Advertisement

ಸಾಂಬಾನಿಂದ ರಾಗಿಣಿಗೆ ಡ್ರಗ್ಸ್‌ ತರುತ್ತಿದ್ದ ಕಾರು ಚಾಲಕ

11:49 AM Sep 08, 2020 | Suhan S |

ಬೆಂಗಳೂರು: ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿರಾಗಿಣಿ ಕಾರು ಚಾಲಕ ಇಮ್ರಾನ್‌ ಎಂಬಾತ ನನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈಗಾಗಲೇ ಬಂಧನಕ್ಕೊಳ ಗಾಗಿ ರುವ ಆಫ್ರಿಕಾ ಮೂಲದ ಲೂಪ್‌ ಪೆಪ್ಪರ್‌ ಸಾಂಬಾ ಜತೆ ನಟಿ ರಾಗಿಣಿ ಮಾದಕ ವಸ್ತು ಪಡೆಯುವುದು ಹಾಗೂ ಹಣಕಾಸು ವ್ಯವಹಾರ ಇಟ್ಟುಕೊಂಡಿದ್ದರು ಎಂದು ಹೇಳಲಾಗಿದೆ.

Advertisement

ಹೀಗಾಗಿ ನಟಿ ರಾಗಿಣಿ ಸೂಚನೆ ಮೇರೆಗೆ ಕಾರು ಚಾಲಕ ಇಮ್ರಾನ್‌, ಸಾಂಬಾ ಭೇಟಿ ಯಾಗಿ ಆತ ಕೊಡುತ್ತಿದ್ದ ವಸ್ತುಗಳನ್ನು ರಾಗಿಣಿಗೆ ತಂದು ಕೊಡುತ್ತಿದ್ದ. ಈ ಕುರಿತು ವಿಚಾರಣೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಡಾರ್ಕ್‌ನೆಟ್‌ ನಲ್ಲಿಯೇ ವ್ಯವಹಾರ: ಮೊಹಮ್ಮದ್‌ ಹಿಪ್ಪುಲ್ಲಾ ಡಾರ್ಕ್‌ನೆಟ್‌ ವೆಬ್‌ ಮೂಲಕ ಮಾದಕ ವಸ್ತುಗಳನ್ನು ಖರೀದಿ ಮಾಡುತ್ತಿದ್ದು, ಅಂತಾರಾಷ್ಟ್ರೀಯ ಡ್ರಗ್‌ ಪೆಡ್ಲರ್‌ ಗಳಿಂದ ಖರೀ ದಿಸಿದ್ದಾನೆ. ಅಲ್ಲದೆ, ಬಿಟ್‌ ಕಾಯಿನ್‌ ಬಳಸಿ ಎಲ್‌ಎಸ್‌ಡಿ, ಎಂಡಿಎಂಎ, ಕೋಕೇನ್‌ ಗಳನ್ನು ತರಿಸಿಕೊಳ್ಳುತ್ತಿದ್ದ. ಆರೋಪಿ ಕೋಡ್‌ ವರ್ಡ್‌ಗಳ ಮೂಲಕ ಡ್ರಗ್‌ಗಳನ್ನು ಬೆಂಗಳೂರಿಗೆ ತಂದು ತಾನೂ ಆಯೋಜಿಸುತ್ತಿದ್ದ ಪಾರ್ಟಿಗಳಲ್ಲಿ ಬಳಸುತ್ತಿದ್ದ ಎಂಬುದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.

