Advertisement
ರಾಘವೇಂದ್ರ ರಾವ್ರಾಘವೇಂದ್ರ ರಾಯರು ಬಾಲ್ಯದಲ್ಲಿಯೇ ವೇಣುವಾದನಕ್ಕೆ ಮನಸೋತು ಉಡುಪಿಯ ನರಸಿಂಹ ಶೇರಿಗಾರರಲ್ಲಿ ಬಾಲ ಪಾಠ ಆರಂಭಿಸಿ ಮಂಗಳೂರಿನ ಎನ್. ಕೆ. ಸುಂದರಾಚಾರ್ಯರಲ್ಲಿ ಹೆಚ್ಚಿನ ತರಬೇತಿ ಪಡೆದು, ಮನೆಯವರ ಇಚ್ಚೆಗೆ ಸಡ್ಡು ಹೊಡೆದು ತೂತುಕುಡಿಯಲ್ಲಿ ವಿ| ಮುತ್ತುಸ್ವಾಮಿ ಅಯ್ಯಂಗಾರ್ ಅವರಲ್ಲಿ ಕೊಳಲು ವಾದನದ ಸರ್ವ ತಂತ್ರಗಾರಿಕೆ, ಕೌಶಲ್ಯಗಳನ್ನು ಅಭ್ಯಸಿಸಿದವರು. 85ರ ಇಳಿ ವಯಸ್ಸಿನಲ್ಲೂ ಸುಮಾರು 60ಕ್ಕಿಂತಲೂ ಹೆಚ್ಚು ಶಿಷ್ಯರಿಗೆ ತಮ್ಮ ಮನೆಯಲ್ಲಿ ಬಾಲ ಪಾಠದಿಂದ ಆರಂಭಿಸಿ ಪುಟ್ಟ ಕಛೇರಿ ನೀಡುವ ಸಾಮರ್ಥ್ಯವನ್ನು ಒಂದಿನಿತೂ ಆಯಾಸವಿಲ್ಲದೆ ಶಿಕ್ಷಣ ನೀಡುತ್ತಿರುವುದು ಆಶ್ಚರ್ಯಕರವೂ ಆಗಿದೆ.
ನಾಟ್ಯಾಚಾರ್ಯ ಮುರಳೀಧರ ರಾವ್ ಪ್ರಶಸ್ತಿಗೆ ಭಾಜನರಾಗಿರುವವರು ಬೆಂಗಳೂರಿನ ಕಲಾಶ್ರೀ ಭಾನುಮತಿ ಯವರು ಭರತನಾಟ್ಯದಂತಹ ವ್ಯಾಪಕ ನೃತ್ಯಕ್ಷೇತ್ರದಲ್ಲಿ ಭಾವಪೂರ್ಣ ಶಿಸ್ತುಬದ್ಧ ನೃತ್ಯಮಾತ್ರವಲ್ಲದೆ, ಉತ್ಕೃಷ್ಟ ಮಟ್ಟದ ಗ್ರೂಪ್ ಕೊರಿಯೊಗ್ರಾಫಿಗೆ ಕರ್ನಾಟಕ ಹಾಗೂ ಹೊರರಾಜ್ಯಗಳಲ್ಲಿ ಪ್ರಸಿದ್ಧಿ ಪಡೆದವರು. ಸಂಗೀತದ ಒಲುಮೆ ಇರುವ ಕುಟುಂಬದಲ್ಲಿ ಜನಿಸಿದ ಇವರು ಅನೇಕ ದಿಗ್ಗಜ ಗುರುಗಳ ಶಿಷ್ಯತ್ವವನ್ನು ಪಡೆದ ಅದೃಷ್ಟವಂತರು. ಫೆ. 22ರಂದು ಮಂಗಳೂರಿನ ಪುರಭವನದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. – ಪ್ರತಿಭಾ ಎಂ. ಎಲ್. ಸಾಮಗ