ಮುಂಬಯಿ: ಬಂಟರ ಸಂಘ ಮುಂಬಯಿ ಇದರ ಸಿಟಿ ಪ್ರಾದೇಶಿಕ ಸಮಿತಿಯ 7ನೇ ವಾರ್ಷಿಕೋತ್ಸವ ಸಮಾರಂಭವು ಅ. 8 ರಂದು ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾ ಗೃಹದಲ್ಲಿ ನಡೆಯಿತು.
ಬಂಟರ ಸಂಘ ಮುಂಬಯಿ ಅಧ್ಯಕ್ಷ ಪ್ರಭಾಕರ ಎಲ್. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಲೇಖಕ, ಅನ್ನದಾತ ಬಿರುದಾಂಕಿತ ಸಂತೋಷ್ ಕ್ಯಾಟರರ್ನ ರಾಘು ಪಿ. ಶೆಟ್ಟಿ ಅವರ ತುಳುನಾಡಿನ ಕಟ್ಟುಕಟ್ಟಳೆಗಳು ಕೃತಿಯ ಆರನೇ ಇಂಗ್ಲಿಷ್ ಆವೃತ್ತಿಯನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರು ಬಿಡುಗಡೆಗೊಳಿಸಿ ಶುಭಹಾರೈಸಿದರು.
ಕಟೀಲು ಎಸ್‌ಡಿಪಿಟಿ ಕಾಲೇಜಿನ ಪ್ರಾಂಶು ಪಾಲ ಪ್ರೊ| ಬಾಲಕೃಷ್ಣ ಶೆಟ್ಟಿ, ಉದ್ಯಮಿ, ಸಮಾಜ ಸೇವಕ ಸುರೇಶ್ ಪಿ. ಶೆಟ್ಟಿ ಗುರ್ಮೆ, ಆರ್ಟ್ ಆಫ್ ಲೀವಿಂಗ್ ಆರ್ಗನೈಜೇಶನ್ ಅಂತಾರಾಷ್ಟ್ರೀಯ ಪ್ರತಿನಿಧಿ ವಿನಯಾ ಹೆಗ್ಡೆ, ಪಶ್ಚಿಮ ಪ್ರಾದೇಶಿಕ ಸಮಿತಿಗಳ ಸಮನ್ವಯಕ ಮುಂಡಪ್ಪ ಎಸ್. ಪಯ್ಯಡೆ, ಮೆಕೆನ್ಸಿ ಆ್ಯಂಡ್ ಕಂಪೆನಿ ಇದರ ಸಮೀರ್ ಶೆಟ್ಟಿ ಬಿಟೆಕ್, ಸಿಟಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ದೊಡ್ಡಗುತ್ತು ಭುಜಂಗ ಆರ್. ಶೆಟ್ಟಿ, ಸಂಘದ ಉಪಾಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ, ಗೌರವ ಪ್ರಧಾನ ಕಾರ್ಯದರ್ಶಿ ಉಳೂ¤ರು ಮೋಹನ್‌ದಾಸ್ ಶೆಟ್ಟಿ, ಗೌರವ ಕೋಶಾಧಿಕಾರಿ ಸಿಎ ಐ. ಆರ್. ಶೆಟ್ಟಿ, ಜತೆ ಕಾರ್ಯದರ್ಶಿ ಕಿಶೋರ್ ಕುಮಾರ್ ಕುತ್ಯಾರ್, ಜತೆ ಕೋಶಾಧಿಕಾರಿ ಮಹೇಶ್ ಎಸ್. