Advertisement

ಮೇ 10ಕ್ಕೆ ರಫೇಲ್ ಪ್ರಕರಣ ವಿಚಾರಣೆ

06:01 AM May 07, 2019 | Team Udayavani |

ಹೊಸದಿಲ್ಲಿ: ರಫೇಲ್ ಡೀಲ್ ಕುರಿತ ಸುಪ್ರೀಂಕೋರ್ಟ್‌ ತೀರ್ಪು ಮರು ಪರಿಶೀಲನೆ ಅರ್ಜಿ ಮತ್ತು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧದ ದೂರುಗಳನ್ನು ಒಟ್ಟಿಗೆ ಮೇ 10 ರಂದು ವಿಚಾರಣೆ ನಡೆಸಲು ಸುಪ್ರೀಂಕೋರ್ಟ್‌ ನಿರ್ಧರಿಸಿದೆ. ಚೌಕಿದಾರ್‌ ಚೋರ್‌ ಹೈ ಎಂದು ಪ್ರಧಾನಿ ಮೋದಿಯನ್ನು ಸುಪ್ರೀಂ ಕೋರ್ಟ್‌ ಕರೆದಿದೆ ಎಂದು ರಾಹುಲ್ ಆರೋಪಿಸಿದ್ದರ ವಿರುದ್ಧದ ದೂರನ್ನೂ ರಫೇಲ್ ಮೂಲ ಅರ್ಜಿಯೊಂದಿಗೆ ಸೇರಿಸಲಾಗಿದೆ. ಆರಂಭದಲ್ಲಿ ಎರಡೂ ಅರ್ಜಿಗಳನ್ನು ಪ್ರತ್ಯೇಕ ದಿನ ವಿಚಾರಣೆಗೆ ನಿಗದಿಸಲಾಗಿತ್ತು. ಆದರೆ ಈ ಬಗ್ಗೆ ನ್ಯಾಯಪೀಠದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next