ವೈಭವ್‌ ಜೈನ್‌ ಅಲಿಯಾಸ್‌ ವೈಭಲ್‌ ಅಲಿ ಆಪ್ತನ ಬಂಧನ : ಡ್ರಗ್‌ ಪ್ರಕರಣದಲ್ಲಿ ಆರೋಪಿಯಾಗಿರುವ ಉದ್ಯಮಿ ವೈಭವ್‌ ಜೈನ್‌ ಆಪ್ತನನ್ನು ಪೂರ್ವ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಮೊಹಮ್ಮದ್‌ ಹಿಪ್ಪುಲ್ಲಾ ಅಲಿಯಾಸ್‌ ಎಂ.ಡಿ. ಬಿ.ಕಾಂ. ವ್ಯಾಸಂಗ ಮಾಡಿದ್ದಾನೆ. ಆರೋಪಿ ವಿದ್ಯಾರ್ಥಿ ದೆಸೆಯಲ್ಲಿಯೇ ದುಶ್ಚಟಗಳಿಗೆ ದಾಸನಾಗಿದ್ದಾನೆ. ಹೀಗಾಗಿ ಅರ್ಧದಲ್ಲಿಯೇ ವಿದ್ಯಾಭ್ಯಾಸ ಮೊಟಕುಗೊಳಿಸಿದ್ದಾನೆ. ನಂತರ ವೈಭವ್‌ ಜೈನ್‌ ಮಾಲಿಕತ್ವದ ಮ್ಯಾಚ್‌ಲೆಸ್‌ ಪೋರಮೋಸ್‌ ಎಂಬ ಕಂಪನಿಯಲ್ಲಿ ಪ್ರಾಡೆಕ್ಟ್ ಪ್ರಮೋಟರ್‌ ಆಗಿ ಕೆಲಸಕ್ಕೆಸೇರಿಕೊಂಡು ರಸ್ತೆ ಬದಿಯಲ್ಲಿ 200 ರೂ.ಗೆ ಪ್ರಾಡೆಕ್ಟ್ ಮಾರಾಟ ಮಾಡುತ್ತಿದ್ದ. ಜೈನ್‌ನ ಪಾರ್ಟಿ ಆಯೋಜನೆ ರೂಪುರೇಷೆಗಳನ್ನು ಅರಿತುಕೊಂಡ ಆರೋಪಿ, ತನ್ನದೇ ಪ್ಯೂಜನ್‌ ಎಂಟರ್‌ಟೈನ್‌ ಮೆಂಟ್‌ ಎಂಬ ಇವೆಂಟ್‌ ಆರ್ಗನೈಜೇಷನ್‌ ಕಂಪನಿ ಸ್ಥಾಪಿಸಿ ಕೊಂಡಿದ್ದಾನೆ.

ಪಾರ್ಟಿಗಳನ್ನು ಆಯೋಜಿಸಿ ಪಾರ್ಟಿಗಳಲ್ಲಿ ಭಾಗಿಯಾಗುತ್ತಿದ್ದವರಿಗೆ ವಿದೇಶಗಳಿಂದ ಹಾಗೂ ಹೊರ ರಾಜ್ಯಗಳಿಂದ ಮಾದಕ ವಸ್ತುಗಳನ್ನು ತರಿಸಿ ಮಾರಾಟ ಮಾಡುತ್ತಿದ್ದ. ಅಲ್ಲದೆ, ಆಫ್ರಿಕಾ ಮತ್ತು ನೈಜಿರಿಯಾ ದೇಶಗಳ ಡ್ರಗ್‌ ಪೆಡ್ಲರ್‌ಗಳ ಜತೆ ಸಂಪರ್ಕ ಹೊಂದಿದ್ದಾನೆ. ಅವರಿಂದ ಕೋಕೇನ್‌, ವೀಡ್‌ ಆಯಿಲ್‌ ಹಾಗೂ ಇತರೆ ಮಾದಕ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದರು.

Advertisement

………………………………………………………………………………………………………………………………………………………

ಡೆಲಿವರಿ ಬಾಯ್ಸ್ : ಡ್ರಗ್ಸ್‌ ಮಾರಾಟ : ಬೆಂಗಳೂರು: “ಡ್ರಗ್ಸ್‌’ ದಂಧೆಯಲ್ಲಿ ತೊಡಗಿಸಿಕೊಂಡಿದ್ದ 11 ಮಂದಿಯನ್ನು ಪೂರ್ವ ವಿಭಾಗ ಪೊಲೀಸರು ಬಂಧಿಸಿ 90 ಲಕ್ಷ ರೂ. ಮೌಲ್ಯದ ಮಾಧಕ ವಸ್ತುವನ್ನು ವಶಕ್ಕೆ ಪಡೆದಿದ್ದಾರೆ.ಹಲಸೂರು ಪೊಲೀಸರಿಂದ ಬಂಧಿಸಲ್ಪಟ್ಟಿರುವ ಎಂ. ಲೋಹಿತ್‌ ಬಿಎಸ್‌ಸಿ ಪದವೀಧರನಾಗಿದ್ದು

