Advertisement

ರಫೇಲ್‌: ಕಳವಲ್ಲ, ನಕಲು ಪ್ರತಿ

12:30 AM Mar 09, 2019 | |

ಹೊಸದಲ್ಲಿ: ರಫೇಲ್‌ ಒಪ್ಪಂದಕ್ಕೆ ಸಂಬಂಧಿಸಿದ 3 ಮಹತ್ವದ ದಾಖಲೆಗಳು ರಕ್ಷಣಾ ಸಚಿವಾಲಯದಿಂದ ಕಳುವಾಗಿವೆ ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದ ಅಟಾರ್ನಿ ಜನರಲ್‌ ಕೆ.ಕೆ. ವೇಣುಗೋಪಾಲ್‌, ಶುಕ್ರ ವಾರ ಇದಕ್ಕೆ ವ್ಯತಿರಿಕ್ತ ಹೇಳಿಕೆ ನೀಡಿದ್ದಾರೆ. ಅಸಲಿಗೆ, ರಕ್ಷಣಾ ಇಲಾಖೆಯಿಂದ ಆ ದಾಖಲೆಗಳು ಕಳವಾಗಿಲ್ಲ. ಆದರೆ, ಅವುಗಳ ಫೋಟೋ ಕಾಪಿಯನ್ನು ಫಿರ್ಯಾದು ದಾರರು ತಮ್ಮ ದಾಖಲೆಗಳೊಂದಿಗೆ ಕೋರ್ಟ್‌ಗೆ ಸಲ್ಲಿಸಿದ್ದಾರೆ. ಆದರೆ, ಇದೂ ಅಧಿಕೃತ ರಹಸ್ಯ ಕಾಯ್ದೆಯ ಉಲ್ಲಂಘನೆ ಎಂದು ಅವರು ತಿಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸರಕಾರದ ಕೆಲವು ಹಿರಿಯ ಅಧಿಕಾರಿಗಳು, ಕೋರ್ಟ್‌ನಲ್ಲಿ ಅಟಾರ್ನಿ ಜನರಲ್‌ “ಕಳವು’ ಎಂಬ ಪದಪ್ರಯೋಗದ ಬದಲು ಬೇರೆ ಪದವನ್ನು ಬಳಸಬಹುದಿತ್ತು ಎಂದಿದ್ದಾರೆ. 

Advertisement

ಇದೇ ವೇಳೆ, “ದ ಹಿಂದೂ’ ಪತ್ರಿಕೆ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದ ಎಜಿ ವಿರುದ್ಧ ಭಾರತೀಯ ದಿನಪತ್ರಿಕೆಗಳ ಸೊಸೈಟಿ (ಐಎನ್‌ಎಸ್‌) ಕಿಡಿಕಾರಿದೆ. ಪತ್ರಿಕೆಗಳಿಗೆ ವರದಿ ಮಾಡುವ ಸ್ವಾತಂತ್ರ್ಯ ಕಿತ್ತುಕೊಳ್ಳಬಹುದಾದ ಅಧಿಕೃತ ರಹಸ್ಯ ಕಾಯ್ದೆಯೇ ರದ್ದಾಗಬೇಕು ಎಂದು ಆಗ್ರಹಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next