Advertisement

ಆ.6ರಿಂದ ರಾಯರ ಆರಾಧನಾ ಮಹೋತ್ಸವ

08:05 AM Jul 27, 2017 | Team Udayavani |

ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ 346ನೇ ಆರಾಧನಾ ಮಹೋತ್ಸವ ಆ.6ರಿಂದ 12ರವರೆಗೆ ಜರುಗಲಿದ್ದು, ಸಕಲ ಸಿದಟಛಿತೆ ಕೈಗೊಳ್ಳಲಾಗಿದೆ. ಶ್ರೀಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರ ಸಾನ್ನಿಧ್ಯದಲ್ಲಿ ಆ. 6ರಿಂದ ಸಪ್ತ ರಥೋತ್ಸವ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ. ಈ ನಿಮಿತ್ತ ನಿತ್ಯ ಬೆಳಗಿನ ಜಾವ 4 ಗಂಟೆಯಿಂದ 8.30ರ ವರೆಗೆ ನಿರ್ಮಾಲ್ಯ ವಿಸರ್ಜನೆ, 11ರಿಂದ 2.30ರ ವರೆಗೆ ಶ್ರೀ ಮೂಲ ರಾಮದೇವರ ಪೂಜೆ, ಅಲಂಕಾರ ಸಂತರ್ಪಣೆ, ಹಸ್ತೋದಕ, ಮಹಾಮಂಗಳಾರತಿ ಜರುಗಲಿದೆ.

Advertisement

ಸಂಜೆ 5ರಿಂದ 6ಗಂಟೆವರೆಗೆ ವಿವಿಧ ಪಂಡಿತರಿಂದ ಉಪನ್ಯಾಸ ಕಾರ್ಯಕ್ರಮ ಹಾಗೂ ಹಗಲು ದಿವಟಗಿ, ಮಂಗಳಾರತಿ ಸ್ವಸ್ತಿವಾಚನ, ಪ್ರಾಕಾರ ಉತ್ಸವ ಜರುಗಲಿವೆ. ಆ. 6ರಂದು ಪ್ರಾರ್ಥನೋತ್ಸವ, ಧಾನ್ಯೋತ್ಸವ, ಶಕೋತ್ಸವ ಹಾಗೂ ರಜತ ಮಂಟಪೋತ್ಸವ ಕಾರ್ಯಕ್ರಮ ನಡೆಯಲಿವೆ.

7ರಂದು ಚಂದ್ರಗ್ರಹಣವಿದ್ದು, ಯಾವುದೇ ಉತ್ಸವಗಳು ಇರುವುದಿಲ್ಲ. 8ರಂದು ಪೂರ್ವಾರಾಧನೆ ನಿಮಿತ್ತ ಸಿಂಹ
ವಾಹನೋತ್ಸವ ನಡೆಯಲಿದೆ. 9ರಂದು ಮಧ್ಯಾರಾಧನೆನ ಮಿತ್ತ ಗಜ, ರಜತ ಹಾಗೂ ಸ್ವರ್ಣ ರಥೋತ್ಸವ ಕಾರ್ಯಕ್ರಮ ನಡೆಯಲಿದೆ. 10ರಂದು ಉತ್ತರಾರಾಧನೆ ಮಹೋತ್ಸವ ನಿಮಿತ್ತ ಮಹಾರಥೋತ್ಸವ ಜರುಗಲಿದೆ.

11ರಂದು ಸುಜ್ಞಾನೇಂದ್ರ ತೀರ್ಥರ ಆರಾಧನೆ ನಿಮಿತ್ತ ಅಶ್ವ ವಾಹನೋತ್ಸವ ನಡೆಯಲಿದ್ದು, 12ರಂದು ಸರ್ವ
ಸಮರ್ಪಣೋತ್ಸವ ನಡೆಯಲಿದೆ. ರಾಯರ ಅನುಗ್ರಹ ಪ್ರಶಸ್ತಿ ಪ್ರದಾನ: ಆರಾಧನಾ ಮಹೋತ್ಸವದ ಮಧ್ಯಾರಾಧನೆ ದಿನವಾದ ಆ. 8ರಂದು ಸಂಜೆ 7.30ಕ್ಕೆ ಶ್ರೀ ರಾಘವೇಂದ್ರ ಅನುಗ್ರಹ ಪ್ರಶಸ್ತಿಯನ್ನು ವಿದ್ವಾಂಸರಾದ ಬೆಂಗಳೂರಿನ ವಿದ್ವಾನ್‌ ವೆಂಕಟೇಶ ಬಾಯರಿ, ರಾಜಮಂಡ್ರಿಯ ವಿದ್ವಾನ್‌ ಗೋಪಾಲಕೃಷ್ಣ ಶಾಸ್ತ್ರಿ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಕೊಯಂಬತ್ತೂರಿನ ಪಿ.ಆರ್‌.ವಿಠuಲ್‌, ಹಾವೇರಿಯ ಡಾ| ಗುರುರಾಜ ವೈದ್ಯರಿಗೆ ಶ್ರೀಗಳು ಪ್ರದಾನ ಮಾಡುವರು.

Advertisement

Udayavani is now on Telegram. Click here to join our channel and stay updated with the latest news.

Next