ಬಿತ್ತಿದಂದಿನಿಂದಲೂ ಹಚ್ಚ ಹಸಿರಾಗಿ ಉತ್ಕೃಷ್ಟವಾಗಿ ಬೆಳೆದು ಉತ್ತಮ ತೆನೆಗಟ್ಟಿನೊಂದಿಗೆ ರೈತರ ಮೊಗದಲ್ಲಿ ಸಂತಸ
ಮೂಡಿಸಿತ್ತು. ಬಂಪರ್ ಬೆಳೆಯಾಗಿ ಬೆಳೆದು ಬಂದಿದ್ದ ರಾಗಿ ಪೈರಿನ ಕಟಾವಿನ ಈ ವೇಳೆ ಕಳೆದ 10-15ದಿನಗಳಿಂದ ಬರುತ್ತಿರುವ ಮಳೆಗೆ ರಾಗಿ ಬೆಳೆ ನೆಲಕ್ಕಚ್ಚಿದ್ದು ಕಟಾವು ಮಾಡಲಾಗದೆ ಸಂಕಷ್ಟ ಎದುರಿಸುತ್ತಿದ್ದಾರೆ.
Advertisement
ಮೇಲ್ನೋಟಕ್ಕೆ ರೈತನ ಕಣಜ ತುಂಬ ಬೇಕಾಗಿದ್ದ ರಾಗಿ, ಬಣವೆಗೆ ಸೇರಬೇಕಾಗಿದ್ದ ರಾಗಿ ಹುಲ್ಲು ನೋಡ ನೋಡುತ್ತಲೇ ಕೊಯ್ಲಿಗೆ ಬಂದ ಈ ಸಂದರ್ಭದಲ್ಲೇ ಮಳೆಗೆ ನೆನೆದು ನೆಲಕ್ಕುರುಳಿದೆ. ಕಟಾವು ಮಾಡಬೇಕಾಗಿರುವ ರಾಗಿ ಬೆಳೆ ಅಡ್ಡಾದಿಡ್ಡಿಯಾಗಿ ಬಿದ್ದಿರುವುದರಿಂದ ಕಟಾವು ಮಾಡುವುದು ಬಹಳ ಕಷ್ಟವಾಗಿದೆ. ಅಲ್ಲದೇ, ತೆನೆಗಳೆಲ್ಲಾ ಮಳೆ ನೀರಿಗೆ ಕರಗಿ ದಂತಾಗಿ ಕಳಚಿ ಬೀಳುತ್ತಿದ್ದು ರಾಗಿ ಕಾಳುಗಳು ಮತ್ತೆ ಭೂಮಿಗೇ ಉದುರಿ ಮೊಳಕೆಯೊಡೆಯುತ್ತಿರುವುದು ಆತಂಕ ತಂದಿದೆ.
ಕಳೆ ತೆಗೆಯುವುದು ಸೇರಿದಂತೆ ಬೆಳೆಯನ್ನು ಹಗಲಿರುಳು ಜೋಪಾನ ಮಾಡಿದ್ದ ರೈತನ ಕಣ್ಣಲ್ಲಿ ನೀರು ತುಂಬಿಕೊಂಡಿದೆ.