ಹೊಸಬೆಟ್ಟು: ರಾಘವೇಂದ್ರ ಸ್ವಾಮಿಗಳು ಬೇಡಿದ್ದನ್ನು ನೀಡುವ ಕರುಣಾ ಮಯಿ. ಅವರ ಚರಣಾರವಿಂದಕ್ಕೆ ನಮ್ಮನ್ನು ನಾವು ಅರ್ಪಿಸಿದಲ್ಲಿ ಎಂತಹ ಕಷ್ಟಗಳೂ ಕರಗಿ ನೀರಾಗುತ್ತವೆ ಎಂದು ಕಾಣಿಯೂರು ಮಠ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಹೇಳಿದರು.
ನವವೃಂದಾವನ ಸೇವಾ ಪ್ರತಿಷ್ಠಾನ ಹೊಸಬೆಟ್ಟು, ಬ್ರಹ್ಮಕಲಶೋತ್ಸವ ಸಮಿತಿ ಹೊಸಬೆಟ್ಟು ಆಶ್ರಯದಲ್ಲಿ ಶ್ರೀ ರಾಘವೇಂದ್ರ ಮಠ ಹೊಸಬೆಟ್ಟು ಇಲ್ಲಿನ ಹರಿವಾಯು ಗುರುಗಳಿಗೆ ಹಾಗೂ ಪರಿವಾರ ದೇವರಿಗೆ ನಡೆಯಲಿರುವ ಬ್ರಹ್ಮಕಲಶೋತ್ಸವ ಪ್ರಯುಕ್ತ ಕೀರ್ತಿಶೇಷ ಹರಿದಾಸರತ್ನ ಹೊಸಬೆಟ್ಟು ವಾದೀಶ ಆಚಾರ್ಯ ವೇದಿಕೆಯಲ್ಲಿ ಮಂಗಳವಾರ ಜರಗಿದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಪ್ರತಿಯೊಬ್ಬರು ಕೊಂಡಾಡುವಂತಹ ಯತಿಗಳೆಂದರೆ ರಾಘವೇಂದ್ರ ಗುರುಗಳು. ಕಷ್ಟದ ನಿವಾರಣೆಗೆ ಗುರುಗಳ ಅನುಗ್ರಹ ಬೇಕು ಎಂದರು.
ಮುಕ್ಕ ಸತ್ಯಧರ್ಮ ದೇವಿ ದೇವಸ್ಥಾನ ಆಡಳಿತ ಮೊಕ್ತೇಸರ, ಬೈಕಂಪಾಡಿ ಗಣೇಶ ಸಮೂಹ ಸಂಸ್ಥೆಗಳ ಮಾಲಕ ಗಣೇಶ್ ಐತಾಳ್ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು. ಬ್ಯಾಂಕ್ ನಿವೃತ್ತ ಅಧಿಕಾರಿ ಟಿ. ಕೃಷ್ಣಮೂರ್ತಿ ರಾವ್ ಅಧ್ಯಕ್ಷತೆ ವಹಿಸಿದ್ದರು.
ಮಂಗಳೂರು ಕರ್ನಾಟಕ ಬ್ಯಾಂಕ್‌ನ ಆಡಳಿತ ನಿರ್ದೇಶಕ ಮಹಾಬಲೇಶ್ವರ ಎಂ.ಎಸ್., ಮಂಗಳೂರು ವಕೀಲರ ಸಂಘ ಅಧ್ಯಕ್ಷ ಎಂ.ಆರ್. ಬಲ್ಲಾಳ್, ಮಂಗಳೂರು ಆರ್.ಟಿ.ಒ. ಸೀನಿಯರ್ ಇನ್‌ಸ್ಪೆಕ್ಟರ್ ಪಿ. ರವಿಶಂಕರ ಕಾರಂತ, ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ. ಸದಾಶಿವ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಹರಿಕೃಷ್ಣ ಪುನರೂರು, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ವಿಶ್ವೇಶ್ವರ ಬದವಿದೆ ಹೊಸಬೆಟ್ಟು, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಪಿ.ಎಚ್. ಆನಂದ್, ಬ್ರಹ್ಮಕಲಶೋತ್ಸವ ಸಮಿತಿ ಕೋಶಾಧಿಕಾರಿ ಎಚ್.ವಿ. ರಾಘವೇಂದ್ರ ಮೊದ ಲಾ ದ ವರು ಉಪಸ್ಥಿತರಿದ್ದರು. ಬ್ರಹ್ಮಕಲಶೋತ್ಸವ ವ್ಯವಸ್ಥಾಪನ ಸಮಿತಿ ಸಂಚಾಲಕ ಪುಂಡಲೀಕ ಹೊಸಬೆಟ್ಟು ಸ್ವಾಗತಿಸಿದರು. ನ್ಯಾಯವಾದಿ ಪಿ. ಸಂತೋಷ್ ಐತಾಳ್ ನಿರ್ವಹಿಸಿದರು.
ದೇವರ ಅನುಗ್ರಹಕ್ಕೆ ಪೂರಕ
ಗುರುಗಳ ಅನುಗ್ರಹ ದೇವರ ಅನುಗ್ರಹಕ್ಕೆ ಪೂರಕ. ಕಾಮಧೇನು ಕಲ್ಪವೃಕ್ಷ ಎರಡನ್ನೂ ನೀಡುವ ಯತಿಗಳು ಗುರುರಾಘವೇಂದ್ರ ರಾಯರು ಎಂದು ಕಾಣಿಯೂರು ಮಠ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಹೇಳಿದರು.