Advertisement
ನಡಾಲ್-ಕಿರ್ಗಿಯೋಸ್ ಸ್ಪರ್ಧೆ ತೀವ್ರ ಪೈಪೋಟಿಯಿಂದ ಕೂಡಿತ್ತು. ಅಷ್ಟೇ ರೋಚಕವಾಗಿತ್ತು. “ಬಾಸ್ಕೆಟ್‌ಬಾಲ್ ಪ್ರಿಯ’ ಕಿರ್ಗಿಯೋಸ್ ತವರಿನಂಗಳ ಹಾಗೂ ಅಭಿಮಾನಿಗಳ ಭರ್ಜರಿ ಬೆಂಬಲದೊಂದಿಗೆ ಮುನ್ನುಗ್ಗಿದರು. ಆದರೆ ನಡಾಲ್ ಮುಂದೆ ಕಾಂಗರೂ ಟೆನಿಸಿಗನ ಆಟ ಸಾಗಲಿಲ್ಲ.
“ಲಾ ಲ್ಯಾಕರ್Õ’ ಟೀ ಶರ್ಟ್ ಧರಿಸಿ ಆಡಲಿಳಿದಿದ್ದರು. ಈ ಮುಖಾಮುಖೀಯನ್ನು 6-3, 3-6, 7-6 (8-6), 7-6 (7-4) ಅಂತರದಿಂದ ಗೆದ್ದ ರಫೆಲ್ ನಡಾಲ್ ಇನ್ನು ಡೊಮಿನಿಕ್ ಥೀಮ್ ವಿರುದ್ಧ ಸೆಣಸಲಿದ್ದಾರೆ. ಆಸ್ಟ್ರಿಯಾದ ಡೊಮಿನಿಕ್ ಥೀಮ್ ಫ್ರಾನ್ಸ್‌ನ ಗೇಲ್ ಮಾನ್‌ಫಿಲ್ಸ್ ವಿರುದ್ಧ 6-2, 6-4, 6-4 ಅಂತರದ ಸುಲಭ ಜಯ ಸಾಧಿಸಿದರು.
Related Articles
ಜರ್ಮನಿಯ 7ನೇ ಶ್ರೇಯಾಂಕದ ಅಲೆಕ್ಸಾಂಡರ್ ಜ್ವೆರೇವ್ ಮತ್ತು ಸ್ವಿಜರ್‌ಲ್ಯಾಂಡಿನ ಸ್ಟಾನಿಸ್ಲಾಸ್ ವಾವ್ರಿಂಕ ಇನ್ನೊಂದು ಕ್ವಾರ್ಟರ್ ಫೈನಲ್‌ನಲ್ಲಿ ಸೆಣಸಲಿದ್ದಾರೆ.
Advertisement
ಅಲೆಕ್ಸಾಂಡರ್ ಜ್ವೆರೇವ್ 6-4, 6-4, 6-4 ಅಂತರದಿಂದ ರಶ್ಯದ ಆ್ಯಂಡ್ರೆ ರುಬ್ಲೇವ್ ಅವರನ್ನು ಪರಾಭವಗೊಳಿಸಿದರು. ಜ್ವೆರೇವ್ “ಮೆಲ್ಬರ್ನ್ ಪಾರ್ಕ್’ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದು ಇದೇ ಮೊದಲು. ವಾವ್ರಿಂಕ ರಶ್ಯದ ಮತ್ತೋರ್ವ ಆಟಗಾರ ಡ್ಯಾನಿಲ್ ಮೆಡ್ವಡೇವ್ ಅವರನ್ನು ಭಾರೀ ಹೋರಾಟದ ಬಳಿಕ 6-2, 2-6, 4-6, 7-6 (7-2), 6-2ರಿಂದ ಹಿಮ್ಮೆಟ್ಟಿಸಿದರು. ಹಾಲೆಪ್, ಮುಗುರುಜಾ ಮುನ್ನಡೆ
ವನಿತಾ ಸಿಂಗಲ್ಸ್‌ನಲ್ಲಿ ಸಿಮೋನಾ ಹಾಲೆಪ್, ಗಾರ್ಬಿನ್ ಮುಗುರುಜಾ, ಅನಾಸ್ತಾಸಿಯಾ ಪಾವುÉಚೆಂಕೋವಾ ಮತ್ತು ಅನೆಟ್ ಕೊಂಟವೀಟ್ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಇವರು ಕ್ರಮವಾಗಿ ಎಲಿಸ್ ಮಾರ್ಟೆನ್ಸ್, ಕಿಕಿ ಬರ್ಟೆನ್ಸ್, ಆ್ಯಂಜೆಲಿಕ್ ಕೆರ್ಬರ್, ಐಗಾ ಸ್ವಿಯಾಟೆಕ್ ವಿರುದ್ಧ ಗೆಲುವು ಸಾಧಿಸಿದರು. ಕ್ವಾರ್ಟರ್ ಫೈನಲ್‌ನಲ್ಲಿ ಮುಗುರುಜಾ – ಪಾವುÉಚೆಂಕೋವಾ , ಹಾಲೆಪ್-ಕೊಂಟವೀಟ್ ಪರಸ್ಪರ ಎದುರಾಗಲಿದ್ದಾರೆ.