Advertisement
ರಾಗಿಯಲ್ಲಿ ಅತ್ಯಧಿಕ ಕ್ಯಾಲ್ಸಿಯಂ ಮತ್ತು ಕಬ್ಬಿಣದ ಅಂಶಗಳನ್ನೊಳಗೊಂಡಿದೆ. ಇದು ಒಂದು ಉತ್ತಮ ಆಹಾರ ಬೆಳೆಯಾಗಿದ್ದು ಮಕ್ಕಳು ದೊಡ್ಡವರೆನ್ನದೆ ಉಪಯೋಗಿಸಬಹುದು. ರಾಗಿಮುದ್ದೆ ಅತ್ಯಂತ ಜನಪ್ರಿಯ ಆಹಾರ ಪ್ರಕಾರವಾಗಿದೆ.
Related Articles
Advertisement
ಬೇಕಾಗುವ ಸಾಮಾಗ್ರಿಗಳುರಾಗಿ ಹಿಟ್ಟು- 2 ಕಪ್ ನೀರು- 4 ಕಪ್ ತಯಾರಿಸುವ ವಿಧಾನ:
ಒಂದು ಪಾತ್ರೆಗೆ ನೀರನ್ನು ಹಾಕಿ ಕುದಿಯಲು ಬಿಡಿ, ನೀರು ಚೆನ್ನಾಗಿ ಕುದಿಯುವಾಗ ರಾಗಿಹಿಟ್ಟನ್ನು ಹಾಕಿ, 10 ನಿಮಿಷ ಹಾಗೆ ಕುದಿಯಲು ಇಡಬೇಕು, ಅದನ್ನು ತಿರುಗಿಸಬಾರದು, ಹಿಟ್ಟು ಹೇಗೆ ಹಾಕಿರುತ್ತಿರೋ ಹಾಗೆ ಕುದಿಯಬೇಕು.ನಂತರ ಒಂದು ಸೌಟನ್ನು ತೆಗೆದುಕೊಂಡು ಮಧ್ಯಭಾಗದಿಂದ ಆ ಹಿಟ್ಟನ್ನು ಒಡೆದುಕೊಂಡು ಹಾಗೆ ಮೆಲ್ಲಗೆ ಗಂಟುಗಳು ಬರದಂತೆ ಚೆನ್ನಾಗಿ ತಿರುಗಿಸಬೇಕು. ತದನಂತರ ಮಧ್ಯೆ ಸ್ವಲ್ಪ ನೀರು ಸೇರಿಸಿಕೊಳ್ಳಿ ಬೇಕೆನಿಸಿದರೆ ಸ್ವಲ್ಪ ತೆಳು ಆದರೆ ಹಿಟ್ಟು ಸೇರಿಸಿ, ಗಟ್ಟಿಯಾದರೆ ನೀರು ಸೇರಿಸಿಕೊಂಡು ಗಂಟಿಲ್ಲದಂತೆ ತಿರುಗಿಸಿ. ಆ ಬಳಿಕ ಒಲೆಯ ಮೇಲಿಂದ ಇಳಿಸಿಕೊಂಡು ಹಿಟ್ಟು ಬಿಸಿ ಇರುವಾಗಲೇ ಅದನ್ನು ಕಟ್ಟಬೇಕು ಕೈಯನ್ನು ನೀರು ಅಥವಾ ತುಪ್ಪದಲ್ಲಿ ಅದ್ದಿಕೊಂಡು ಚೆನ್ನಾಗಿ ನಾದಿಕೊಂಡು ನಿಮಗೆ ಬೇಕಾದ ರೀತಿಯಲ್ಲಿ ಉಂಡೆಯನ್ನು ಕಟ್ಟಿದರೆ ಆರೋಗ್ಯಕರವಾದ ರಾಗಿಮುದ್ದೆ ಯನ್ನು ಯಾವುದೇ ಸೊಪ್ಪು ಸಾರು ಅಥವಾ ಸಾಂಬಾರ್ ನೊಂದಿಗೆ ಸವಿಯಬಹುದು. *ಶ್ರೀರಾಮ್ ನಾಯಕ್