Advertisement

ರಾಘವೇಂದ್ರ ರಾಜ್‌ಕುಮಾರ್‌ಗೆ ಜೀವಮಾನ ಸಾಧನೆ ಪ್ರಶಸ್ತಿ

12:32 PM Oct 20, 2021 | Team Udayavani |

ಜೀವಮಾನ ಸಾಧನೆ ಪ್ರಶಸ್ತಿ ಕನ್ನಡ ಚಿತ್ರರಂಗದ ಹಿರಿಯ ನಟ ಮತ್ತು ನಿರ್ಮಾಪಕ ರಾಘವೇಂದ್ರ ರಾಜಕುಮಾರ್‌ ಅವರಿಗೆ “ದಾದಾ ಸಾಹೇಬ್‌ ಫಾಲ್ಕೆ ಎಂಎಸ್‌ಕೆ ಟ್ರಸ್ಟ್‌’ ವತಿಯಿಂದ ಜೀವಮಾನ ಸಾಧನೆ ಪ್ರಶಸ್ತಿ ದೊರೆತಿದೆ.

Advertisement

ಈ ಕುರಿತಂತೆ ತಮ್ಮ ಇನ್ಟಾ ಗ್ರಾಮ್‌ನಲ್ಲಿ ಪ್ರಶಸ್ತಿ ಸ್ವೀಕರಿಸಿದ ವೀಡಿಯೋವನ್ನು ಹಂಚಿಕೊಂಡಿರುವ ರಾಘವೇಂದ್ರ ರಾಜಕುಮಾರ್‌, “ಬೆಂಗಳೂರಿನಲ್ಲಿ ನಡೆದ ಇನ್ನೋವೆಟಿವ್‌ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ “ದಾದಾ ಸಾಹೇಬ್‌ ಫಾಲ್ಕೆ ಎಂಎಸ್‌ಕೆ ಟ್ರಸ್ಟ್‌’ ವತಿಯಿಂದ ಜೀವಮಾನ ಸಾಧನೆ ಪ್ರಶಸ್ತಿಯನ್ನು ನನಗೆ ನೀಡಿ ಗೌರವಿಸಿದ್ದಾರೆ.

ಈ ಪ್ರಶಸ್ತಿಯು ಅಪ್ಪಾಜಿ, ಅಮ್ಮ, ಕುಟುಂಬ ವರ್ಗ ಹಾಗೂ ನನ್ನೆಲ್ಲಾ ಅಭಿಮಾನಿ ದೇವರುಗಳಿಗೆ ಅರ್ಪಿಸುತ್ತಿದ್ದೇನೆ. ತುಂಬು ಹೃದಯದ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next