Advertisement
ರಾಗಂ ತಾನಂ ಪಲ್ಲವಿ -ವಿ. ಅನೀಶ್ ಭಟ್ಸಂಗೀತ ಪ್ರಿಯರೂ, ಭಾಷಾ ವಿಜ್ಞಾನಾದಿ ನಾನಾ ಕ್ಷೇತ್ರಗಳ ಪರಿಣಿತರೂ ಆದ ದಿ. ಸುಶೀಲಾ ಉಪಾಧ್ಯಾಯ ಇವರ ಸಂಸ್ಮರಣೆಗಾಗಿ ಅವರ ಪತಿ ಡಾ| ಯು.ಪಿ. ಉಪಾಧ್ಯಾಯ ಪ್ರಾಯೋಜಿಸಿದ ರಾಗಂ-ತಾನಂ-ಪಲ್ಲವಿ ಪ್ರಶಸ್ತಿಗೆ ಪುತ್ತೂರಿನ ವಿ. ಅನೀಶ್ ಭಟ್ ಆಯ್ಕೆಯಾಗಿದ್ದಾರೆ. ಪುತ್ತೂರಿನ ವಿ| ಕಾಂಚನ ಈಶ್ವರ ಭಟ್ ಅವರ ಶಿಷ್ಯರಾದ ಅನೀಶ್ ಪ್ರಸ್ತುತ ಚೆನ್ನೈಯ ಕಲೈಮಾಮಣಿ ವಿ| ಆರ್. ಸೂರ್ಯ ಪ್ರಕಾಶ್ ಬಳಿ ಸಂಗೀತ ಶಿಕ್ಷಣವನ್ನು ಮುಂದುವರಿಸಿದ್ದಾರೆ. ಆಕಾಶವಾಣಿ “ಬಿ’ ಹೈ ಶ್ರೇಣಿಯ ಕಲಾವಿದರಾದ ಇವರು ಹಲವಾರು ಪ್ರಶಸ್ತಿಗಳನ್ನು ಪಡೆದಿರುವುದಲ್ಲದೆ ಆರಭಿ ಸಾಂಸ್ಕೃತಿಕ ಸಂಸ್ಥೆಯನ್ನು ಸ್ಥಾಪಿಸಿ ಸಂಗೀತ ಕ್ಷೇತ್ರವನ್ನು ಬೆಳೆಸುವಲ್ಲಿ ನೆರವಾಗುತ್ತಿದ್ದಾರೆ.
ಕಲಾವಿಹಾರಿ ಈಶ್ವರಯ್ಯ ಸ್ಮರಣಾರ್ಥ ಅವರ ಪುತ್ರ ಶೈಲೇಂದ್ರ ಅನಂತಪುರ ಪ್ರಾಯೋಜಿಸಿದ ಕಲಾಪ್ರವೀಣ ಪ್ರಶಸ್ತಿಯನ್ನು ಹಿರಿಯ ಸಂಗೀತ ತಜ್ಞ ಹಾಗೂ ವಿಮರ್ಶಕ ಪ್ರೊ| ವಿ| ಅರವಿಂದ ಹೆಬ್ಟಾರರಿಗೆ ನೀಡಲಾಗುವುದು. ಸಂಗೀತದ ವಿವಿಧ ಪ್ರಕಾರಗಳ ಕುರಿತಾಗಿ ನಿರಂತರ ಅಧ್ಯಯನ ನಡೆಸುವುದಲ್ಲದೆ ಉತ್ತಮ ರಾಗ ಸಂಯೋಜಕರಾಗಿ, ಲೇಖಕರಾಗಿ ಸಂಪಾದಕರಾಗಿ ಸಂಗೀತವನ್ನು ಎತ್ತರಕ್ಕೆ ಕೊಂಡೊಯ್ಯುವಲ್ಲಿ ಗುರುತಿಸಿಕೊಂಡಿರುವವರು ಪ್ರೊ| ವಿ| ಅರವಿಂದ ಹೆಬ್ಟಾರ್. ಗೌರವಾರ್ಪಣೆ – ಡಾ| ಎನ್. ಟಿ. ಭಟ್
ರಾಗಧನ ಕೊಡಮಾಡುವ ಗೌರವಾರ್ಪಣೆಗೆ ಬಹುಭಾಷಾ ತಜ್ಞರಾದ ಡಾ| ನೀರ್ಕಜೆ ತಿರುಮಲೇಶ್ವರ ಭಟ್ ಆಯ್ಕೆ ಯಾ ಗಿ ದ್ದಾರೆ. ಇಂಗ್ಲಿಷ್, ಜರ್ಮನ್ ಹಾಗೂ ಕನ್ನಡ ಭಾಷೆಗಳಲ್ಲಿ ಬಹಳಷ್ಟು ಕೆಲಸ ಮಾಡಿರುವರು. ಸಾಹಿತ್ಯ, ವ್ಯಾಕರಣ, ಕಥನ, ಕಾವ್ಯ ಸಂಶೋಧನೆ, ಪತ್ರಿಕಾ ಸಂಪಾದನೆ ಹಾಗೂ ಭಾಷಾಂತರ ಕ್ಷೇತ್ರಕ್ಕೆ ಮಹತ್ತರ ಕೊಡುಗೆ ನೀಡಿದ್ದಾರೆ. ಹವ್ಯಾಸಿ ಛಾಯಾಗ್ರಹಣದ ಮೂಲಕ ಸಂಗೀತ ಹಾಗೂ ಸಾಹಿತ್ಯ ಚಟುವಟಿಕೆಗಳನ್ನು ದಾಖಲಿಸುತ್ತಿರುವ ಹಿರಿಯರು.
Related Articles
Advertisement