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಲತಾ ಜೆ. ಶೆಟ್ಟಿ, ಪ್ರಾದೇಶಿಕ ಸಮನ್ವಯಕ ಮುಂಡಪ್ಪ ಎಸ್. ಪಯ್ಯಡೆ, ಉಪಕಾರ್ಯಾಧ್ಯಕ್ಷ ಶಿಬರೂರುಗುತ್ತು ಸುರೇಶ್ ಎಸ್. ಶೆಟ್ಟಿ, ಕೋಶಾಧಿಕಾರಿ ಸಂತೋಷ್ ಆರ್. ಶೆಟ್ಟಿ, ಜತೆ ಕಾರ್ಯದರ್ಶಿ ಮಹಾಬಲ ಶೆಟ್ಟಿ, ಜತೆ ಕೋಶಾಧಿಕಾರಿ ಮಹೇಶ್ ಶೆಟ್ಟಿ, ಸಮಿತಿಯ ಸಂಚಾಲಕ ಕೃಷ್ಣ ವಿ. ಶೆಟ್ಟಿ, ಬಂಟರ ಸಂಘ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಲತಾ ಜೆ. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಕಲ್ಪನಾ ಕೆ. ಶೆಟ್ಟಿ, ಪ್ರಾದೇಶಿಕ ಸಲಹಾ ಸಮಿತಿಯ ಕಾರ್ಯಾಧ್ಯಕ್ಷೆ ಉಮಾಕೃಷ್ಣ ಶೆಟ್ಟಿ, ಉಪ ಕಾರ್ಯಾಧ್ಯಕ್ಷೆ ಅನಿತಾ ಎ. ಶೆಟ್ಟಿ, ಕಾರ್ಯದರ್ಶಿ ಸುಚಿತಾ ಕೆ. ಶೆಟ್ಟಿ, ಕೋಶಾಧಿಕಾರಿ ಜಯಂತಿ ಶೆಟ್ಟಿ, ಜತೆ ಕಾರ್ಯದರ್ಶಿ ವಿನೋದಾ ಶೆಟ್ಟಿ, ಕಾರ್ಯದರ್ಶಿ ನಲ್ಯಗುತ್ತು ಪ್ರಕಾಶ್ ಶೆಟ್ಟಿ, ಅಶೋಕ್ ಪಕ್ಕಳ, ವಾರ್ಷಿಕೋತ್ಸವ ಸಲಹಾ ಸಮಿತಿಯ ಜಯರಾಮ ಶೆಟ್ಟಿ ಇನ್ನ, ಅನಿಲ್ ಶೆಟ್ಟಿ ಏಳಿಂಜೆ, ಕೃಷ್ಣ ವೈ. ಶೆಟ್ಟಿ, ಅಂಗಡಿಗುತ್ತು ಪ್ರಸಾದ್ ಶೆಟ್ಟಿ, ರಾಘು ಪಿ. ಶೆಟ್ಟಿ, ಸುಜಯ್ ಆರ್. ಶೆಟ್ಟಿ, ಪ್ರತೀಕ್ ಡಿ. ಶೆಟ್ಟಿ, ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಶಿವರಾಮ ಶೆಟ್ಟಿ, ಸಾಹಿತ್ಯ-ಸಾಂಸ್ಕೃತಿ-ಮಾಹಿತಿ ಮತ್ತು ತಂತ್ರಜ್ಞಾನ ಕಾರ್ಯಾಧ್ಯಕ್ಷೆ ಕೀರ್ತಿ ಎಚ್. ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಅಪೂರ್ವ ಕೃತಿ
ಅನ್ನದಾತ ಬಿರುದಾಂಕಿತ, ಸಾಹಿತಿ, ಸಾಂಸ್ಕೃತಿಕ ತಜ್ಞ ರಾಘು ಪಿ. ಶೆಟ್ಟಿ ಅವರ ತುಳುನಾಡಿನ ಕಟ್ಟುಕಟ್ಟಳೆಗಳು ಇಂಗ್ಲಿಷ್ ಅನುವಾದಿತ ‘ಖulunಚಛus ಇusಠಿಟಞs ಅnಛ Rಜಿಠಿuಚls’ ಅಪೂರ್ವ ಕೃತಿಯಾಗಿದೆ. ಬಂಟರ ಸಂಘದ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮಿತಿಯ ನೇತೃತ್ವದಲ್ಲಿ ಬಿಡುಗಡೆಗೊಂಡ ಕೃತಿಯನ್ನು ಉಚಿತವಾಗಿ ನೀಡಿರುವುದು ವಿಶೇಷತೆಯಾಗಿದೆ. ರಾಘು