Advertisement
ಗುರುವಾರ ಪ್ರಾತಃಕಾಲ ಶ್ರೀಮಠದಲ್ಲಿ ನಿರ್ಮಾಲ್ಯ ವಿಸರ್ಜನೆ, ಸುಪ್ರಭಾತ, ಗ್ರಂಥ ಪಾರಾಯಣ, ಮೂಲ ವೃಂದಾವನಕ್ಕೆ ಪಂಚಾಮೃತ ಅಭಿಷೇಕ ನೆರವೇರಿಸಲಾಯಿತು. ವೃಂದಾವನವನ್ನು ವಿಶೇಷ ಹೂವುಗಳಿಂದ ಅಲಂಕರಿಸಲಾಗಿತ್ತು. ಶ್ರೀಮಠದ ಪ್ರಾಂಗಣದಲ್ಲಿ ಶ್ರೀಗಳು ಸೇರಿ ಮಠದ ಸಿಬ್ಬಂದಿ ವಸಂತೋತ್ಸವ ಅಂಗವಾಗಿ ಗುಲಾಲು ಎರಚಿ ಸಂಭ್ರಮಿಸಿದರು. ನಂತರ ಪ್ರಹ್ಲಾದರಾಜರ ಮೂರ್ತಿಯನ್ನು ಪ್ರಾಂಗಣದಿಂದ ರಥದವರೆಗೆ ಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡಲಾಯಿತು. ಬಳಿಕ ರಥವನ್ನೇರಿ ವಿಶೇಷ ಪೂಜೆ ಸಲ್ಲಿಸಿದ ಶ್ರೀ ಸುಬುಧೇಂದ್ರ ತೀರ್ಥರು ಭಕ್ತರಿಗೆ ಅನುಗ್ರಹ ಸಂದೇಶ ನೀಡಿದರು. ರಥೋತ್ಸವದಲ್ಲಿ ದೇಶ, ವಿದೇಶಗಳ ಭಕ್ತರು ಪಾಲ್ಗೊಂಡಿದ್ದರು.ರಥೋತ್ಸವ ಶುರುವಾದ ಕೆಲ ಹೊತ್ತಿನಲ್ಲೇ ಶ್ರೀಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ
ತೀರ್ಥರು ಹೆಲಿಕಾಪ್ಟರ್‌ನಲ್ಲಿ ಆಗಮಿಸಿ ರಾಯರಿಗೆ ಪುಷ್ಪವೃಷ್ಟಿ ಮಾಡಿದರು. ಆಗಸದಲ್ಲಿ ಎರಡು ಸುತ್ತು
ಹಾಕಿದ ಹೆಲಿಕಾಪ್ಟರ್ ನಿಂದ ಪುಷ್ಪಾರ್ಚನೆ ನೆರವೇರಿಸಿದರು.