Advertisement

ಸಿಎಂ ಕ್ಷಮೆಯಾಚಿಸಲಿ ರಾಘವೇಂದ್ರ ಆಗ್ರಹ

11:37 PM Nov 05, 2024 | Team Udayavani |

ಬೈಂದೂರು: ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಹಗುರವಾಗಿ ಅವಹೇಳನಕಾರಿಯಾಗಿ ಹೇಳಿಕೆ ನೀಡಿ ರುವ ಸಿಎಂ ಸಿದ್ದರಾಮಯ್ಯ ತತ್‌ಕ್ಷಣ ತಮ್ಮ ಹೇಳಿಕೆಗೆ ಬೇಷರತ್‌ ಆಗಿ ಕ್ಷಮೆ ಯಾಚಿಸಬೇಕು ಹಾಗೂ ಇತರರ ಬಗ್ಗೆಹಗುರವಾಗಿ ಮಾತನಾಡುವ ಪ್ರವೃತ್ತಿ ಯನ್ನು ನಿಲ್ಲಿಸಬೇಕು ಎಂದು ಸಂಸದ ಬಿ. ವೈ. ರಾಘವೇಂದ್ರ ಆಗ್ರಹಿಸಿದ್ದಾರೆ.

Advertisement

ಮೋದಿ ಇಂದು ವಿಶ್ವ ನಾಯಕರಾಗಿದ್ದಾರೆ. ಇಡಿ ವಿಶ್ವ ಅವರನ್ನು ಗೌರವಿಸು ತ್ತಿದೆ. ವಿಶ್ವದ ಅತೀ ವೇಗವಾಗಿ ಬೆಳೆಯುವ ಆರ್ಥಿಕ ಶಕ್ತಿಯಾಗಿ ಭಾರತ ವನ್ನು ಬೆಳೆಸಿ ನಿಲ್ಲಿಸಿರುವ ಮೋದಿ ಅವರು ಕರ್ನಾಟಕ ಸರಕಾರದ ಆರ್ಥಿಕ ದುಃಸ್ಥಿತಿ ಬಗ್ಗೆ ಕಳವಳ ವ್ಯಕ್ತಪಡಿಸಿರುವುದು ಸಹಜವಾಗಿಯೇ ಇದೆ. ಅವರ ಹಿತವಚನವನ್ನು ಗೌರವಿಸುವ ಬದಲು ಅವರ ಬಗ್ಗೆ ಅವಹೇಳನಕಾರಿ ಪದ ಪ್ರಯೋಗಿಸಿರುವುದು ಸಿದ್ದರಾಮಯ್ಯ ನಂತಹ ಹಿರಿಯ ನಾಯಕರಿಗೆ ಭೂಷಣ ವಲ್ಲ ಎಂದವರು ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next