ಬೆಂಗಳೂರು ಹಾಗೂ ಗೋವಾದಲ್ಲಿ ನಡೆಯುತ್ತಿದ್ದ ರೇವ್‌ ಪಾರ್ಟಿಗಳಲ್ಲಿ ಮಾದಕ ವಸ್ತುಗಳ ಸೇವನೆ ರುಚಿ ಹತ್ತಿಸಿಕೊಂಡಿದ್ದ. ಬಳಿಕ ಸಂಪಾದನೆಗಾಗಿ ಪರಿಚಯಸ್ಥ ಆಫ್ರಿಕಾ ಹಾಗೂ ನೈಜೀರಿಯನ್‌ ದಂಧೆಕೋರರಿಂದ ಮಾದಕ ವಸ್ತುಗಳನ್ನು ಖರೀದಿಸಿ ಪಾರ್ಟಿಗಳಿಗೆ, ಶಾಲಾ ಕಾಲೇಜು ಗಳ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ. ಡ್ರಗ್ಸ್‌ ಡೆಲಿವರಿ: ಆರೋಪಿ ಅಜೀಜ್‌ ನಿಯಾಜ್‌ ರ್ಯಾಪಿಡೋ ಡೆಲಿವರಿ ಬಾಯ್‌ ಆಗಿದ್ದಾನೆ. ಗುರುಪ್ರಸಾದ್‌ ಡುನ್ಜೋ ಕಂಪನಿಯಲ್ಲಿ ಡೆಲಿವರಿ ಬಾಯ್‌ ಆಗಿದ್ದಾರೆ. ಈ ಇಬ್ಬರನ್ನು ಸಂಪರ್ಕಿಸುತ್ತಿದ್ದ ದಂಧೆಕೋರರು ಪ್ರತಿ ಟ್ರಿಪ್‌ಗೆ 500 ರೂ. ನೀಡುವುದಾಗಿ ಒಪ್ಪಿಸಿ ತಮ್ಮ ಗ್ರಾಹಕರಿಗೆ ಮಾದಕ ವಸ್ತುಗಳನ್ನು ಇವರ ಮೂಲಕ ತಲುಪಿಸುತ್ತಿದ್ದರು ಎಂಬ ಸಂಗತಿ ತನಿಖೆಯಲಿ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಮಮೂರ್ತಿ ನಗರ ಪೊಲೀಸರಿಂದ ಬಂಧಿತನಾಗಿರುವ ಮೊಹಮ್ಮದ್‌ ಇರ್ಫಾನ್‌ ಎಂಬಾತ ಹಲವು ವರ್ಷಗಳಿಂದ ದಂಧೆಯಲ್ಲಿ ತೊಡಗಿಸಿಕೊಂಡಿದ್ದಾನೆ. ದಂಧೆ ನಡೆಸುವ ಸಲುವಾಗಿಯೇ ಅಪಾರ್ಟ್‌ಮೆಂಟ್‌ವೊಂದರಲ್ಲಿ ಪ್ರತ್ಯೇಕ ಫ್ಲ್ಯಾಟ್‌ ಹೊಂದಿದ್ದಾನೆ. ಆತನಿಂದ ಗಾಂಜಾ ಸೇರಿದಂತೆ ಅಪಾರ ಪ್ರಮಾಣದ ಸಿಂಥೆಟಿಕ್‌ ಡ್ರಗ್ಸ್‌ ಜಪ್ತಿ ಮಾಡಲಾಗಿದೆ. ಡಿ.ಜೆ ಹಳ್ಳಿ ಪೊಲೀಸರು ಬಂಧಿಸಿರುವ ದಿಲೀಪ್‌ ಕುಮಾರ್‌ ನನ್ನು ಕೂಡ ಕೊರಿಯರ್‌ ಬಾಯ್‌ ಆಗಿದ್ದು, ಹಣದಾಸೆಗೆ ಮಾದಕ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next