ಹೊಸದಿಲ್ಲಿ: ಬೂದಿಮುಚ್ಚಿದ ಕೆಂಡದಂತಿರುವ ರಫೇಲ್ ಕೂಪದಲ್ಲಿ ಮತ್ತೆ ಬೆಂಕಿ ಭುಗಿಲೆದ್ದಿದೆ. ಫ್ರಾನ್ಸ್‌ನ ಹೆಸರಾಂತ ದೈನಿಕ “ಲೆ ಮೊಂಡೆ’, ಭಾರತ ಸರಕಾರವು ನವೀಕರಣಗೊಂಡ ರಫೇಲ್ ಒಪ್ಪಂದವನ್ನು ಪ್ರಕಟಿಸುತ್ತಿದ್ದಂತೆ, ಅತ್ತ, ಫ್ರಾನ್ಸ್ ನಲ್ಲಿ ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಕಮ್ಯೂನಿಕೇಶನ್ ಸಂಸ್ಥೆಯ ಮೇಲೆ ಅಲ್ಲಿನ ಸರಕಾರ ವಿಧಿಸಿದ್ದ 143.7 ಮಿಲಿಯನ್ ಪೌಂಡುಗಳಷ್ಟು (ಅಂದಾಜು 1,121 ಕೋಟಿ ರೂ.) ತೆರಿಗೆಯನ್ನು ಮನ್ನಾ ಮಾಡಲಾಗಿದೆ ಎಂಬ ಸ್ಫೋಟಕ ವಿಚಾರವನ್ನು ಹೊರಹಾಕಿದೆ. ಇದು ಈ ವಿಚಾರದಲ್ಲಿ ಮತ್ತೂಂದು ಸುತ್ತಿನ ಪರ- ವಿರೋಧ ಚರ್ಚೆಗೆ ನಾಂದಿ ಹಾಡಿದೆ.
ರಿಲಯನ್ಸ್ ನಿರಾಕರಣೆ: ಪತ್ರಿಕೆಯ ವರದಿಯನ್ನು ನಿರಾಕರಿಸಿರುವ ರಿಲಯನ್ಸ್, “ಫ್ರಾನ್ಸ್‌ನಲ್ಲಿ ತನ್ನ ಮೇಲಿದ್ದ ತೆರಿಗೆಯನ್ನು ಕಾನೂನು ಚೌಕಟ್ಟಿನ ವ್ಯಾಪ್ತಿಯಲ್ಲೇ ಕಟ್ಟಲಾಗಿದೆ. ಇದರಲ್ಲಿ ಯಾವುದೇ ಕೃತ್ರಿಮತೆ ಅಡಗಿಲ್ಲ’ ಎಂದಿದೆ. ಇನ್ನೊಂದೆಡೆ, ಹೊಸದಿಲ್ಲಿಯಲ್ಲಿರುವ ಫ್ರಾನ್ಸ್‌ನ ರಾಯಭಾರ ಕಚೇರಿಯಿಂದಲೂ ಸ್ಪಷ್ಟನೆ ಹೊರಬಿದ್ದಿದೆ. ಫ್ರಾನ್ಸ್‌ನಲ್ಲಿರುವ ರಿಲಯನ್ಸ್ ಕಮ್ಯೂನಿ ಕೇಶನ್ ಕಂಪೆನಿಯ ಮೇಲಿದ್ದ ತೆರಿಗೆ ಮನ್ನಾ ನಿರ್ಧಾರವನ್ನು ಫ್ರಾನ್ಸ್‌ನ ಸರಕಾರ ಮತ್ತು ಅಲ್ಲಿನ ಕಾನೂನಿಗೆ ಅನುಗುಣವಾಗಿಯೇ ಕೈಗೊಳ್ಳಲಾಗಿದೆ. ಇದ ರಲ್ಲಿ ಯಾವುದೇ ರಾಜಕೀಯ ಹಸ್ತ ಕ್ಷೇಪವಿಲ್ಲ ಎಂದು ಹೇಳಿದೆ.
ಕಾಂಗ್ರೆಸ್ ಪ್ರತಿಕ್ರಿಯೆ: ಹೊಸ ಬೆಳವಣಿಗೆ ಬಗ್ಗೆ ಕಾಂಗ್ರೆಸ್ ಪ್ರತಿಕ್ರಿಯಿಸಿದ್ದು, “ಮೋದಿಯವರ ಕೃಪಾಕಟಾಕ್ಷದಿಂದಲೇ ರಿಲಯನ್ಸ್ ಕಂಪೆನಿಯ ಮೇಲಿನ ತೆರಿಗೆ ಮನ್ನಾ ಆಗಿರುವುದು ಇದರಿಂದ ಸ್ಪುಟ ವಾಗಿದೆ’ ಎಂದಿದೆ. “”ರಫೇಲ್ ಹೆಸರಿ ನಲ್ಲಿ ಅಂಬಾನಿ ಹಾಗೂ ಫ್ರಾನ್ಸ್ ನಡುವೆ ಮೋದಿಯವರು “ದಲ್ಲಾಳಿ’ಯಂತೆ ಕೆಲಸ ಮಾಡಿರುವುದು ಸ್ಪಷ್ಟವಾಗಿದೆ. ಹೊಸದಾಗಿ ಸೃಷ್ಟಿಯಾದ ರಿಲಯನ್ಸ್ ಡಿಫೆನ್ಸ್ ಕಂಪೆನಿಗೆ ರಫೇಲ್ ಒಪ್ಪಂದ ನೀಡುವ ಮೂಲಕ ತಮ್ಮ ಸ್ನೇಹಿತ ಅನಿಲ್ ಅಂಬಾನಿಗೆ ಮೋದಿ ಲಾಭ ಮಾಡಿಕೊಟ್ಟಿದ್ದಾರೆ” ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುಜೇವಾಲ ಹೇಳಿದ್ದಾರೆ.
ಹಿಂದಿನ ರಫೇಲ್ ಒಪ್ಪಂದ ನವೀಕರಣಗೊಳಿಸುವ ಮೂಲಕ ಮೋದಿಯವರು ಜನರ ತೆರಿಗೆ ದುಡ್ಡನ್ನು ವ್ಯರ್ಥ ಗೊಳಿಸಿ ದ್ದಾರೆ. ಅಲ್ಲದೆ, ಅನಿಲ್ ಅಂಬಾನಿ ಯಂಥ ಬಂಡವಾಳ ಶಾಹಿಗಳ ತೆರಿಗೆ ಮನ್ನಾಕ್ಕೂ ಸಹಕರಿಸಿದ್ದಾರೆ.
ಸೀತಾರಾಂ ಯೆಚೂರಿ, ಸಿಪಿಎಂ ನಾಯಕ