ಕಳೆದ ಆರೇಳು ತಿಂಗಳಿನಿಂದ ಸಿನಿಮಾಕ್ಕಿಂತ ಹೆಚ್ಚಾಗಿ ಡ್ರಗ್ಸ್ ಪ್ರಕರಣದಲ್ಲಿ ಸುದ್ದಿಯಾಗಿದ್ದ ನಟಿ ರಾಗಿಣಿ, ಈಗ ಮತ್ತೆ ಸಿನಿಮಾದಲ್ಲಿ ಸಕ್ರಿಯಾಗುತ್ತಿದ್ದಾರೆ. ಜೈಲಿಗೆ ಹೋಗುವ ಮುನ್ನಾ ಒಪ್ಪಿಕೊಂಡಿದ್ದ, ಮತ್ತು ಈಗಾಗಲೇ ಶುರುವಾಗಿ ಅರ್ಧಕ್ಕೆ ನಿಂತಿದ್ದ ತಮ್ಮ ಕೆಲ ಚಿತ್ರಗಳನ್ನು ಪೂರ್ಣಗೊಳಿಸುವ ಕೆಲಸದಲ್ಲಿ ನಿರತವಾಗಿರುವ ರಾಗಿಣಿ, ಇತ್ತೀಚೆಗೆ ಹೊಸದಾಗಿ “ಕರ್ವ-3′ ಚಿತ್ರವನ್ನು ಒಪ್ಪಿಕೊಂಡಿದ್ದರು. ಇದೀಗ ರಾಗಿಣಿ ಮತ್ತೂಂದು ಹೊಸ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಅಂದಹಾಗೆ, ಆ ಚಿತ್ರದ ಹೆಸರು “ಜಾನಿ ವಾಕರ್’.
ಈ ಚಿತ್ರದಲ್ಲಿ ರಾಗಿಣಿ ಖಡಕ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಕಾಣಿಸಿ ಕೊಳ್ಳುತ್ತಿದ್ದಾರಂತೆ. ಈ ಹಿಂದೆ “ರಾಗಿಣಿ ಐಪಿಎಸ್’, “ಎಂಎಂಸಿಹೆಚ್’ ಸೇರಿದಂತೆ ಕೆಲವು ಚಿತ್ರಗಳಲ್ಲಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ರಾಗಿಣಿ, ಈಗ ಮತ್ತೂಮ್ಮೆ ಅಂಥದ್ದೇ ಪಾತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ.
ಇದನ್ನೂ ಓದಿ:ಮಾ.24ರಂದು ಉದಯವಾಣಿ ಫೇಸ್ ಬುಕ್ ಲೈವ್ ನಲ್ಲಿ ‘ದಿಯಾ’ ಖ್ಯಾತಿಯ ಪೃಥ್ವಿ ಅಂಬಾರ್
“ಜಾನಿ ವಾಕರ್’ ಚಿತ್ರದಲ್ಲಿ ತಮ್ಮ ಪಾತ್ರದ ಬಗ್ಗೆ ಮಾತನಾಡುವ ರಾಗಿಣಿ, “ಈ ಹಿಂದೆ ಕೆಲವು ಸಿನಿಮಾಗಳಲ್ಲಿ ಸೂಪರ್ ಕಾಪ್ ಕ್ಯಾರೆಕ್ಟರ್ ಮಾಡಿದ್ದರೂ, ಅದೆಲ್ಲದಕ್ಕಿಂತ ಈ ಕ್ಯಾರೆಕ್ಟರ್ ತುಂಬ ಡಿಫರೆಂಟ್ ಆಗಿದೆ. ತುಂಬ ರಫ್ ಆ್ಯಂಡ್ ಟಫ್ ಆಗಿರುವಂಥ, ಅಷ್ಟೇ ಬ್ರಿಲಿಯೆಂಟ್ ಆಫೀಸರ್ ಕ್ಯಾರೆಕ್ಟರ್ ಇದು. ಇಡೀ ಸಿನಿಮಾದ ಸ್ಟೋರಿ ನನ್ನ ಕ್ಯಾರೆಕ್ಟರ್ ಸುತ್ತಲೇ ನಡೆಯುತ್ತದೆ. ನನಗೂ ಕೂಡ ಈ ಸಬೆjಕ್ಟ್ ಮತ್ತು ಕ್ಯಾರೆಕ್ಟರ್ ಮೇಲೆ ತುಂಬ ನಿರೀಕ್ಷೆ ಇದೆ’ ಎನ್ನುತ್ತಾರೆ.
“ಜಾನಿ ವಾಕರ್’ ಕನ್ನಡದ ಜೊತೆಗೆ ತೆಲುಗು ಮತ್ತಿತರ ಭಾಷೆಗಳಲ್ಲೂ ನಿರ್ಮಾಣವಾಗುತ್ತಿದ್ದು, ಸದ್ಯ ರಾಗಿಣಿ “ಜಾನಿ ವಾಕರ್’ ಚಿತ್ರದ ಕಾಪ್ ಪಾತ್ರಕ್ಕೆ ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಒಟ್ಟಾರೆ ಮತ್ತೂಮ್ಮೆ ಖಾಕಿ ತೊಟ್ಟು ಖಡಕ್ ಪಾತ್ರದಲ್ಲಿ ಪ್ರೇಕ್ಷಕರ ಮುಂದೆ ಬರಲು ರೆಡಿಯಾಗಿರುವ ತುಪ್ಪದ ಹುಡುಗಿ ಪ್ರೇಕ್ಷಕರಿಗೆ ಎಷ್ಟರ ಮಟ್ಟಿಗೆ ಇಷ್ಟವಾಗುತ್ತಾರೆ ಅನ್ನೋದು “ಜಾನಿ ವಾಕರ್’ ತೆರೆಗೆ ಬಂದ ಮೇಲಷ್ಟೇ ಗೊತ್ತಾಗಲಿದೆ.
ಇದನ್ನೂ ಓದಿ: ಸಖತ್ ನಲ್ಲಿ ಅಂಧನಾದ ಗಣೇಶ್: ಕುತೂಹಲ ಹೆಚ್ಚಿಸಿದ ಹೊಸತರದ ಪಾತ್ರ