Advertisement

ರಾಗಿ ಪ್ಯಾನ್‌ ಕೇಕ್‌

01:50 PM Jun 28, 2019 | Team Udayavani |

ಹಬ್ಬ ಬಂತೆಂದರೆ ಅಲ್ಲಿ ಸಂಭ್ರಮ. ವಿವಿಧ ಬಗೆಯ ಅಡುಗೆ ಮಾಡುವುದರಲ್ಲಿ ಖುಷಿ ಎಲ್ಲವೂ ಇರುತ್ತದೆ. ಸಿಹಿ ತಿಂಡಿಗಳನ್ನು ಹಬ್ಬದ ಸಮಯದಲ್ಲಿ ಮಾಡುವುದು ಸಾಮಾನ್ಯ. ಆದರೆ ಇತ್ತೀಚೆಗೆ ಸಿಹಿತಿಂಡಿಗಳ ಜತೆಗೆ ವಿವಿಧ ಮಾದರಿಯ ಕೇಕ್‌ ಮಾಡಲಾ ರಂಭಿಸಿದ್ದಾರೆ. ಹಲವು ಪೋಷಕಾಂಶಗಳಿಂದ ಕೂಡಿರುವ ರಾಗಿಯಲ್ಲೂ ಕೇಕ್‌ ತಯಾರಿಸಬಹುದು ಮನೆಯಲ್ಲೇ ಸುಲಭವಾಗಿ ರಾಗಿ ಪಾನ್‌ ಕೇಕ್‌ ತಯಾರಿಸಬಹುದು.

Advertisement

ಬೇಕಾಗುವ ಸಾಮಗ್ರಿ
ರಾಗಿಹಿಟ್ಟು- 400 ಗ್ರಾಂ
ನೀರು – ಕಾಲು ಲೀ.
ಹಾಲು- ಅರ್ಧ ಲೀ.
ಮೊಟ್ಟೆ-3
ತಾಳೆ ಬೆಲ್ಲ – 90 ಗ್ರಾಂ
ಬೇಕಿಂಗ್‌ ಸೋಡ- ಒಂದು ಚಿಟಿಕೆ

ಮಾಡುವ ವಿಧಾನ
ಮೊದಲಿಗೆ ರಾಗಿ ಹಿಟ್ಟು, ತಾಳೆ ಬೆಲ್ಲ, ಬೇಕಿಂಗ್‌ ಸೋಡಾವನ್ನು ಬೌಲ್‌ಗೆ ಹಾಕಿ. ಅನಂತರ ಅದಕ್ಕೆ ನೀರು ಹಾಕಿ. ಬೌಲ್‌ಗೆ ಹಾಕಿದ ಎಲ್ಲ ಸಾಮಾನುಗಳನ್ನು ಮಿಕ್ಸ್‌ ಮಾಡಿಕೊಳ್ಳಿ. ರಾಗಿ ಹಿಟ್ಟು ಉಂಡೆಗಳಾಗದಂತೆ ನೋಡಿಕೊಳ್ಳಿ. ಚೆನ್ನಾಗಿ ಕಲಸಿದ ಹಿಟ್ಟಿಗೆ ಮೊಟ್ಟೆಯನ್ನು ಹಾಕಿ. ಇದರಿಂದ ಹಿಟ್ಟಿಗೆ ಅಂಟು ಬರುತ್ತದೆ. ಹಿಟ್ಟು ಚೆನ್ನಾಗಿ ಅಂಟು ಬರುವಂತೆ ಕಲಸಿ. ಅನಂತರ ಅದಕ್ಕೆ ಹಾಲು ಹಾಕಿ. ಹಿಟ್ಟು ನಯವಾಗಿ ಮತ್ತು ದಪ್ಪವಾಗಿರುವಂತೆ ನೋಡಿಕೊಳ್ಳಿ.  ಹಿಟ್ಟು ಸರಿಯಾಗಿ ಹದವಾದ ನಂತರ ಪ್ಯಾನ್‌ ತೆಗೆದುಕೊಂಡು ಸ್ವಲ್ಪ ಬಿಸಿ ಮಾಡಿ. ಬಿಸಿಯಾದ ಪ್ಯಾನ್‌ಗೆ ಸೌಟ್‌ನಲ್ಲಿ ಹಿಟ್ಟನ್ನು ಹಾಕಿ ಅನಂತರ ಅದನ್ನು ಸುತ್ತಲೂ ಹರಡಿ. ಇದು ಬಿಸಿಯಾಗಿರುವಾಗಲೇ ತಿನ್ನಲು ಚೆನ್ನಾಗಿರುತ್ತದೆ. ಇದನ್ನು ಜೇನುತುಪ್ಪ, ಸಕ್ಕರೆ ಪಾಕದಲ್ಲಿ ಅದ್ದಿ ತಿನ್ನಬಹುದು

Advertisement

Udayavani is now on Telegram. Click here to join our channel and stay updated with the latest news.

Next