕಲನದೆ.