Advertisement

‘ರಾಘವೇಂದ್ರ ‌ ಸ್ಟೋರ್ಸ್’ ಮುಂದೆ ಸಕ್ಸಸ್‌ ಬೋರ್ಡ್‌..!

03:20 PM May 06, 2023 | Team Udayavani |

ನಟ ಜಗ್ಗೇಶ್‌ ಅಭಿನಯದ “ರಾಘವೇಂದ್ರ ಸ್ಟೋರ್ಸ್’ ಕಳೆದ ಶುಕ್ರವಾರ (ಏ.28ಕ್ಕೆ) ಬಿಡುಗಡೆಯಾಗಿದ್ದು ನಿಮಗೆ ಗೊತ್ತಿರಬಹುದು. ಸದ್ಯ ಬಿಡುಗಡೆಯಾಗಿರುವ “ರಾಘವೇಂದ್ರ ಸ್ಟೋರ್ಸ್’ ಸಿನಿಮಾ ಎರಡನೇ ವಾರಕ್ಕೆ ಕಾಲಿಟ್ಟಿದೆ.

Advertisement

ಇದೇ ವೇಳೆ ಮಾಧ್ಯಮಗಳ ಮುಂದೆ ಬಂದಿದ್ದ “ರಾಘವೇಂದ್ರ ಸ್ಟೋರ್ಸ್’ ಚಿತ್ರತಂಡ, ಸಿನಿಮಾ ಬಿಡುಗಡೆಯ ನಂತರ ಸಿಗುತ್ತಿರುವ ಪ್ರತಿಕ್ರಿಯೆಗಳ ಬಗ್ಗೆ ಒಂದಷ್ಟು ಮಾಹಿತಿ ನೀಡಿತು. ಸದ್ಯಕ್ಕೆ ರಾಜ್ಯದಲ್ಲಿ ಚುನಾವಣೆ ಹಾಗೂ ಐಪಿಎಲ್‌ ಅಬ್ಬರ ಜೋರಾಗಿದೆ. ಇದರ ನಡುವೆಯೇ “ರಾಘವೇಂದ್ರ ಸ್ಟೋರ್’ ಸಿನಿಮಾ ರಿಲೀಸ್‌ ಆಗಿದ್ದು ಏಕೆ ಎನ್ನುವ ಪ್ರಶ್ನೆಗೆ ಮೊದಲಿಗೆ ಉತ್ತರಿಸಿದ ಜಗ್ಗೇಶ್‌, “ನಮ್ಮ ಸಿನಿಮಾದ ಕಂಟೆಂಟ್‌ ತುಂಬಾ ವಿಭಿನ್ನವಾಗಿದೆ. ಜನ ಅದನ್ನು ಒಪ್ಪಿಕೊಳ್ಳುತ್ತಾರೆ ಎಂಬ ವಿಶ್ವಾಸ ನಿರ್ಮಾಪಕರಿಗಿತ್ತು. ಹಾಗಾಗಿ ಅವರ ಆಶಯದಂತೆ “ರಾಘವೇಂದ್ರ ಸ್ಟೋರ್ಸ್’ ಸಿನಿಮಾವನ್ನು ಬಿಡುಗಡೆ ಮಾಡಿದೆವು. ಬಿಡುಗಡೆಯ ನಂತರ ನಮ್ಮ ನಿರೀಕ್ಷೆಯಂತೆ, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಸಿನಿಮಾದ ಬಗ್ಗೆ ಎಲ್ಲರೂ ಒಳ್ಳೆಯ ಮಾತನಾಡುತ್ತಿದ್ದಾರೆ. ಇಡೀ ಚಿತ್ರತಂಡದ ಪರಿಶ್ರಮದಿಂದ ಒಳ್ಳೆಯ ಸಿನಿಮಾ ಮಾಡಿದ್ದೇವೆ. ನಮ್ಮ ಪ್ರಯತ್ನಕ್ಕೆ ಎಲ್ಲ ಕಡೆಯಿಂದ ಮೆಚ್ಚುಗೆ ಸಿಗುತ್ತಿದೆ’ ಎಂದರು.

ಹಿರಿಯ ನಟ ದತ್ತಣ್ಣ ಮಾತನಾಡಿ, “ರಾಘವೇಂದ್ರ ಸ್ಟೋರ್ಸ್’ ಸಾಮಾನ್ಯ ಸಿನಿಮಾ ಅಲ್ಲ. ಇದರಲ್ಲಿ ಪ್ರತಿಪಾದಿಸಿರುವ ವಿಷಯದಲ್ಲಿ ಹೊಸತನ ಇದೆ. ನಿರ್ದೇಶಕರು ಯಾಕೆ ಇಂಥ ವಿಷಯ ಆಯ್ಕೆ ಮಾಡಿಕೊಂಡರು ಎಂಬ ಬಗ್ಗೆ ನನಗೆ ಕುತೂಹಲ ಇದೆ. ಜಗ್ಗೇಶ್‌ ಅವರು ಇಡೀ ಸಿನಿಮಾವನ್ನು ತಮ್ಮ ಹೆಗೆಲ ಮೇಲೆ ಹೊತ್ತುಕೊಂಡು ಸಾಗಿದ್ದಾರೆ’ ಎಂದರು.

“ರಾಘವೇಂದ್ರ ಸ್ಟೋರ್ಸ್ ‘ ಸಿನಿಮಾದ ನಾಯಕ ನಟಿ ಶ್ವೇತಾ ಶ್ರೀವಾತ್ಸವ್‌, ನಟರಾದ ರವಿಶಂಕರ್‌ ಗೌಡ, ಮಿತ್ರ, ನಿರ್ದೇಶಕ ಸಂತೋಷ್‌ ಆನಂದರಾಮ್‌ ಸೇರಿದಂತೆ ಸಿನಿಮಾದ ಪ್ರಮುಖ ಕಲಾವಿದರು ಮತ್ತು ತಂತ್ರಜ್ಞರು ಇದೇ ವೇಳೆ ಹಾಜರಿದ್ದು, ಸಿನಿಮಾದ ಬಿಡುಗಡೆಯ ನಂತರ ಸಿಗುತ್ತಿರುವ ಪ್ರತಿಕ್ರಿಯೆಗಳ ಬಗ್ಗೆ ಸಂತಸವನ್ನು ಹಂಚಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next