Advertisement

ತೂಕ ಇಳಿಸಿಕೊಳ್ಳಲು ರಾಗಿ ಮಾಲ್ಟ್ ಬೆಸ್ಟ್..!

02:42 PM Apr 19, 2021 | Team Udayavani |

ರಾಗಿಯಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ.  ರಾಗಿಯನ್ನು ನಾವು ದೋಸೆ, ಮುದ್ದೆ ಅಂಬಲಿ, ಹೀಗೆ ವಿಧ ವಿಧವಾಗಿ ನಾವು ಸೇವಿಸಬಹುದು. ಇನ್ನು, ರಾಗಿ ಮಾಲ್ಟ್ ಅಂದರೇ ಯಾರಿಗಿಷ್ಟವಿಲ್ಲ ಹೇಳಿ..?  ಒತ್ತಡದ ಬದುಕಿನಲ್ಲಿ ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ ಬೇಸಿಗೆಯಲ್ಲಿ ರಾಗಿ ಮಾಲ್ಟ್ ನಿಮಗೆ ಸಹಕಾರಿಯಾಗಿದೆ.

Advertisement

ಇತ್ತೀಚಿನ ಜೀವನ ಶೈಲಿಯಲ್ಲಿ ತೂಕ ಹೆಚ್ಚಳವು ಬಹು ಮುಖ್ಯ ಸಮಸ್ಯೆಯಾಗಿ ಕಾಡುತ್ತಿದೆ. ಬಹುತೇಕ ಜನರು ತೂಕ ಇಳಿಸಿಕೊಳ್ಳಲು ಡಯೇಟ್ ಹಾಗೂ ವ್ಯಾಯಾಮ ಹಾಗೂ ಜಿಮ್ ಇತ್ಯಾದಿಗಳತ್ತ ಮೊರೆ ಹೋಗುವುದು ಈಗೀಗ ಸಾಮಾನ್ಯವಾಗಿ ಬಿಟ್ಟಿದೆ.

ತೂಕ ಇಳಿಸಿಕೊಳ್ಳುಲು ಡಯೇಟ್ ಮಾಡುವ ಬದಲಾಗಿ ಆಹಾರ ಪದ್ದತಿಯನ್ನು ಬದಲಿಸುವುದು ಉತ್ತಮ, ಅದರಲ್ಲೂ ರಾಗಿ ಮಾಲ್ಟ್ ‍ನ್ನು ತಮ್ಮ ಆಹಾರ ಪದ್ಧತಿಯೊಂದಿಗೆ ಅಳವಡಿಸಿಕೊಳ್ಳುವುದು ಬೆಸ್ಟ್ ಎಂದು ತಜ್ಞರು ಸಲಹೆ ನೀಡುತ್ತಾರೆ.

ಓದಿ : ಪ್ರೊ. ಜಿ. ವೆಂಕಟಸುಬ್ಬಯ್ಯ ನಿಧನ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ : ಮೋದಿ ಟ್ವೀಟ್

ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ, ತೂಕ ನಷ್ಟಕ್ಕೆ ರಾಗಿ ಮಾಲ್ಟ್ ರೆಸಿಪಿ ನಿಮಗೆ ತುಂಬಾ ಪ್ರಯೋಜನಕಾರಿ.

Advertisement

ತೂಕ ಇಳಿಸಿಕೊಳ್ಳಲು ರಾಗಿ ಮಾಲ್ಟ್ ಬೆಸ್ಟ್..!

ಬೇಸಿಗೆಯಲ್ಲಿ ತಂಪು ಪಾನಿಯಗಳನ್ನು ಸೇವಿಸುವುದು ಉತ್ತಮ. ಇದಕ್ಕಾಗಿ ನೀರು, ಮೊಸರು, ಮಜ್ಜಿಗೆ, ಲಸ್ಸಿ ಇತ್ಯಾದಿಗಳನ್ನು ಸೇವಿಸುವುದನ್ನು ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಈ ಋತುವಿನಲ್ಲಿ, ತಂಪು ಪಾನೀಯಗಳು, ಪ್ಯಾಕ್ ಮಾಡಿದ ಜ್ಯೂಸ್ ಅಥವಾ ಸೋಡಾ ಬದಲಿಗೆ, ಆರೋಗ್ಯಕರ ಪಾನೀಯಗಳನ್ನು ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳುವುದು ಬೆಸ್ಟ್ ಎನ್ನುತ್ತಾರೆ ತಜ್ಞರು. ರಾಗಿ ಮಾಲ್ಟ್ ನಿಮಗೆ ತೂಕ ಇಳಿಸಿಕೊಳ್ಳುವುದಕ್ಕೆ ಮಾತ್ರಲ್ಲದೇ, ಜೀರ್ಣ ಕ್ರಿಯೆಗೂ ಕೂಡ ಹೇಳಿ ಮಾಡಿಸಿದ್ದು. ಹಸಿವನ್ನು ತಡೆಯುವ ಗುಣ ರಾಗಿಯಲ್ಲಿ ಇರುವುದರಿಂದ ನಾವು ದೀರ್ಘ ಕಾಲದವರೆಗೂ ಬೇರೆ ಏನೂ ಆಹಾರವಿಲ್ಲದೇ ಹೆಚ್ಚು ಕಾಲ ಇರಬಹುದಾಗಿದೆ. ಇದರಿಂದ ನಾವು ಕ್ರಮೇಣವಾಗೊ ದೇಹದ ತೂಕವನ್ನು ಇಳಿಸಿಕೊಳ್ಳಲು ಸಾಧ್ಯ ಎನ್ನುತ್ತಾರೆ ತಜ್ಞ ವೈದ್ಯರು.

ಓದಿ : ರಮೇಶ್ ಜಾರಕಿಹೊಳಿ ಕೋವಿಡ್ ನಿಂದ ಗುಣಮುಖ : ನಾಳೆ SIT ವಿಚಾರಣೆಗೆ ಹಾಜರಾಗುವುದು ಡೌಟ್!

Advertisement

Udayavani is now on Telegram. Click here to join our channel and stay updated with the latest news.

Next