ಬೆಳ್ತಂಗಡಿ: ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ಸಮಸ್ಯೆಯೊಂದರ ಪರಿಹಾರದ ಬಗ್ಗೆ ಶ್ರೀ ಮಂಜುನಾಥ ಸ್ವಾಮಿಯನ್ನು ಪ್ರಾರ್ಥಿಸಿಕೊಂಡಾಗ ದೇವರ ಅಭಯ ಮತ್ತು ರಕ್ಷೆ ಮಠಕ್ಕೆ ದೊರಕಿ ಸಮಸ್ಯೆ ಸುಲಲಿತವಾಗಿ ಪರಿಹಾರಗೊಂಡಿದೆ. ಶುಕ್ರವಾರ ಶ್ರೀ ಸ್ವಾಮಿಯ ದರ್ಶನ ಹಾಗೂ ಸೇವೆಯಿಂದ ಧನ್ಯತೆ, ಶಾಂತಿ ಹಾಗೂ ತೃಪ್ತಿ ದೊರಕಿದೆ ಎಂದು ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.
ಸ್ವಾಮೀಜಿಯವರು ಧರ್ಮಸ್ಥಳದ ಮಂಜುನಾಥ ಸ್ವಾಮಿಯ ದರ್ಶನ ಮಾಡಿ ಶತರುದ್ರಾಭಿಷೇಕ ಸೇವೆ ಸಲ್ಲಿಸಿದರು. ಅವರ 286 ಮಂದಿ ಭಕ್ತರು 5 ಆವರ್ತಗಳಲ್ಲಿ 1,430 ರುದ್ರಪಠಣ ಮಾಡಿದರು.
ಅಭಯಾಕ್ಷರ ಆಂದೋಲನಕ್ಕೆಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ, ಹೇಮಾವತಿ ವೀ. ಹೆಗ್ಗಡೆ, ಡಾ| ಬಿ. ಯಶೋವರ್ಮ ಶುಭ ಹಾರೈಸಿರುವುದರಿಂದ ಆಂದೋಲನಕ್ಕೆ ಆನೆ ಬಲ ಬಂದಂತಾಗಿದ್ದು ಅದು ಯಶಸ್ವಿಯಾಗುವುದರ ಬಗ್ಗೆ ಭರವಸೆ ಹಾಗೂ ವಿಶ್ವಾಸ ಮೂಡಿದೆ. ತಮ್ಮ ಮೊದಲ ಭೇಟಿಯಲ್ಲೆ ಧರ್ಮಸ್ಥಳದ ಬಗ್ಗೆ ಅಪಾರ ಗೌರವ ಮೂಡಿ ಬಂದಿದೆ ಎಂದರು. ಅನಿವಾರ್ಯ ಕಾರಣಗಳಿಂದ ಡಾ| ವೀರೇಂದ್ರ ಹೆಗ್ಗಡೆಯವರು ಉಪಸ್ಥಿತರಿರಲಿಲ್ಲ.
ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ- ಬಿ. ಯಶೋವರ್ಮ, ತನ್ನ ಆತ್ಮಕಲ್ಯಾಣದೊಂದಿಗೆ ಧ್ಯಾನ, ತಪಸ್ಸು ಮತ್ತು ತ್ಯಾಗದಿಂದ ಇತರರ ಕಲ್ಯಾಣಕ್ಕಾಗಿ ಚಿಂತಿಸುವವರೇ ನಿಜವಾದ ಗುರುಗಳಾಗಿದ್ದು ಆರಾಧನೆಗೆಅರ್ಹರಾಗಿರುತ್ತಾರೆ. ಗೋವುಗಳ ರಕ್ಷಣೆ ಬಗ್ಗೆ ಸ್ವಾಮೀಜಿಯವರ ಆಸಕ್ತಿ ಮತ್ತು ಕಾಳಜಿ ಬಗ್ಗೆ ಅವರು ಶ್ಲಾ ಸಿದರು. ಹೇಮಾವತಿ ವೀ. ಹೆಗ್ಗಡೆಯವರು ಅಭಯಾಕ್ಷರ ಆಂದೋಲನಕ್ಕೆ ಸಹಿ ಹಾಕಿ ಚಾಲನೆ ನೀಡಿ ಶುಭ ಹಾರೈಸಿದರು. ಸೋನಿಯಾ ವರ್ಮ ಉಪಸ್ಥಿತರಿದ್ದರು.