ಪಿ. ಶೆಟ್ಟಿ ಅವರು ನಮ್ಮ ಸಂಸ್ಕೃತಿ ಸಂಪ್ರದಾಯಗಳ ಕುರಿತಾದ ಅಗಾಧವಾದ ಅನುಭವವನ್ನು ಹೊಂದಿದವರು. ತುಳುನಾಡಿನ ಕಟ್ಟುಕಟ್ಟಳೆಗಳು ರಾಘ ಶೆಟ್ಟಿಯವರ ಕನಸಿನ ಕೂಸು. ಬಹಳ ಪ್ರೀತಿಯಿಂದ ರಚಿಸಿದ ಈ ಸಣ್ಣ ಕೃತಿಯೊಂದು 6 ನೇ ಬಾರಿಗೆ ಮರು ಮುದ್ರಣಗೊಂಡಿರುವುದು ಸಂಘದ ಇತಿಹಾಸದಲ್ಲೇ ಪ್ರಪ್ರಥಮವಾಗಿದೆ. ಯಾವುದೇ ಸಮಾರಂಭವಿರಲಿ, ಅದು ನಿಶ್ಚಿತಾರ್ಥ, ಮದುವೆ, ಸೀಮಂತ, ಮಗು ತೊಟ್ಟಿಲು ಮೊದಲಾದ ಶುಭ ಸಮಾರಂಭಗಳಲ್ಲದೆ ಮರಣ ಸಂಭವಿಸಿದಾಗಲೂ ಯಾವ ರೀತಿಯ ಕ್ರಮವನ್ನು ಅನುಸರಿಸಬೇಕು ಎನ್ನುವುದು ತಿಳಿಯದೇ ಇದ್ದವರು ಈ ಪುಸ್ತಕವನ್ನು ಓದಿ ಅರಿತಿದ್ದಾರೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ಕೆಲವು ಜವಾಬ್ದಾರಿಯುತ ಪಾಲಕರ, ಆಸಕ್ತ ಯುವಜನತೆಯ ಬೇಡಿಕೆಯ ಮೇರೆಗೆ ಈ ಕೃತಿ ಮೂರನೆ ಬಾರಿ ಇಂಗ್ಲಿಷಿಗೆ ಅನುವಾದಗೊಂಡಿದೆ.
ಇಲ್ಲಿ ತುಳು ಸಂಸ್ಕೃತಿ, ಸಂಸ್ಕಾರಕ್ಕೆ ಹೆಚ್ಚು ಮಹತ್ವ ನೀಡಿದ್ದು ಈ ಕೃತಿಯಲ್ಲಿ ಹಬ್ಬ ಹರಿದಿನಗಳ ಆಚರಣೆ, ಸತ್ಯನಾರಾಯಣ ಮಹಾಪೂಜೆ, ಚೌತಿ, ಗಣಪತಿ ಪೂಜೆ, ಶ್ರೀಕೃಷ್ಣಾಷ್ಟಮಿ, ದೀಪಾವಳಿ, ನಾಗಾರಾಧನೆ, ನಾಗಮಂಡಲ, ತೆನೆಕಟ್ಟುವ ವಿಧಾನ ಹೀಗೆ ಎಲ್ಲಾ ಹಬ್ಬಗಳ ವೈಶಿಷ್ಟ್ಯದೊಂದಿಗೆ ಅದನ್ನು ಆಚರಿಸುವ ರೀತಿಯನ್ನು ಬಹಳ ಸುಂದರವಾಗಿ ಮೂಡಿಸಲಾಗಿದೆ. ತಾನು ಉದ್ಯಮಿಯಾದರೂ ವ್ಯಾಪಾರೀಮನೋಭಾವ ನನ್ನಲ್ಲಿಲ್ಲ. ಅದೆಷ್ಟೋ ಸಾವಿರ ಕನ್ನಡ ಪುಸ್ತಕವನ್ನು ಉಚಿತವಾಗಿ ಓದುಗರಿಗೆ ನೀಡಲಾಗಿದೆ. ಪುಸ್ತಕದಿಂದ ಹಣ ಮಾಡುವ ಉದ್ದೇಶ ನನ್ನದಲ್ಲ. ನಮ್ಮ ಸಂಪ್ರದಾಯವನ್ನು ನನ್ನ ನಂತರದ ಪೀಳಿಗೆಗೆ ತಿಳಿಸಬೇಕು. ಅದೇ ನನಗೆ ಸಾರ್ಥಕತೆಯನ್ನು, ಸಮಾಧಾನವನ್ನು ನೀಡುತ್ತದೆ
– ರಾಘು ಪಿ. ಶೆಟ್ಟಿ (ಕೃತಿಕಾರರು).
ಚಿತ್ರ-ವರದಿ : ಪ್ರೇಮನಾಥ್ ಶೆಟ್ಟಿ ಮುಂಡ್ಕೂರು.