Advertisement

ಖುಷ್ಕಿ ಬೇಸಾಯದಲ್ಲಿ ರಾಗಿ ಪ್ರಮುಖ

02:48 PM Nov 22, 2018 | Team Udayavani |

ಮಾಗಡಿ: ತಾಲೂಕಿನಲ್ಲಿ ಖುಷ್ಕಿ ಬೇಸಾಯ ಪ್ರಧಾನವಾಗಿದ್ದು ರಾಗಿ ಪ್ರಮುಖ ಬೆಳೆಯಾಗಿದೆ. ಬಹುತೇಕ ರೈತರು ರಾಗಿ ಏಕಬೆಳೆ ಪದ್ಧತಿಯನ್ನು ಅನುಸರಿಸುತ್ತಿದ್ದು ಸೂಕ್ತವಾದ ಪೋಷಕಾಂಶ ಮತ್ತು ನೈಸರ್ಗಿಕ ಸಂಪನ್ಮೂಲಗಳ ಸದ್ಬಳಕೆ ಮಾಡದೆ ಖುಷ್ಕಿ ಬೇಸಾಯ ಅನಿಶ್ಚಿತಗೊಳ್ಳುತ್ತಿದೆ ಎಂದು ಕೆಕೆ ಜ್ಞಾನಿ ಡಾ.ದಿನೇಶ್‌ ಹೇಳಿದರು.

Advertisement

ತಾಲೂಕಿನ ಆಯ್ದ ತಾಲೂಕುಗಳಲ್ಲಿ ಎರಡು ಬೆಳೆ ಪದ್ಧತಿಯ ಕ್ಷೇತ್ರ ಪರೀಕ್ಷೆಯನ್ನು ಹಮ್ಮಿಕೊಂಡು ಪೂರ್ವ ಮುಂಗಾರಿನಲ್ಲಿ ಅಲಸಂದೆ, ಅವರೆ ಮತ್ತು ಎಳ್ಳು ಬಿತ್ತನೆ ಮಾಡಿ ಆಗಸ್ಟ್‌ ತಿಂಗಳಿನಲ್ಲಿ ಈ ಬೆಳೆಗಳು ಕಟಾವಾದ ನಂತರ ಬೆಂಗಳೂರು ಕೃಷಿ ವಿಶ್ವ ವಿದ್ಯಾನಿಲಯದಿಂದ ಬಿಡುಗಡೆಯಾದ ಅಲ್ಪಾವಧಿ ರಾಗಿ ತಳಿ ಕೆ.ಎಂ.ಆರ್‌. 630 ತಳಿಯನ್ನು ಎರಡನೇ ಬೆಳೆಯಾಗಿ ತೆಗೆದುಕೊಳ್ಳಲಾಗಿದ್ದು, ಈ ಪದ್ಧತಿಯನ್ನು ರಾಗಿ ಏಕಬೆಳೆ ಪದ್ಧತಿಯೊಂದಿಗೆ ಹೋಲಿಸಿ ನೋಡಲಾಗಿದೆ.

ಈ ನಿಟ್ಟಿನಲ್ಲಿ ಹೊಸಪಾಳ್ಯ ಕಾಲೋನಿಯಲ್ಲಿ ಕೆ.ಎಂ.ಆರ್‌ 630 ರಾಗಿ ಬೆಳೆದ ರೈತರ ತಾಲೂಕುಗಳಲ್ಲಿ ಹೊರಾವರಣ ತರಬೇತಿ ಹಮ್ಮಿ ಕೊಂಡು ಎರಡು ಬೆಳೆ ಪದ್ಧತಿಯ ತಾಂತ್ರಿಕತೆಯ ಬಗ್ಗೆ ಮಾಹಿತಿ ನೀಡಲಾಯಿತು. ಈ ಸಂದರ್ಭದಲ್ಲಿ ಡಾ.ದಿನೇಶ್‌ ಖುಷ್ಕಿ ಬೇಸಾಯದಲ್ಲಿ ಸಂಪನ್ಮೂಲಗಳ ಸದ್ಬಳಕೆ ಯ ಬಗ್ಗೆ ಮಾಹಿತಿ ನೀಡಿದರು.

ಕೇಂದ್ರದ ಮತ್ತೋರ್ವ ಜಾನಿ ಪ್ರೀತು ಮಾತನಾಡಿ, ಮಣ್ಣಿನ ಸಂರಕ್ಷಣೆಯಲ್ಲಿ ದ್ವಿದಳ ದಾನ್ಯದ ಬೆಳೆಗಳ ಪಾತ್ರದ ಬಗ್ಗೆ ಮಾಹಿತಿ ನೀಡಿದರು. ರೈತರಾದ ಕುಮಾರಸ್ವಾಮಿ, ದೊಡ್ಡಯ್ಯ, ರಂಗಸ್ವಾಮಯ್ಯ, ಲಕ್ಷ್ಮಮ್ಮ ಇತತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next