Advertisement

ರಾಘವೇಂದ್ರ ಶ್ರೀ ಪಟಾಭಿಷೇಕ ಮಹೋತ್ಸವ

12:04 PM Mar 12, 2019 | |

ಯಾದಗಿರಿ: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳು ಕಲಿಯುಗದ ಕಾಮಧೇನು ಎಂದು ಪ್ರಸಿದ್ಧರಾಗಿದ್ದಾರೆ.
ಅವರಲ್ಲಿ ಬೇಡಿಕೊಂಡು ಬಂದ ಭಕ್ತರ ಸಂಕಷ್ಟಗಳನ್ನ ಪರಿಹರಿಸುವ ಮಹಾನ್‌ ದೇವಾಂಶ ಸಂಭೂತರಾಗಿದ್ದರು ಎಂದು ಪಂ. ರಾಘವೇಂದ್ರಾಚಾರ್ಯ ಬಳಿಚಕ್ರ ಹೇಳಿದರು.

Advertisement

ನಗರ ಶ್ರೀ ರಾಘವೇಂದ್ರ ಪರಿಮಳ ಮಂಟಪದಲ್ಲಿ ರವಿವಾರ ಹಮ್ಮಿಕೊಂಡ ಶ್ರೀ ರಾಘವೇಂದ್ರ ಸ್ವಾಮಿಗಳ ಪಟ್ಟಾಭಿಷೇಕ
ಮತ್ತು ವರ್ಧಂತಿ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

ಶ್ರೇಷ್ಠ ಸನ್ಯಾಸಿಯಾಗಿದ್ದ ಶ್ರೀಗಳು, ಹಲವು ಗ್ರಂಥಗಳನ್ನು ರಚಿಸಿ ಜ್ಞಾನವನ್ನು ಪಸರಿಸಿದ ಮಹಾನ್‌ ವ್ಯಕ್ತಿಯಾಗಿದ್ದರು ಎಂದು ಹೇಳಿದರು.

ಇನ್ನೋರ್ವ ಉಪನ್ಯಾಸಕ ಪಂ. ನರಸಿಂಹಾಚರ್ಯ ಪುರಾಣಿಕ ಮಾತನಾಡಿ, ಉತ್ತರಾದಿ ಮಠದ ಪೂಜ್ಯಶ್ರೀ ಸತ್ಯಾತ್ಮತೀರ್ಥರು ವೈರಾಗ್ಯ ಮತ್ತು ಮಹಾನ್‌ ತಪಸ್ವಿಯಾಗಿದ್ದಾರೆ. ಅವರು ತಮ್ಮಲ್ಲಿರುವ ಜ್ಞಾನವನ್ನು ವಿದ್ಯಾರ್ಥಿಗಳಿಗೆ ಹಂಚುವ ಮೂಲಕ ಪಂಡಿತರ ತಂಡವನ್ನು ಸೃಷ್ಟಿಸಿದ್ದಾರೆ. ಸದಾ ಸಮಾಜದ ಹಿತವನ್ನು ಬಯಸುವ ಅವರು ಯುವಕರಲ್ಲಿ ಧಾಮಿಕ ಜಾಗೃತಿ ಮುಡಿಸಿದ್ದಾರೆ ಎಂದು ಹೇಳಿದರು.

ರಾಘವೇಂದ್ರ ಸ್ವಾಮಿಗಳ ಪಟ್ಟಾಭಿಷೇಕ ನಿಮಿತ್ತ ಬೆಳಗ್ಗೆ ಶ್ರೀ ವಿಷ್ಣುಸಹಸ್ರನಾಮ ಪಾರಾಯಣ, ಶ್ರೀ ರಾಯರ ಅಷ್ಟೋತ್ತರ
ಮತ್ತು ಭಕ್ತ ಸಮೂಹದಿಂದ ವಿಶೇಷ ಪುಷ್ಪಾರ್ಚನೆ ಮಾಡಲಾಯಿತು. ಮಧ್ಯಾಹ್ನ ರಥೋತ್ಸವ ಹಾಗೂ ತೀರ್ಥ ಪ್ರಸಾದ ಜರಗಿತು. ಈ ಸಂದರ್ಭದಲ್ಲಿ ವಿಪ್ರ ಸಮಾಜದ ಅನೇಕ ಮುಖಂಡರು ಭಾಗವಹಿಸಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next