ಕರ್ನಾಟಕ ವೈವಿಧ್ಯಮಯ ತಿಂಡಿಗಳಿಗೆ ಹೆಸರುವಾಸಿಯಾಗಿದೆ. ಒಂದೊಂದು ಊರಿಗೆ ಹೋದರೂ ಅಲ್ಲಿ ಒಂದಲ್ಲ ಒಂದು ವಿಶೇಷ ಆಹಾರಗಳಿರುತ್ತವೆ. ಮೈಸೂರಿಗೆ ಹೋದರ ಮೈಸೂರ್ ಪಾಕ್, ಮಂಗಳೂರಿಗೆ ಹೋದರ ನೀರ್‌ದೋಸೆ, ಧಾರವಾಡದಲ್ಲಿ ಪೇಡಾ ಹೀಗೆ ವಿವಿಧ ಆಹಾರಗಳು ವಿವಿಧೆಡೆಯಲ್ಲಿ ದೊರೆಯುತ್ತವೆ. ಕೆಲವೊಂದು ಊರುಗಳನ್ನು ಅಲ್ಲಿನ ಆಹಾರದಿಂದ ಗುರತು ಹಿಡಿಯುವುದು ಕೂಡ ಇದೆ. ಹೀಗೆ ಮಂಡ್ಯ ಎಂದರೆ ನೆನಪಾಗುವುದು ರಾಗಿ ಮುದ್ದೆ ಸೊಪ್ಪಿನ ಸಾರು. ದಿನವಿಡೀ ಗದ್ದೆಗಳಲ್ಲಿ ಮತ್ತು ದೈಹಿಕ ಶ್ರಮದ ಕೆಲಸ ಮಾಡುವುದು ಅಲ್ಲಿನ ರೈತರಿಗೆ ಶಕ್ತಿ ತುಂಬುವ ಆಹಾರ ರಾಗಿ ಮುದ್ದೆ. ಮಂಡ್ಯ ಜನತೆಗೆ ದಿನನಿತ್ಯದಲ್ಲಿ ಆಹಾರದಲ್ಲಿ ಮುದ್ದೆ ಇರಲೇಬೇಕು. ರಾಗಿ ಮುದ್ದೆ ಹೇಗೆ ಮಾಡುವುದು, ಅದರ ಆರೋಗ್ಯ ಪ್ರಯೋಜನಗಳೇನು ಎಂಬುದು ಇಲ್ಲಿದೆ ಓದಿ.
ಬೇಕಾಗುವ ಪದಾರ್ಥಗಳು
-ರಾಗಿ ಹಿಟ್ಟು- 1 ಕಪ್
-ನೀರು- ಒಂದುವರೆ ಅಥವಾ 2 ಕಪ್ (ರಾಗಿ ಹಿಟ್ಟು ಎಷ್ಟು ತೆಗೆದುಕೊಂಡಿದ್ದೀರಿ ಅದರ ಮೇಲೆ ಅವಲಂಬಿತ)
-ಉಪ್ಪು ರುಚಿಗೆ ತಕ್ಕಷ್ಟು
-ತುಪ್ಪ 2ರಿಂದ3 ಚಮಚ
ಒಂದು ಪಾತ್ರೆಗೆ 2 ಕಪ್ ನೀರು, ಉಪ್ಪು ಮತ್ತು 2 ಚಮಚ ತುಪ್ಪ, ಸ್ವಲ್ಪ ರಾಗಿ ಹಿಟ್ಟು ಹಾಕಿ ಕುದಿಸಿ. ಆ ನೀರು ಉಕ್ಕಿ ಬರುವಾಗ ನಿಧಾನವಾಗಿ ಇನ್ನು ಳಿ ದ ರಾಗಿಹಿಟ್ಟನ್ನು ನೀರಿಗೆ ಸುರಿಯಿರಿ. ಬೆಂಕಿ ಮಧ್ಯಮ ಉರಿಯಲ್ಲಿರಲಿ. ಬಳಿಕ ಗ್ಯಾಸ್ ಆಫ್ ಮಾಡಿ ಪಾತ್ರೆಯನ್ನು ಕೆಳಗಿಸಿರಿ. ಮುದ್ದೆ ಕೋಲಿನಿಂದ ಮಿಕ್ಸ್ ಮಾಡಲಾರಂಭಿಸಿ. ಸತತವಾಗಿ ಮಿಕ್ಸ್ ಮಾಡುತ್ತಾ ಇದ್ದಾಗ ರಾಗಿಹಿಟ್ಟು ಒಂದು ಮುದ್ದೆಯಾಗಿರುತ್ತದೆ. ಇದಾದ ಬಳಿಕ ಮತ್ತೆ ಸ್ವಲ್ಪ ತುಪ್ಪವನ್ನು ಹಾಕಿ. ಮತ್ತೆ ಗ್ಯಾಸ್ ಹಚ್ಚಿ ರಾಗಿ ಹಿಟ್ಟನ್ನು ಒಂದು ನಿಮಿಷ ಇಡಿ. ಬಳಿಕ ಗ್ಯಾಸ್ ಆಫ್ ಮಾಡಿ. ಈಗ ಇದು ಸವಿಯಲು ಸಿದ್ದ.
ರಾಗಿ ಮುದ್ದೆಯಲ್ಲಿರುವ ಪೋಷಕಾಂಶ
ಕ್ಯಾಲೋರಿ- 223
ಕಾಬೊìಹೈಡ್ರೇಟ್- 43 ಗ್ರಾಮ್,
ಪ್ರೋಟಿನ್- 6 ಗ್ರಾಂ
ಕೊಬ್ಬು-2ಗ್ರಾಂ
ಸೋಡಿಯಂ-14 ಮಿ. ಗ್ರಾಂ
ಪೊಟಾಸಿಯಂ-134 ಮಿ. ಗ್ರಾಂ
ಫೈಬರ್-2 ಗ್ರಾಂ
ಸಕ್ಕರೆ-1 ಗ್ರಾಂ
ಕಬ್ಬಿನ-ಶೇ. 13.1